ಬಿಗ್ ಬಾಸ್ ಫೈನಲ್ ಗೆ ಕಾತಿ೯ಕ್ ಎಂಟ್ರಿ ಪಕ್ಕಾ ಎಂದ ಕಿಚ್ಚ ಸುದೀಪ್, ವಿನಯ್ ಗೌಡ ಹಾಗೂ ಸಂಗೀತಾ ಶಾಕ್
ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ? ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಸಿಕ್ಕ ಅಡುಗಡೆ ಅಷ್ಟು ಸ್ಪೆಷಲ್ ಆಗಿದ್ದು ಅವರೇ ಆಶ್ಚರ್ಯ ಪಡುವಂತಿದೆ.
ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ ಕಿಚ್ಚ ಸುದೀಪ್. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ.
ಇದು ಸರ್ಪೈಸ್. ಈವತ್ತಿನ ಅಡುಗೆ, ಕಿಚ್ಚನ ಕೈಯಡುಗೆ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೊದಲ್ಲಿ ಸೆರೆಯಾಗಿವೆ. ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಊಟದ ಜೊತೆಗೆ ಪ್ರತಿಯೊಬ್ಬರಿಗೂ ಒಂದೊಂದು ಲೆಟರ್ ಬಂದಿದೆ. ಇದರಲ್ಲಿ ಸ್ಪರ್ಧಿಗಳಿಗೆ ಸಣ್ಣ ಕಿವಿ ಮಾತಿದೆ.ಆ ಪ್ರಕಾರ ಪ್ರತಿಯೊಬ್ಬರೂ ತಮ್ಮ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಓದಿದ್ದಾರೆ. ಎಲ್ಲರಿಗಿಂತ ಕಾರ್ತಿಕ್ ಹೆಚ್ಚು ಸಂತೋಷವಾಗಿದ್ದಾರೆ.
ಅದಕ್ಕೊಂದು ಕಾರಣ ಇದೆ. ಅದೇನೆಂದರೆ ಹೆಡ್ ಶೇವ್ ಮಾಡಿ ಆಟದ ಮೇಲಿರೋ ನಿಮ್ಮ ಡಿಸಿಶನ್ ತೋರಿಸಿದ್ರಿ, ಫೋಕಸ್ ಸರಿ ಮಾಡಿ. ಫೈನಲಿಸ್ಟ್ನಲ್ಲಿ ನಿಮ್ಮ ಹೆಸರು ಸೇವ್ ಮಾಡ್ಕೊಳಿ ಅಂತ ಬರೆದಿದ್ದಾರೆ.ಈ ಪತ್ರ ಓದಿದ ನಂತರ ಕಾರ್ತಿಕ್ ಖುಷಿಗೆ ಪಾರವೇ ಇಲ್ಲ ಎಂಬಂತಾಗಿದೆ. ಮನೆಯವರಿಗೂ ಈ ಪತ್ರ ತೋರಿಸಿ ಅವರು ಕುಣಿದು ಕುಪ್ಪಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಒಬ್ಬ ಸ್ಪರ್ಧಿ ಫೈನಲ್ ಪಂದ್ಯದಲ್ಲಿ ಫಿಕ್ಸ್ ಅಂತಾಯಿತು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.