ಕಿಚ್ಚ ಸುದೀಪ್ ನೆಚ್ಚಿನ ಸ್ಪರ್ಧಿ ಆಸ್ಪತ್ರೆಗೆ ದಾಖಲು, ಇವತ್ತು ನಾಳೆ ಬದುಕಬಹುದು ಎಂದ ಡಾಕ್ಟರ್
Feb 4, 2025, 16:47 IST
|

ಉತ್ತರ ಕರ್ನಾಟದ ಗೋಲ್ಡ್ ಸುರೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಸ್ಪರ್ಧಿಸಿದ ಬಳಿಕ ರಾಜ್ಯಾದ್ಯಂತ ಸಖತ್ ಫೇಮಸ್ ಆದರು. ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿರುವ ಅವರ ಫೋಟೋ ಹಾಗೂ ವಿಡಿಯೋ ಲಭ್ಯವಾಗಿದೆ. ಹಾಗಂತ, ಅವರನ್ನು ಇಷ್ಟಪಡುವವರು ಆತಂಕಪಡುವ ಅವಶ್ಯಕತೆ ಇಲ್ಲ.
ಯಾಕೆಂದರೆ, ತುಂಬ ಗಂಭೀರವಾದ ಆರೋಗ್ಯ ಸಮಸ್ಯೆ ಏನಿಲ್ಲ. ಸದ್ಯ ಸುರೇಶ್ ಅವರು ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಗೋಲ್ಡ್ ಸುರೇಶ್ ಅವರ ಕಾಲಿಗೆ ಪೆಟ್ಟಾಗಿತ್ತು. ಟಾಸ್ಕ್ ಆಡುವಾಗ ಅವರು ಪೆಟ್ಟು ಮಾಡಿಕೊಂಡಿದ್ದರು. ಅದರಿಂದಾಗಿ ಅವರಿಗೆ ಕೆಲವು ಟಾಸ್ಕ್ಗಳಲ್ಲಿ ಹಿನ್ನಡೆ ಆಗಿತ್ತು.
ಕೆಲವರು ಗೋಲ್ಡ್ ಸುರೇಶ್ ಅವರ ಅನಾರೋಗ್ಯವನ್ನೇ ಮುಂದಿಟ್ಟುಕೊಂಡು ಲೇವಡಿ ಮಾಡಿದ್ದರು. ಆದರೂ ಕೂಡ ಸುರೇಶ್ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದರು.ಕಾಲು ನೋವು ಹೆಚ್ಚಾಗಿದ್ದರಿಂದ ಸುರೇಶ್ ಅವರಿಗೆ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಡಾಕ್ಟರ್ ಸಲಹೆ ಮೇರೆಗೆ ಗೋಲ್ಡ್ ಸುರೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ.
ಎರಡು ದಿನಗಳ ಬಳಿಕ ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ನಿರೀಕ್ಷೆ ಇದೆ. ಬಳಿಕ ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.ಬಿಗ್ ಬಾಸ್ ಆಟದಲ್ಲಿ ಗೋಲ್ಡ್ ಸುರೇಶ್ ಅವರು ಸಾಕಷ್ಟು ಪೈಪೋಟಿ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ತೊರೆಯಬೇಕಾಯಿತು.
ಅವರ ಆರ್ಥಿಕ ವ್ಯವಹಾರಗಳಲ್ಲಿ ಏರುಪೇರು ಆಗಿದ್ದರಿಂದ ಅದನ್ನು ನಿಭಾಯಿಸಲು ಅವರ ಕುಟುಂಬದವರಿಗೆ ಕಷ್ಟ ಆಗಿತ್ತು. ಹಾಗಾಗಿ ಸುರೇಶ್ ಅವರು ಅರ್ಧದಲ್ಲೇ ಬಿಗ್ ಬಾಸ್ ಶೋ ತೊರೆದಿದ್ದರು. ಆ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಹೋಗಲು ಅವರು ಬಯಸಿದ್ದರು. ಆದರೆ ಫಿನಾಲೆ ಹತ್ತಿರ ಇದ್ದಿದ್ದರಿಂದ ಅವರಿಗೆ ಸೆಕೆಂಡ್ ಚಾನ್ಸ್ ನೀಡಲಿಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.