ಅಂಬಾನಿ ಮಗನ ಮದುವೆಗೆ ಕಿಚ್ಚನಿಗೆ ಆಮಂತ್ರಣ ಕೊಟ್ಟಿಲ್ಲ ಯಾ ಕೆ;

 | 
Je

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ  ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌  ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು.  ನಟ ಯಶ್‌- ಪತ್ನಿ ರಾಧಿಕಾ ಪಂಡಿತ್‌ ಸಹ ಭಾಗಿ ಆಗಿದ್ದರು. 

ಇದಾದ ಬಳಿಕ ಬಹು ಚರ್ಚೆಯಾಗಿದ್ದು, ಸುದೀಪ್‌ ಅವರಿಗೆ ಆಹ್ವಾನ ಇತ್ತ?ಎಂಬುದು. ಈಗ ಸುದೀಪ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೊದಲ್ಲಿ ಅವರು ಅಂಬಾನಿ ಮನೆಯ ಮದುವೆಗೆ ಏಕೆ ಹೋಗಿಲ್ಲ ಎಂಬುದನ್ನು ವಿವರಿಸಿದ್ದಾರೆ ಎಂದು ಫ್ಯಾನ್​ ಪೇಜ್​ಗಳು ಹಾಕಿವೆ. ಆದರೆ ಅಸಲಿ ವಿಚಾರ ಏನು? 

ವಿಡಿಯೊದಲ್ಲಿ ಸುದೀಪ್‌ ಹೇಳಿದ್ದು ಹೀಗೆ. ʻನನಗೆ ಸ್ವಲ್ಪ ಹುಷಾರಿರಲಿಲ್ಲ. ಅಲ್ಲಿ ತುಂಬ ಕಟ್ಟುನಿಟ್ಟಾದ ಪ್ರೋಟೋಕಾಲ್​ ಇತ್ತು. ಶೀತ, ಜ್ವರ ಇತ್ಯಾದಿ ಇದ್ದರೆ ಆರ್​ಟಿಪಿಸಿಆರ್​ ಮಾಡಬೇಕಿತ್ತು. ಅದರಿಂದ ನನಗೆ ಕಂಫರ್ಟ್​ ಇರಲಿಲ್ಲ. ನನಗೆ ಸ್ವಲ್ಪ ಟೆಂಪ್ರೇಚರ್​ ಇತ್ತು. ಬೇರೆ ಬೇರೆ ಕೆಲಸಗಳಲ್ಲಿ ನಾನು ತೊಡಗಿಕೊಂಡಿದ್ದೆ. 

ಅಲ್ಲಿ ಹೋಗಿ ಪರೀಕ್ಷೆ ಮಾಡಿದ ಬಳಿಕ ಜ್ವರ ಇದೆ ಅಂತ ಒಳಗೆ ಬಿಡದಿದ್ದರೆ? ಅಲ್ಲಿತನಕ ಹೋಗಿ ವಾಪಸ್​ ಬಂದರೆ ತಪ್ಪಾಗುತ್ತದೆ. ಸಂಬಂಧಿಸಿದವರಿಗೆ ಫೋನ್​ ಮಾಡಿ ವಿಷಯ ತಿಳಿಸಿದೆ’ ಎಂದು ಸುದೀಪ್​ ವಿಡಿಯೊದಲ್ಲಿ ಹೇಳಿದ್ದರು.ಇನ್ನು ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಇದು ಹಳೆಯ ವಿಡಿಯೊ. 2023 ಫೆಬ್ರವರಿಯಲ್ಲಿ ಹಲವು ನಟರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ ಸುದೀಪ್‌ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಹೋಗಿರಲಿಲ್ಲ. ಆ ಸಮಯದಲ್ಲಿ ಸುದೀಪ್‌ ಕೊಟ್ಟ ರಿಯಾಕ್ಷನ್‌ ಇದು. ಫ್ಯಾನ್​ ಪೇಜ್​ಗಳು ಬೇರೆ ರೀತಿಯಲ್ಲಿ ಹಾಕಿವೆ.

ಪ್ರಧಾನಿ ಮೋದಿ ಸಹ ಈ ದುಬಾರಿ ಕಲ್ಯಾಣೋತ್ಸವಕ್ಕೆ ಹಾಜರಾಗಿದ್ದು ವಿಶೇಷ. ರಜನಿಕಾಂತ್, ಮಹೇಶ್‌ ಬಾಬು, ರಾಮ್‌ಚರಣ್ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾ ತಾರೆಯರಿಗೆ ಮದುವೆಯ ಆಮಂತ್ರಣ ಸಿಕ್ಕಿತ್ತು.ಸ್ಯಾಂಡಲ್‌ವುಡ್‌ನಿಂದ ಯಶ್ ದಂಪತಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎನ್ನಲಾಗ್ತಿದೆ. ಇನ್ನು ನಟ ಯಶ್ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.