ಭ್ಯವಾ ಗೌಡ ಮೋಸದಾಟಕ್ಕೆ ಕಿಚ್ಚ ಸುದೀಪ್ ಗರಂ, ರೀ ಅವಳ ವಿಷ ಇಲ್ಲಿ ಬೇಡ
Jul 2, 2025, 17:21 IST
|

ಸುದೀಪ್ ಫೈನಲೀ ಬಿಗ್‌ಬಾಸ್‌ಗೆ ಮರಳಿದ್ದಾರೆ. ಅಲ್ಲಿಗೆ ಕಳೆದೊಂದು ವರ್ಷದಿಂದ ಸುದೀಪ್ ಫ್ಯಾನ್ಸ್ ಅನ್ನು ಕಂಗೆಡಿಸಿದ್ದ ಸುದ್ದಿ ಸುಳ್ಳಾಗಿದೆ. 'ಮುಂದಿನ ಬಿಗ್‌ಬಾಸ್‌ನಲ್ಲಿ ನಾನಿರಲ್ಲ' ಅಂದಿದ್ದ ಸುದೀಪ್ ಮತ್ತೆ ಬಿಗ್‌ಬಾಸ್‌ಗೆ ಯಾಕೆ ಬಂದರು, ಬಂದದ್ದಷ್ಟೇ ಅಲ್ಲ, ಯಾಕೆ ನಾಲ್ಕು ವರ್ಷದ ಅಗ್ರಿಮೆಂಟಿಗೂ ಸೈನ್ ಮಾಡಿದರು ಅನ್ನೋ ಪ್ರಶ್ನೆಗೆ ಸುದೀಪ್ ಪ್ರೆಸ್‌ಮೀಟ್‌ನಲ್ಲಿ ಉತ್ತರ ಕೊಟ್ಟರೂ ಜನರ ಕನ್‌ಫ್ಯೂಜನ್ ಕ್ಲಿಯರ್ ಆಗಿಲ್ಲ. ಅಷ್ಟಕ್ಕೂ ಸುದೀಪ್ ಹೇಳಿದ್ದು ಏನಂದ್ರೆ, 'ಬಿಗ್ಬಾಸ್ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ.
ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್ಬಾಸ್ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ' ಅಂತ ಸುದೀಪ್ ಹೇಳಿದ್ದಾರೆ. ಇನ್ನು ಬಿಗ್ಬಾಸ್ ಮನೆಗೆ ಬರೋವರಿಗೆ ರೂಲ್ಸ್ ಇರತ್ತೆ ಅದನ್ನು ನನ್ನನ್ನೂ ಸೇರಿಸಿ ಯಾರೂ ಕೂಡ ಮುರಿಯುವಂತಿಲ್ಲ ಎಂದಿದ್ದಾರೆ.
ಅಲ್ಲಿಗೆ ಇಂಡೈರೆಕ್ಟ್ ಆಗಿ ಭವ್ಯ ಗೌಡ ಅವರಿಗೆ ಟಾಂಗ್ ನೀಡಿದ್ದಾರೆ.ಇದ್ಯಾಕೋ ಅಡ್ಡಗೋಡೆ ಮಧ್ಯ ದೀಪ ಇಟ್ಟಂಗಿದ್ಯಲ್ಲಾ ಅನ್ನುವಾಗಲೇ, ಸುದೀಪ್ ಅವರ ದೊಡ್ಡ ಬಜೆಟ್ ಸಿನಿಮಾದ ಕಥೆ ಲೀಕ್ ಆಗಿದ್ಯಂತೆ ಅನ್ನೋ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಆ ಸಿನಿಮಾ ಯಾವದು ಅಂದರೆ ಸದ್ಯ ಸುದೀಪ್ ಶೂಟ್ ಮಾಡುತ್ತಿರುವ ಬಿಲ್ಲರಂಗಭಾಷ ಅನ್ನೋದು ಒಂದಿಷ್ಟು ಜನರ ಸ್ಪಷ್ಟ ಮಾತು. ಅರೆ, ಅಷ್ಟೊಂದು ಜನರಿಗೆ ವಿಷಯ ಗೊತ್ತಾ ಅಂತ ನೀವು ಕೇಳಬಹುದು. ಇಲ್ಲೇ ಇರೋದು ಮಜಾ.
ನಿಮಗೆಲ್ಲ ತಿಳಿದಿರೋ ಹಾಗೆ ಈಗಾಗಲೇ 'ಬಿಲ್ಲ ರಂಗ ಬಾಷ' ಚಿತ್ರದ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದಷ್ಟು ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಚಿತ್ರತಂಡ ಯೂರೋಪ್‌ಗೆ ಹೊರಟು ನಿಂತಿದೆ. ಅದಕ್ಕಾಗಿ ತಯಾರಿಯೂ ನಡೀತಿದೆ.ಸುದೀಪ್ ಅವರು ಮತ್ತೆ ನಿರೂಪಣೆ ಮಾಡುವುದಿಲ್ಲ ಎಂದು ಕಳೆದ ಸೀಸನ್ ವೇಳೆಯೇ ಘೋಷಿಸಿದ್ದರು. ಆಗ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸುದೀಪ್ ಅವರೇ ಈ ಸೀಸನ್ ನಡೆಸಿಕೊಡಲಿದ್ದಾರೆ. ಉಳಿದೆಲ್ಲ ಪ್ರಶ್ನೆಗಳಿಗೆ ಪ್ರೆಸ್‌ಮೀಟ್‌ನಲ್ಲೇ ಸ್ಪಷ್ಟ ಉತ್ತರ ಸಿಕ್ಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.