ಕುಂಭಮೇಳದಲ್ಲಿ ಸ್ನಾನ ಮಾಡಿದ‌ ಭಕ್ತರಿಗೆ ಕೋಡಿಶ್ರೀ ಎಚ್ಚರಿಕೆಯ ಸಂದೇಶ

 | 
Hj
45 ದಿನಗಳ ಮಹಾಕುಂಭಕ್ಕೆ ಬುಧವಾರ ತೆರೆ ಬಿದ್ದಿದ್ದು ವಿದೇಶಿಯರು ಸೇರಿದಂತೆ ಹೆಚ್ಚಿನ ಯಾತ್ರಾರ್ಥಿಗಳು ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪುನೀತರಾದರು. ವಿಶ್ವದ ದೊಡ್ಡ ಕಾರ್ಯಕ್ರಮ ಎಂದೇ ಜನಜನಿತಗೊಂಡ ಮಹಾಕುಂಭವು ಏಕತೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಬಡವ ಬಲ್ಲಿದ, ಮೇಲು ಕೀಳು, ಬೇಧಭಾವವಿಲ್ಲದೆ ಪ್ರತಿಯೊಬ್ಬರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಮಹಾಕುಂಭ ಮೇಳ ಸಮಾಪ್ತಿಗೊಂಡಿದ್ದರೂ ಯಾತ್ರಾರ್ಥಿಗಳು ಪ್ರಯಾಗಕ್ಕೆ ಆಗಮಿಸುತ್ತಲೇ ಇದ್ದು, ಪುಣ್ಯಸ್ನಾನವನ್ನು ಮಾಡುತ್ತಿದ್ದಾರೆ.45 ದಿನಗಳ ಮಹಾ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಿಲ್ಲದವರು ಇದೀಗ ಪ್ರಯಾಗಕ್ಕೆ ಭೇಟಿ ನೀಡಿ ಪುನೀತರಾಗುತ್ತಿದ್ದಾರೆ. ಮಹಾಕುಂಭ ಕಾರ್ಯಕ್ರಮಕ್ಕಾಗಿ ಈ ಮೊದಲು ಸಂಚಾರ ನಿರ್ಬಂಧಗಳನ್ನು ಹಾಕಲಾಗಿತ್ತು ಆದರೀಗ ಕಾರ್ಯಕ್ರಮ ಸಮಾಪ್ತಿಗೊಳ್ಳುತ್ತಿದ್ದಂತೆ ಸಂಚಾರ ನಿರ್ಬಂಧಗಳನ್ನು ಸಡಿಲಿಸಿದ್ದು, ಮೇಳ ಘಾಟ್‌ಗಳ ಬಳಿಯಿರುವ ಮೈದಾನಗಳು ಈಗ ವಿವಿಧ ರಾಜ್ಯಗಳಿಂದ ಬರುವ ಕಾರುಗಳು ಮತ್ತು ಇತರ ವಾಹನಗಳ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದ್ದು ನೂಕು ನುಗ್ಗಲು ಉಂಟಾಗಿದೆ. ಕೆಲವರು ಘಾಟ್‌ಗಳಿಗೆ ಕಾರನ್ನು ಕೊಂಡೊಯ್ಯುತ್ತಿದ್ದು ಅಲ್ಲಿಯೂ ಟ್ರಾಫಿಕ್ ಜಾಮ್ ಏರ್ಪಟ್ಟಿದೆ.
ಇನ್ನು ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಕರ್ನಾಟಕದಲ್ಲಿ ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನುಆಗ್ಗಾಗ್ಗೆ ತಿಳಿಸುತ್ತಿರುತ್ತಾರೆ. ಅದರಂತೆ ಈ ಬಾರಿ ಕೊಲೆ ಆರೋಪಿಯಾಗಿರುವ ನಟ ದರ್ಶನ್, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ, ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಮಳೆ-ಬೆಳೆ ಬಗ್ಗೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದರು. ಅದೆಲ್ಲವೂ ನಿಜವಾಗಿದೆ.
ಇನ್ನು ಈದೀಗ ಕುಂಭಮೇಳದ ಕುರಿತಾಗಿ ಮಾತನಾಡಿದ ಅವರು ತೀರ್ಥ ಸ್ನಾನ ತುಪ್ಪ ಪಾನ ಎರಡೂ ಒಳ್ಳೆಯದು . ಅತಿ ಆಗಬಾರದಷ್ಟೇ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀ, ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಭವಿಷ್ಯ ಹೇಳುತ್ತೇನೆ. ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.