ಬಿಡುವಿನ ಸಮಯದಲ್ಲಿ ತೋಟದ ಪೊದೆ ಸ್ವಚ್ಛ ಮಾಡುತ್ತಿರುವ ಕುಮಾರಸ್ವಾಮಿ; ಮೆಚ್ಚುಗೆ ಪಟ್ಟ ಕನ್ನಡಿಗರು

 | 
೬೭೭
ರೈತರ ಅಭಿವೃದ್ಧಿಗಾಗಿ ಈಗಾಗಲೇ ಹೊಸ ಚಿಂತನೆ ಮಾಡಿದ್ದೇನೆ. ಅದಕ್ಕಾಗಿ ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ವ್ಯವಸಾಯ ಮಾಡ್ತಿದ್ದೇನೆ.‌ ರಾಜಕೀಯಕ್ಕೆ ಬರುವ ಮುನ್ನವೇ ತೋಟ ಖರೀದಿ ಮಾಡಿದ್ದೆ. ಈಗ ತೋಟದಲ್ಲಿ ಕೃಷಿ ಪ್ರಾರಂಭ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪ್ರವಾಸ ಹಮ್ಮಿಕೊಂಡಿರುವ ಅವರು, ತಾಲೂಕು ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸುವ ಮೂಲಕ ಚಾಲನೆ ಕೊಟ್ಟರು.ನಂತರ ಮಾತನಾಡುತ್ತಾ, ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 6 ತಿಂಗಳಿಂದ ತೋಟದಲ್ಲಿ ಕೃಷಿ ಕೆಲಸ ನಡೆಯುತ್ತಿದೆ. ರಾಜಕೀಯಕ್ಕೆ ಬರುವ ಮುನ್ನವೇ ತೋಟ ಖರೀದಿ ಮಾಡಿದ್ದೆ ಎಂದರು.
https://www.facebook.com/share/r/4JkPiW3qb6Fei1TY/?mibextid=iexibG
ಬೆಂಗಳೂರಿನ ಜೆ.ಪಿ ನಗರದ ಮನೆಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಾಗದೆ ಎಷ್ಟೋ ಜನ ಕಾರ್ಯಕರ್ತರು ಬೇಸರದಿಂದ ವಾಪಸ್ಸಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಳೆದ 7 ತಿಂಗಳಿನಿಂದ ಈ ಕುರಿತು ಸಿದ್ಧತೆ ನಡೆಸಿದ್ದೇನೆ. ಜನರಿಗೆ ಮತ್ತಷ್ಟು ಹತ್ತಿರವಾಗಲು ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣದ ಜನರಿಗೆ ಅನುಕೂಲವಾಗಲೆಂದು ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದೇನೆ.
ಇನ್ನು ಈ ಕುರಿತಾಗಿ ಹೇಳಿರುವ ಕುಮಾರಸ್ವಾಮಿ ಅವರು ನಿರಂತರವಾಗಿ ತೋಟದಲ್ಲಿ ಕೆಲಸ ಮಾಡ್ತೇವೆ. ಇದು ಮೊದಲನೇ ಬಾರಿ ನನ್ನ ಜೀವನದಲ್ಲಿ ವಿಶೇಷ ಕ್ಷಣ. ರೈತ ಪರ ಯೋಜನೆ ಕಾರ್ಯಕ್ರಮ ಕೊಟ್ಟಿದ್ದೇವೆ. ಅಂದು ಸಾಕಷ್ಟು ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಣ್ಣ ರೈತರ ಸಾಲ ಮನ್ನ ಮಾಡಿದ್ರು. ರೈತರ ಬಗ್ಗೆ ಕಾಳಜಿ ಇಟ್ಟಿರುವ ಬಗ್ಗೆ ಜನರು ನೋಡಿದ್ದಾರೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.