ಸ್ನೇಹಿತನ ಮುಖ್ಯ ಭಾಗಕ್ಕೆ ನೀರು ಬಿಟ್ಟ ಕಿರಿಕ್ ಸ್ನೇ.ಹಿತ; ನುಂಗಲಾರದ ನೋವಿನಿಂದ ಯುವಕ ಸಾ.ವು
ಆಟ ಮಾಡಲು ಹೋಗಿ ಪ್ರಾಣವೇ ಹೋಗಿದೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಸ್ನೇಹಿತರಿಬ್ಬರ ಹುಡುಗಾಟದಲ್ಲಿ ಘೋರ ಘಟನೆ ನಡೆದು ಓರ್ವ ಸಾವನ್ನಪ್ಪಿದ್ದಾನೆ. ಗುದದ್ವಾರಕ್ಕೆ ಗಾಳಿ ಹಿಡಿದ ಪರಿಣಾಮ ಓರ್ವ ಸ್ನೇಹಿತ ಸಾವು ಕಂಡಿದ್ದು, ಯೋಗಿಶ್ ಮೃತ ಯುವಕನಾಗಿದ್ದಾನೆ.
ಮಾ25ರಂದು ಬೈಕ್ ಸರ್ವೀಸ್ ಮಾಡಲು ಸಿಎನ್ ಎಸ್ ಬೈಕ್ ಸರ್ವೀಸ್ ಸೆಂಟರ್ ಗೆ ಮುರಳಿ ಎಂಬಾತ ಹೋಗಿದ್ದ ಇದೇ ವೇಳೆ ಅದೇ ಸೆಂಟರ್ ಗೆ ಯೋಗಿಶ್ ಕೂಡ ಬಂದಿದ್ದ. ಇಬ್ಬರೂ ಈ ವೇಳೆ ಏರ್ ಪ್ಲೇಜರ್ ಪೈಪ್ ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಯೋಗಿಶ್ ನ ಮುಖ ಹಾಗೂ ಹೊಟ್ಟೆಗೆ ಮುರಳಿ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಮುರಳಿ ಗಾಳಿ ಬಟ್ಟಿದ್ದ. ಇದು ಎಡವಟ್ಟಿಗೆ ಕಾರಣವಾಯ್ತು.
ಯೋಗಿಶ್ ಗುದದ್ವಾರಕ್ಕೆ ಗಾಳಿ ಬಿಟ್ಟ ಕಾರಣ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗಿಶ್ ನನ್ನ ಸ್ನೇಹಿತ ಮುರಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡು ಸಂಪಿಗೇಹಳ್ಳಿ ಪೊಲೀಸರು ಸ್ನೇಹಿತ ಮುರಳಿಯನ್ನು ಬಂಧಿಸಿದ್ದಾರೆ.
ಗುದದ್ವಾರದೊಳಗೆ ಏರ್ ಪ್ರೆಷರ್ ಗಾಳಿ ಬಿಟ್ಟರೆ ಸಾವು ಸಂಭವಿಸುತ್ತದೆ ಎಂಬುದು ಗೊತ್ತಿದ್ದರೂ ಮುರುಳಿ ನಿರ್ಲಕ್ಷ್ಯ ವಹಿಸಿದ್ದ. ಈತನಿಂದ ಯೋಗೇಶ್ ಮೃತಪಟ್ಟಿರುವುದಾಗಿ ಸಹೋದರಿ ದೂರು ನೀಡಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ, ಸಾವಿನ ಬಗ್ಗೆ ವೈದ್ಯರಿಂದಲೂ ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.