ಕುಮಾರಸ್ವಾಮಿ ಬಿಜೆಪಿಗೆ; 'ಈ ಬಾರಿ ನನ್ನ ಸೋಲು ಖಚಿತ' ಸುಮಲತಾ ಅಂಬರೀಶ್

 | 
Bhs

ಮಂಡ್ಯ ಲೋಕಸಭೆ ಚುನಾವಣಾ ರಣಕಣ ರಂಗೇರಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ  ಸ್ಪರ್ಧೆ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಲಿದೆ. ಸಕ್ಕರೆ ನಾಡಿನ ಜೆಡಿಎಸ್ ಟಿಕೆಟ್ ಗಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಬಿಜೆಪಿ ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ. ಇತ್ತ ಸಂಸದೆ ಸುಮಲತಾ ಕೂಡ ಮಂಡ್ಯ ಬಿಟ್ಟು ಕೊಡುವ ಚಾನ್ಸೇ ಇಲ್ಲ ಎಂದು ಅನೇಕ ಭಾರೀ ಹೇಳಿದ್ದಾರೆ. 

ಚುನಾವಣೆ ಸ್ಪರ್ಧೆ ವಿಚಾರವಾಗಿ ಸುಮಲತಾ ಆಪ್ತರ ಜೊತೆ ಸಭೆ ನಡೆಸಿದ್ರು. ಸಭೆ ಬಳಿಕ ಮಾತಾಡಿದ ಸುಮಲತಾ ಬಿಜೆಪಿ  ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಿದ್ದಾರೆ. ಮಂಡ್ಯದಿಂದ  ತನಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ದರ್ಶನ್​, ಯಶ್, ಸುದೀಪ್ ಪ್ರಚಾರದ ಬಗ್ಗೆ ಕೂಡ ನಟಿ  ಹಾಗೂ ಸಂಸದೆ ಸುಮಲತಾ ಮಾತಾಡಿದ್ದಾರೆ.

ಕಳೆದ ಬಾರಿ ಪಕ್ಷೇತರರಾಗಿ ಲೋಕಸಭೆ ಅಖಾಡಕ್ಕೆ ಧುಮುಕಿದ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ರು. ಸುಮಲತಾ ಗೆಲುವಿಗೆ ಸ್ಯಾಂಡಲ್​ವುಡ್​ ಸ್ಟಾರ್ ನಟರ ಪ್ರಚಾರ ಕೂಡ ಪ್ಲಸ್​ ಪಾಯಿಂಟ್ ಆಗಿತ್ತು. ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಟ್ಟು ಭರ್ಜರಿಯಾಗಿ ಕ್ಯಾಂಪೇನ್ ಮಾಡಿದ್ರು. 

ವಾರಗಳ ಕಾಲ ಮಂಡ್ಯ ಬೀದಿ ಬೀದಿಯಲ್ಲಿ ಓಡಾಡಿ ಸುಮಲತಾ ಪರ ಮತಯಾಚನೆ ಮಾಡಿದ್ರು. ಈ ಬಾರಿ ಕೂಡ ದರ್ಶನ್​, ಯಶ್​ ಸುಮಲತಾ ಪರ ಕ್ಯಾಂಪೇನ್​ ಮಾಡ್ತಾರೆ. ಬಿಜೆಪಿ ಟಿಕೆಟ್ ಸಿಗೋದು ಪಕ್ಕಾ, ಮಂಡ್ಯದಿಂದಲೇ ಸ್ಪರ್ಧಿಸೋದಾಗಿ ಸುಮಲತಾ ಘೋಷಣೆ ಮಾಡಿದ್ದಾರೆ. ಯಶ್, ದರ್ಶನ್ ಪ್ರಚಾರದ ವಿಚಾರವಾಗಿ ಮಾತಾಡಿದ ಸುಮಲತಾ, ನಾನು ಯಶ್ ಜೊತೆ ಇನ್ನೂ ಮಾತಾಡಿಲ್ಲ. 

ಅವರು ಲಂಡನ್ ನಲ್ಲಿದ್ದಾರೆ. ಆದರೆ ದರ್ಶನ್ ಜೊತೆ ಮಾತಾಡಿದ್ದೇನೆ. ನೀವು ಯಾವ ಪಕ್ಷದಿಂದ ಸ್ಪರ್ಧಿಸಿದ್ರು  ನಾನು ಚುನಾವಣೆಯಲ್ಲಿ ನಿಮ್ಮ ಜೊತೆ ಇರೋದಾಗಿ ದರ್ಶನ್ ಹೇಳಿದ್ದಾರೆ ಎಂದು ಸುಮಲತಾ ಹೇಳಿದ್ರು. ಸುದೀಪ್ ಪ್ರಚಾರದ ಕುರಿತ ಪ್ರಶ್ನೆಗೆ ಸುಮಲತಾ ನಕ್ಕು ಸುಮ್ಮನಾದ್ರು. ಯಾವುದೇ ಉತ್ತರ ನೀಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.