ಸರ್ಕಾರಿ ವಾಹನದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಅಧಿಕಾರಿಗಳ ಚಳಿಬಿಡಿಸಿದ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತ

 | 
Nd

ಜನಸಾಮಾನ್ಯರಿಗೆ ಒಂದು ಕಾನೂನು, ಸರ್ಕಾರಿ ಅಧಿಕಾರಿಗಳಿಗೆ ಮತ್ತೊಂದು ಕಾನೂನು ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ. ವಿಮೆ ಮಾಡಿಸಿ ಅಂತ ಸಾರ್ವಜನಿಕರಿಗೆ ತಿಳಿಹೇಳುವ ಸರ್ಕಾರಿ ಅಧಿಕಾರಿಗಳೇ ತಮ್ಮ ವಾಹನಕ್ಕೆ ವಿಮೆ ಮಾಡಿಸಿದೇ ಸರ್ಕಾರಿ ಕಾರಿನಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಜನಸಾಮಾನ್ಯರಿಗಾದ್ರೆ ಹೆಲ್ಮೆಟ್ ಇಲ್ಲ. ಸೀಟ್ ಬೆಲ್ಟ್ ಹಾಕಿಲ್ಲ. ಇನ್ಸುರೆನ್ಸ್ ಇಲ್ಲ, ಎಮಿಷನ್ ಟೆಸ್ಟ್ ಇಲ್ಲ, ಮಿರರ್ ಇಲ್ಲ ಅದಿಲ್ಲ-ಇದಿಲ್ಲ ಅಂತೆಲ್ಲಾ ಪೊಲೀಸರು ಕೇಸ್ ಮೇಲೆ ಕೇಸ್ ಹಾಕುತ್ತಾರೆ. ಆದರೆ, ಸರ್ಕಾರದ ಗಾಡಿಯಲ್ಲಿ ಇನ್ಸುರೆನ್ಸ್ ಮುಗಿದು ಒಂದೆರಡು ತಿಂಗಳಲ್ಲ ಬರೋಬ್ಬರಿ ನಾಲ್ಕು ವರ್ಷವಾಗಿದೆ. ಹಾಗೂ ಹೆಂಡತಿ ಮಕ್ಕಳೊಂದಿಗೆ ಹಂಪಿ ಪ್ರವಾಸಕ್ಕೆ ಸರ್ಕಾರದ ಕಾರು ರಸ್ತೆಯಲ್ಲಿ ಓಡುತ್ತಲೇ ಇದೆ. 

ಹೌದು.. ದಾರಿಯುದ್ದಕ್ಕೂ ನಿಲ್ಲುವ ಪೊಲೀಸರು, ಚೆಕ್ ಪೋಸ್ಟ್ ಗಳನ್ನು ದಾಟಿ ಆ ಸರ್ಕಾರಿ ಕಾರು ಚಿಕ್ಕಮಗಳೂರಿಗೆ ಬಂದಿದೆ.ರಸ್ತೆ ಉದ್ದಕ್ಕೂ ಸಾರ್ವಜನಿಕರ ವಾಹನವನ್ನು ತಪಾಸಣೆ ಮಾಡುವ ಪೊಲೀಸರು ಮಾತ್ರ ಈ ವಾಹನಕ್ಕೆ ಹೇಳೋರಿಲ್ಲ. ಕೇಳೋರಿಲ್ಲ ಎನ್ನುವಂತೆ ವರ್ತನೆ ಮಾಡಿದ್ದಾರೆ. ಮಕ್ಕಳನ್ನು ಹೆಂಡತಿಯನ್ನು ಸರಕಾರಿ ಕಾರಿನಲ್ಲಿ ಕರೆದುಕೊಂಡು ಟ್ರಿಪ್ ಮಾಡಬೇಕೆ? ಅದನ್ನು ಯಾರೂ ಕೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ಗಾಡಿ ಸೈಡಿಗೆ ಹಾಕಿಸಿ ಗಾಡಿಯ ಜನ್ಮ ಜಾಲಾಡುತ್ತಾರೆ. ಒಂದು ದಾಖಲೆ ಇಲ್ಲ ಅಂದ್ರು ಫೈನ್ ಹಾಕುತ್ತಾರೆ. ಈ ಗಾಡಿ ಹೇಗೆ ಓಡಾಡೋದಕ್ಕೆ ಸಾಧ್ಯ. ಸರಕಾರದ ದುಡ್ಡು ಅಂದರೆ ನಮ್ಮ ದುಡ್ಡಿನಲ್ಲಿ ನಿಮ್ಮ ಫ್ಯಾಮಿಲಿ ಅಡ್ಡಾಡಬೇಕೆ ಹಾಗಾದ್ರೆ, ಸರ್ಕಾರದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರವಾ ಎಂದು ಪ್ರಶ್ನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.