ಸೌಜನ್ಯ ಬಗ್ಗೆ ಖಡಕ್ ಮಾತನಾಡಿದ ಕಿಶೋರ್; ಆ ರೋಪಿಗಳ ಎಡೆಮುರಿ ಕಟ್ಟಿ
ಬಹುಭಾಷಾ ನಟ ಕಿಶೋರ್ ಸಿನಿಮಾಗಳ ಜೊತೆಗೆ ತಮ್ಮ ಕಮೆಂಟ್ಗಳ ವಿಚಾರಕ್ಕೂ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕಾರಣಿಗಳು ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಸೌಜನ್ಯಾ ಪ್ರಕರಣದ ಬಗ್ಗೆ ಮಾತಾಡಿ ನಟ ಕಿಶೋರ್, ದರ್ಶನ್ ಘಟನೆ ಹಾಗೂ ಸೌಜನ್ಯ ಪ್ರಕರಣದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಸೌಜನ್ಯ ಪ್ರಕರಣದಲ್ಲೂ ತುಂಬಾ ಅನ್ಯಾಯವಾಗಿದೆ. ಏನ್ ಮಾತಾಡಬೇಕು ಗೊತ್ತಾಗಲ್ಲ. ನನ್ನ ಪ್ರಕಾರ ಇದಕ್ಕೆಲ್ಲ ಪರಿಹಾರ ಅಂದ್ರೆ ವಿದ್ಯೆ ಅನ್ಸುತ್ತೆ. ನಾವು ಪ್ರೀತಿಯ ಬೀಜ ಬಿತ್ತಬೇಕು ವಿಷದ ಬೀಜ ಬಿತ್ತಬಾರದು. ದೊಡ್ಡ ಸಾಧನೆ ಮಾಡ್ತೀವಿ ದೊಡ್ಡ ಎಕಾನಮಿ ಅಗುತ್ತೆ ವಿಶ್ವಗುರು ಆಗ್ತೀವಿ ಅನ್ನೋದು ಸುಳ್ಳು. ಜಗತ್ತಿನಲ್ಲಿ ಎಲ್ಲರೂ ಖುಷಿಯಾಗಿದ್ರೆ ಮಾತ್ರ ನಾವು ಖುಷಿಯಾಗಿರೋದು ಎಂದು ಕಿಶೋರ್ ಹೇಳಿದ್ದಾರೆ.
ಇವತ್ತು ಬೇರೆಯವರಿಗೆ ಸಮಸ್ಯೆ ಅಗಿದೆ ನಮಗೇನು ಅಂತ ಕೂರೋಕೆ ಅಗಲ್ಲ. ಇವತ್ತು ಅವರಿಗೆ ಅಗಿದ್ದು ನಾಳೆ ನಮಗೂ ಅಗಬಹುದು. ಅದೇ ಶಕ್ತಿಗಳೇ ಎಲ್ಲಾ ಕಡೆ ಕೆಲಸ ಮಾಡ್ತಿರುತ್ತವೆ. ಕರ್ನಾಟಕದಲ್ಲೂ ಎತ್ತಿಕಟ್ಟುವ ಕೆಲಸ ಆಗಿತ್ತು. ಸದ್ಯ ನಮ್ಮ ಜನ ಎಚ್ಚೆತ್ತುಕೊಂಡ್ರು. ಕರ್ನಾಟಕದಲ್ಲಿ ನಂಜೆಗೌಡ ಉರಿಗೌಡ ಅಂತ ಶುರು ಹಚ್ಕೊಂಡಿದ್ರು.
ನಮ್ಮ ಕಣ್ಣಿಗೆ ಕಾಣುವ ಹಲವು ಸಮಸ್ಯೆಗಳ ಬಗ್ಗೆಯೂ ನಾವು ಮಾತಾಡ್ಬೇಕಾಗುತ್ತೆ.. ಟಿಆರ್‌ಪಿ ಸಿಗುತ್ತೆ ಅನ್ನೋ ಕಾರಣಕ್ಕೆ ಮಾಧ್ಯಮ ಎವೆಲ್ಲವನ್ನೂ ಎತ್ತಿ ತೋರಿಸ್ಬೇಕಾಗುತ್ತೆ.. ಫೈನ್, ಅದನ್ನೂ ಮಾಡಿ.. ಆದ್ರೆ, ಸೌಜನ್ಯ ಕೇಸ್‌ನಲ್ಲಿ ಮಾಧ್ಯಮ ಯಾಕೆ ಇಷ್ಟು ಸಕ್ರಿಯ ಆಗಿಲ್ಲ..? ಅಲ್ಲೂ ಕೊಲೆ ಆಗಿತ್ತು, ಅಲ್ಲೂ ಅನ್ಯಾಯ ಆಗಿತ್ತಲ್ವ? ಸೋ, ಎಲ್ಲವನ್ನೂ ನಿಷ್ಪಕ್ಷಪಾತವಾಗಿ ನೋಡುವ ಗುಣ ಇವತ್ತು ಮಾಧ್ಯಮ ಬೆಳೆಸಿಕೊಳ್ಳಬೇಕು.. ನಿಜ, ಇವತ್ತು ಮಾಧ್ಯಮ ಒಂದ್ ವ್ಯಾಪಾರ. ಸಿನಿಮಾ ಕೂಡ ಒಂದು ವ್ಯಾಪಾರ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunsdu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.