ಮಗನ ಭವಿಷ್ಯಕ್ಕಾಗಿ ಮತ್ತೆ ಒಂದಾಗ್ತಾರಾ ಕಿರಿಕ್ ಕೀತಿ೯ ಹಾಗೂ ಅಪಿ೯ತ ಗೌಡ

 | 
J

ಕೆಲ ದಿನಗಳ ಹಿಂದಷ್ಟೇ ಮಗನ ಹುಟ್ಟು ಹಬ್ಬ ಆಚರಿಸಿದ ಕಿರಿಕ್ ಕೀರ್ತಿ ಅವರು ಕೆಲ ವರ್ಷಗಳ ಹಿಂದೆ ತಮ್ಮ ಜೀವನದ ಕೊನೆಯ ಕ್ಷಣ ಎಂದು ಬರೆದು ಪೊಸ್ಟ್ ಮಾಡಿ ಸುದ್ದಿಯಾಗಿದ್ದರು ಪತ್ರಕರ್ತರಾಗಿಯೂ ಹೆಸರು ಮಾಡಿದ್ದ ಕಿರಿಕ್ ಕೀರ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರೋದಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಈ ಬಾರಿ ಜಗತ್ತನ್ನೇ ಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದರು.

ಮಗನ ಜೊತೆಗಿರುವ ಫೋಟೋ ಶೇರ್ ಮಾಡಿದ ಕಿರಿಕ್ ಕೀರ್ತಿ, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಹೇಳಿದ್ದರು .ಅಲ್ಲದೇ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ಡಿಸ್ಟರ್ಬ್ ಮಾಡಿತ್ತು ಎಂದು ಸಾಮಾಜಿಕ ಜಾಲತಾದಲ್ಲಿ ಕಿರಿಕ್ ಕೀರ್ತಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದರು. ನಿರ್ಧಾರ ಮಾಡಿಬಿಟ್ಟಿದ್ದೆ. ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ. ಕಾರಣಗಳು ಹಲವು. ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. 

ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು. ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು. ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಎಂದು ಸುಮ್ಮನಾಗಿದ್ದೆ. ಹೆಂಡತಿ ಡೈವೋರ್ಸ್ ಕೇಳಿದಳು ಕೊಟ್ಟೆ. ಇದೀಗ ಒಂಟಿಯಾಗಿ ಬದುಕಿಗೆ ಕಾಲಿಟ್ಟಿದ್ದೆ. 

ಅಷ್ಟರಲ್ಲಿ ಆಗಲೇ ಮಗನ ಹುಟ್ಟು ಹಬ್ಬ ಬಂತು ಸಂತೋಷದಿಂದ ಆಚರಿಸುತ್ತಿದ್ದೇನೆ ಎಂದು ಪೊಸ್ಟ್ ಮಾಡಿದ್ದಾರೆ. ಅದಕ್ಕೆ ಹಲವರು ಜನ ಅಭಿಮಾನಿಗಳು ಮಕ್ಕಳ ಬದುಕಿಗೆ ಅಪ್ಪ ಅಮ್ಮನ ಅಗತ್ಯವಿದೆ. ಪ್ರೀತಿಸಿ ಮದುವೆಯಾದ ಜೋಡಿಗಳು ನೀವು ಅವನಿಗೋಸ್ಕರ ಒಂದಾಗಿ ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.