ದರ್ಶನ್ ಜೊತೆ ಸೇರಿ ಕಾಟೇರ ಸಿನಿಮಾ ವೀಕ್ಷಣೆ ಮಾಡಿದ ಕಿಚ್ಚ ಸುದೀಪ್, ಮತ್ತೆ ಒಂದಾದ ಕುಚಿಕು ಗೆಳೆಯರು

 | 
Jd

ದಚ್ಚು ಕಿಚ್ಚನ ದೋಸ್ತಿ ಇಂದು ನಿನ್ನೆಯದಲ್ಲ ಆದರೂ ಸಣ್ಣ ಕಾರಣದಿಂದ ಅವರಿಬ್ಬರ ನಡುವೆ ವೈಮನಸ್ಸು ಮೂಡಿತ್ತು. ಕೆಲವು ದಿನಗಳಿಂದ ಕಾಟೇರ ಸಿನಿಮಾವನ್ನು ಕಿಚ್ಚ ಸುದೀಪ್  ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ.

ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. 

ಕಾಟೇರ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರೇ ಸುದೀಪ್ ಅವರನ್ನು ಸೆಲೆಬ್ರಿಟಿ ಶೋಗೆ ಆಹ್ವಾನಿಸಿದ್ದು ಅದಕ್ಕೆ ಕಿಚ್ಚ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದು ಕಾಟೇರ ಸಿನಿಮಾ ನೋಡುವುದಾಗಿ ಹೇಳಿದ್ದರಂತೆ. ಇದನ್ನು ಸುಧೀರ್ ಅವರೇ ಹೇಳಿದ್ದರು. ಒಂದು ಕಡೆ ಸೆಲೆಬ್ರಿಟಗಳು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಗಳಿಕೆಯೂ ಭರ್ಜರಿಯಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿದ್ದರು. 

ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಬರೆದುಕೊಂಡಿದ್ದರು. ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. 

ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.