ಕುಂಟುತ್ತಾ ಹೋದ ಕಿರಿಕ್ ಕೀರ್ತಿ, ನನಿಗೇನು ಆಗಿಲ್ಲ‌ ಮಗನೆ ಎಂದ ತಂದೆ

 | 
Ur

ಮಕ್ಕಳೆಂದರೆ ಹಾಗೆ ದೇವರಂತೆ ಅನ್ನೊದು ಸುಮ್ನೆ ಅಲ್ಲ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ತಮ್ಮ ಮೇಲೆ ಮಗನ ಪ್ರೀತಿ ಎಷ್ಟಿದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಬೆಳಗ್ಗೆಯೇ ತನ್ನ ಬಳಿ ಬಂದ ಮಗ ಅವಿಷ್ಕಾರ್ ಕಣ್ಣೀರು ಹಾಕಿದ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಮಗ ಅವಿಷ್ಕಾರ್ ರಾತ್ರಿ ಕನಸು ಕಂಡಿದ್ದು, ಅದರಲ್ಲಿ ತಂದೆ ಕೀರ್ತಿಗೆ ಅಪಾಯವುಂಟು ಆಗಿರುತ್ತದೆ.

 ಹಾಗಾಗಿ ಬೆಳಗ್ಗೆ ಎದ್ದಕೂಡಲೇ ಅಪ್ಪನನ್ನು ನೋಡಲು ಅವಿಷ್ಕಾರ್ ಬಂದಿದ್ದಾನೆ. ರೂಮ್‌ಗೆ ಬಂದ ಅವಿಷ್ಕಾರ್ ಅಪ್ಪನನ್ನು ಅಪ್ಪಿಕಂಡು ಕಣ್ಣೀರು ಹಾಕಿದ್ದಾನೆ. ಮಗನ ಕಣ್ಣೀರು ಕೀರ್ತಿ ಎದೆ ಮೇಲೆಲ್ಲಾ ಸುರಿಯುತ್ತಿತ್ತು. ಮಗನಿಗೆ ಸಮಾಧಾನ ಮಾಡಿದರೂ, ಆವಿಷ್ಕಾರ್ ಮಾತ್ರ ತಾನೇ ದೇವರ ಪೂಜೆ ಮಾಡಿ ಅಪ್ಪನಿಗೆ ಏನು ಆಗದಿರಲಿ ಎಂದು ಬೇಡಿಕೊಂಡಿದ್ದಾನೆ. ಮಗ ಪೂಜೆ ಮಾಡುತ್ತಿರುವ ಫೋಟೋವನ್ನು ಸಹ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬೆಳಗ್ಗೆ ಆರೂವರೆ, ನಾನು ಗಾಢ ನಿದ್ದೆಯಲ್ಲಿದ್ದೆ. ನನ್ನ ಮಗ ಆವಿಷ್ಕಾರ್ ಬಂದು ಜೋರಾಗಿ ಅಳುತ್ತಾ ನನ್ನ ಬಿಗಿದಪ್ಪಿದ್ದ. ಅಮ್ಮ ಕೂಡ ನನ್ನ ಎಬ್ಬಿಸಿದ್ರು. ಎದ್ದು ನೋಡಿದ್ರೆ ಮಗನ ಕಣ್ಣೀರು ನನ್ನ ಎದೆಯ ಮೇಲೆಲ್ಲಾ ಸುರೀತಾ ಇದೆ.'ಯಾಕೆ ಮಗನೇ? ಏನಾಯ್ತು?' ಅಂತ ಕೇಳಿದೆ. ಅಪ್ಪ, ಕೆಟ್ಟ ಡ್ರೀಮ್ ಬಂದಿತ್ತು ಅಂದ. ಏನ್ ಡ್ರೀಮ್ ಬಂತು ಮಗನೇ' ಅಂತ ಕೇಳಿದೆ. ನಿಮಗೆ ದೊಡ್ಡ ಆಕ್ಸಿಡೆಂಟ್ ಆಗಿತ್ತು. ಹಾಸ್ಪಿಟಲ್ ಸೇರಿಸಿದ್ರು. 

ನಂಗಿಷ್ಟ ಇಲ್ಲ ಆ ಡ್ರೀಮ್ ಅಂತ ಬಿಕ್ಕಳಿಸೋಕೆ ಶುರು ಮಾಡ್ದ. ನಂಗೂ ದುಃಖ ಉಮ್ಮಳಿಸಿದ್ರೂ ಹಂಗೆಲ್ಲಾ ಏನಾಗಲ್ಲ ಮಗನೇ. ಅಪ್ಪ ಇಲ್ಲೇ ಇದ್ದಾರಲ್ಲ ಅಂತ ಎದೆಗಪ್ಪಿಕೊಂಡೆ ಅತ್ತು ಅತ್ತು ಸಮಾಧಾನ ಆದ ನಂಗೊಂದು ಮುತ್ತು ಕೊಟ್ಟು ಹೋದ. ಅದಾದ ಮೇಲೆ ಸ್ನಾ‌ನ ಮುಗಿಸಿದವನು 'ಅಪ್ಪಂಗೆ ಏನೂ ಆಗಬಾರದು ಅಂತ ನಾನೇ ಪೂಜೆ ಮಾಡ್ತೀನಿ' 

ಅಂತ ಹೇಳಿ ದೇವರ ಕೋಣೆ ಸೇರಿಕೊಂಡ. ಅವನೇ ದೀಪ ಹಚ್ಚಿ, ಗಂಟೆ ಬಾರಿಸ್ತಾ ಅಗರಬತ್ತಿ ಬೆಳಗಿದ. ನನ್ನ ಮಗ,ನನ್ನ ಭಾಗ್ಯ ಅನಿಸಿಬಿಡ್ತು. ಲವ್ ಯೂ ಮಗನೇ. ಅಪ್ಪಂಗೆ ಏನೂ‌ ಆಗಲ್ಲ. ಡೋಂಟ್ ವರಿ ಅಂದು ಸಮಾಧಾನ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.