2024ಕ್ಕೆ ಕಡು ಬೇಸರದ ಭವಿಷ್ಯ ನುಡಿದ ಕೋಡಿಶ್ರೀ, ಇಡೀ ದೇಶವೇ ಕಂ.ಗಾಲು

 | 
ಿವ

ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಕಾಲಿಕ ಮಳೆ. ಬಾಂಬ್ ಸಿಡಿಯುವ ಸಂಭವ. ಯುದ್ಧ ಭೀತಿ. ಜನರು ತಲ್ಲಣವಾಗುತ್ತಾರೆ. ಭೂಕಂಪನ. ಜಲ ಕಂಟಕ ಎದುರಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆ ಎಂದು ಸ್ವಾಮಿಜಿ ನುಡಿದಿದ್ದಾರೆ. ಅಸ್ಥಿರತೆ, ಯುದ್ಧ ಭೀತಿ. ಅಣು ಬಾಂಬ್ ಸ್ಫೋಟವಾಗುವ ಅವಕಾಶವಿದೆ ಎಂದು ಕೋಡಿ ಶ್ರೀಗಳು ಭವಿಷ್ಯದ ಕುರಿತು ತಿಳಿಸಿದ್ದಾರೆ. ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಜನರು ದೈವ ನಂಬುವುದೊಂದೆ ಪರಿಹಾರ, ದೈವ ಮೊರೆ ಹೋಗಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ. ಕೋಡಿ ಮಠದ ಸ್ವಾಮೀಜಿ ಭವಿಷ್ಯದ ಬಗ್ಗೆ ಸದಾ ಕುತೂಹಲ ಮನೆ ಮಾಡಿರುತ್ತದೆ. ವರ್ತಮಾನದ ವಿವಿಧ ಆಗುಹೋಗುಗಳ ಬಗ್ಗೆ ಅವರು ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಇದೀಗ ದೇಶದಲ್ಲಿ 2024ರ ಯುಗಾದಿ ವೇಳೆಗೆ ಮತ್ತೊಂದು ದುರ್ಘಟನೆ ಸಂಭವಿಸುತ್ತದೆ. ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. 

ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ.  ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದೆ. ಆಳುವವರು ಎಚ್ಚರ ವಹಿಸಿದರೆ ಅದನ್ನು ತಪ್ಪಿಸಬಹುದು ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.