ನಮ್ಮೆಲ್ಲರ ಅಚ್ಚುಮೆಚ್ಚಿನ ಸಿಎಮ್ ಬಗ್ಗೆ ಕೋಡಿಶ್ರೀ ಭ ಯಾನಕ ಭವಿಷ್ಯ
Aug 3, 2024, 18:43 IST
|
ಕೆಲ ದಿನಗಳ ಹಿಂದೆ ದೇಶಕ್ಕೆ ಗಂಡಾಂತರ ಕಾದಿದೆ. ಭಾರಿ ಮಳೆ, ಭೂ ಕುಸಿತ, ಪ್ರವಾಹ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಇಂದು ರಾಜ್ಯ ರಾಜಕೀಯದ ಕುರಿತು ಭವಿಷ್ಯ ನುಡಿದಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಬೆಳಗಾವಿಯ ರಾಮತೀರ್ಥನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಸನ್ಯಾಸಿ ಕಥೆಯೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ. ಒಬ್ಬ ಸನ್ಯಾಸಿ ತಪ್ಪಸ್ಸಿಗೆ ಕುಳಿತಾಗ ಒಬ್ಬ ಬೇಡ ಜಿಂಕೆ ಭೇಟೆಯಾಡಲು ಬರುತ್ತಾನೆ. ಸನ್ಯಾಸಿ ಮುಂದೆ ಜಿಂಕೆ ಓಡಿ ಹೋಗುತ್ತದೆ. ಆಗ ಬೇಡ ಸನ್ಯಾಸಿಗೆ ಕೇಳುತ್ತಾನೆ. ಸ್ವಾಮಿ ಜಿಂಕೆ ಓಡಿ ಹೋಯಿತಾ? ಎಂದು. ಈ ವೇಳೆ ಸ್ವಾಮೀಜಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಜಿಂಕೆ ಹೋಯಿತು ಎಂದರೆ ಅದನ್ನು ಬೇಡ ಕೊಂದು ಬಿಡುತ್ತಾನೆ. ಆ ಪಾಪ ನನಗೆ ಬಂದು ಬಿಡುತ್ತದೆ. ಇಲ್ಲ ಎಂದು ಹೇಳಿದರೆ ಸುಳ್ಳಾಡಿದಂತಾಗುತ್ತದೆ. ಇಂತಹ ಸಂದಿಗ್ಧಸ್ಥಿತಿಯಲ್ಲಿ ಸನ್ಯಾಸಿ ಒಂದು ಮಾತು ಹೇಳುತ್ತಾನೆ.ಯಾವುದು ನೋಡಿತೋ ಅದು ಮಾತನಾಡಲ್ಲ, ಯಾವುದು ಮಾತನಾಡಿತೋ ಅದು ನೋಡಲ್ಲ ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ ನಾಲಿಗೆ ಮಾತನಾಡುತ್ತೆ ಆದರೆ ನೋಡುವುದಿಲ್ಲ. ಹಾಗೇ ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ ಎಂದು ರಾಜ್ಯ ರಾಜಕರಣದ ಕುರಿತು ಮಾರ್ಮಿಕವಾಗಿ ಸ್ವಾಮೀಜಿಗಳು ಮಾತನಾಡಿದ್ದಾರೆ.
ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ. ರಾಷ್ಟ್ರ ರಾಜಕಾರಣದ ಬಗ್ಗೆ, ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ರಾಷ್ಟ್ರ ರಾಜಕಾರಣದಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ ಭೀಮ ಸೋಲುತ್ತಾನೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹಾಭಾರತದಲ್ಲಿ ಅಭಿಮನ್ಯುವನ್ನು ಮೋಸದಿಂದ ಕತ್ತರಿಸುತ್ತಾರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ತೊಂದರೆ ಇಲ್ಲ . ಪ್ರಜಾಪ್ರಭುತ್ವದಲ್ಲಿ ಮತದಾರರು ಮತವನ್ನು ದಾನ ಮಾಡುತ್ತಿಲ್ಲ. ಮಾರಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ ಸಾವು, ನೋವು ಸಂಭವಿಸುತ್ತದೆ ಎಂದು ಹೇಳಿದ್ದೆ. ಅದು ಅಮವಾಸ್ಯೆಯವರೆಗೂ ಇರುತ್ತದೆ. ಶ್ರಾವಣದಲ್ಲಿ ನಾನು ಮತ್ತೊಮ್ಮೆ ಸ್ಫೋಟಕ ಭವಿಷ್ಯ ಹೇಳುತ್ತೇನೆ ಎಂದು ಕೋಡಿಮಠ ಶ್ರೀಗಳು ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.