ಈ ವಾರದ ಪಂಚಾಯಿತಿಗೆ ಕಿಚ್ಚ ಸುದೀಪ್ ಬತಿ೯ಲ್ಲ, ಮತ್ಯಾರು ಬತಾ೯ರೆ ಗೊತ್ತಾ
Oct 16, 2024, 16:30 IST
|
ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸಾಗುತ್ತಿದೆ. ಕಳೆದ 10 ಸೀಸನ್ ಗಳಲ್ಲಿ ಬಿಗ್ ಬಾಸ್ ನಿರೂಪಕ ಯಾರಾಗ್ತಾರೆ ಎನ್ನುವ ಪ್ರಶ್ನೆಯೇ ಮೂಡಿರಲಿಲ್ಲ. ಆದರೆ 12ನೇ ಸೀಸನ್‌ನಲ್ಲಿ ಮುಂದೆ ಬಿಗ್ ಬಾಸ್ ಯಾರು ನಡೆಸಿಕೊಡುತ್ತಾರೆ ಎನ್ನುವ ಪ್ರಶ್ನೆ ಈಗಿನಿಂದಲೇ ಕಾಡಲು ಶುರುವಾಗಿದೆ. ಏಕೆಂದರೆ ಈಗಾಗಲೇ ಕಿಚ್ಚ ಸುದೀಪ್ ಮುಂದಿನ ಸಲ ಬಿಗ್ಬಾಸ್ ನಿರೂಪಣೆಗೆ ನಾನಿಲ್ಲವೆಂದು ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣವೆಂದರೆ ಅದು ಕಿಚ್ಚ ಸುದೀಪ್ ಎಂದು ಕಣ್ಮುಚ್ಚಿ ಹೇಳಬಹುದು. ಅಷ್ಟರಮಟ್ಟಿಗೆ ಬಾದ್ ಷಾ ಕಿರುತೆರೆ ವೀಕ್ಷಕರ ಮನೆ- ಮನವನ್ನು ಗೆದ್ದುಕೊಂಡು ಬಿಟ್ಟಿದ್ದಾರೆ.ಆದರೆ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ಬಿಗ್ ಬಾಸ್ -11 ನನ್ನ ಕೊನೆಯ ಸೀಸನ್ ವೆಂದು ಹೇಳಿರುವುದು ಸಾವಿರಾರು ವೀಕ್ಷಕರ ಹೃದಯ ಚೂರಾಗುವಂತೆ ಮಾಡಿದೆ.
ಕಿಚ್ಚ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ʼಬಿಗ್ ಬಾಸ್ ಕನ್ನಡʼದ ರೂವಾರಿ ಮುಂದೆ ಯಾರು ಆಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಕೆಳಗಿನ ಹೆಸರುಗಳು ನಿರೂಪಕರ ರೇಸ್ ನಲ್ಲಿ ಮುಂಚೂಣಿಯಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಮುಂದಿನ ವಾರ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಿಲ್ಲ.
ಹೌದು ಕೊನೆಯ ಹಂತದಲ್ಲಿರುವ ಮಾಕ್ಸ ಸಿನಿಮಾದ ಶೂಟಿಂಗ್ ಗೆ ನಟ ಸುದೀಪ್ ಹೋಗುತ್ತಿರುವ ಕಾರಣ ಮುಂದಿನ ಶನಿವಾರ ಅವರು ಬಿಗ್ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಅವರ ಬದಲಾಗಿ ಕಾರ್ಯಕ್ರಮವನ್ನು ಹಿಂದಿನ ಸಂಚಿಕೆಯ ಬಿಗ್ಬಾಸ್ ವಿನ್ನರ್ ನಟ ವಿಜಯ್ ರಾಘವೇಂದ್ರ ಅವರು ನಡೆಸಿಕೊಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.