ತುಂಬಾ ಅವಸರದಲ್ಲಿ ಮೂರನೇ ಮದುವೆಯಾದ ಲಕ್ಷ್ಮಿ; ಕಾರಣ ಏನು ಗೊ.ತ್ತಾ

 | 
Hd

ಚಿತ್ರರಂಗದಲ್ಲಿ ಸುಮಾರು ಐದಾರು ದಶಕಗಳಿಂದ ನಟಿಸುತ್ತಾ ಬಂದಿರೋ ಹಿರಿಯ ನಟಿ ಲಕ್ಷ್ಮಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿದ್ದರೂ ಎಲ್ಲಾ ಭಾಷೆಯ ಸಿನಿಪ್ರಿಯರು ಈಕೆಯನ್ನು ಜೂಲಿ ಲಕ್ಷ್ಮಿ ಎಂದೇ ಗುರುತಿಸುತ್ತಾರೆ. ಲಕ್ಷ್ಮಿ ಕಾಲಿಟ್ಟ ಬಣ್ಣ ಹಚ್ಚಿದ ಎಲ್ಲಾ ಭಾಷೆಯಲ್ಲೂ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಲಕ್ಷ್ಮಿ 80ರ ದಶಕದಲ್ಲಿ ಲಕ್ಷ್ಮಿ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದರು.

ಅದರಲ್ಲೂ ಜೂಲಿ ಸಿನಿಮಾ ರಿಲೀಸ್ ಆದ ಬಳಿಕವಂತೂ ಲಕ್ಷ್ಮಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿತ್ತು. ಅದರಲ್ಲೂ ಹಿಂದಿಯಲ್ಲಿ ಬೋಲ್ಡ್ ಪಾತ್ರಗಳಲ್ಲಿ ನಟಿಸುವುದಕ್ಕೆ ಹೆಚ್ಚು ಆಫರ್‌ಗಳು ಬಂದಿದ್ದವು. ಆದರೆ, ಅದಾಗಲೇ ಜೂಲಿ ಲಕ್ಷ್ಮಿ ಅಂತಲೇ ಫೇಮಸ್ ಆಗಿದ್ದ ನಟಿಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೇ ಒಳ್ಳೊಳ್ಳೆ ಆಫರ್‌ಗಳು ಬಂದಿದ್ದವು. ಹೀಗಾಗಿ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಲ್ಲೆ ಎಂದಿದ್ದರು.

ಹಿರಿಯ ನಟಿ ಲಕ್ಷ್ಮಿಗೆ ಕನ್ನಡವೂ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಆಫರ್‌ಗಳ ಮೇಲೆ ಆಫರ್ ಬರುತ್ತಿದ್ದವು. ಇವರು ನಟಿಸಿದ ಬಹುತೇಕ ಸಿನಿಮಾಗಳು ಗೆದ್ದಿವೆ. ಹೀಗಾಗಿ 80 ಹಾಗೂ 90ರ ದಶಕದಲ್ಲಿ ಲಕ್ಷ್ಮಿ ನಟಿಸಿದ ಸಿನಿಮಾಗಳು ಸಕ್ಸಸ್ ಕಂಡಿವೆ. ಹೀಗಾಗಿ ಲಕ್ಷ್ಮಿಗೆ ಸಿನಿಮಾರಂಗದಲ್ಲಿ ಯಾರಿಗೂ ಸಿಗದ ಯಶಸ್ಸು ಸಿಕ್ಕಿತ್ತು. ಆದರೆ, ವೈಯಕ್ತಿಕ ಬದುಕಿನಲ್ಲಿ ಮಾತ್ರ ಸೋತಿದ್ದರು.

ನಟಿ ಲಕ್ಷ್ಮಿಗೆ ಚಿತ್ರರಂಗ ಹೊಸದೇನು ಆಗಿರಲಿಲ್ಲ. ಅದಾಗಲೇ ಲಕ್ಷ್ಮಿಯವರ ತಂದೆ ತಾಯಿ ಕೂಡ ಸಿನಿಮಾ ಕ್ಷೇತ್ರದಲ್ಲೇ ಇದ್ದರು. ಹೀಗಾಗಿ ಸಿನಿಮಾರಂಗಕ್ಕೆ ಬಹುಬೇಗನೇ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಲಕ್ಷ್ಮಿ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸು ಕಾಣುತ್ತಿದ್ದಂತೆ ಭಾಸ್ಕರನ್ ಎಂಬುವವರ ಜೊತೆ ಮದುವೆ ಮಾಡಿದ್ದರು. ಇವರಿಗೆ ಐಶ್ವರ್ಯಾ ಎಂಬ ಮಗಳು ಕೂಡ ಜನಿಸಿದ್ದರು. ಆಕೆ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಆದರೆ, ಲಕ್ಷ್ಮಿ ಹಾಗೂ ಭಾಸ್ಕರನ್ ನಡುವೆ ಉತ್ತಮ ಬಾಂಧವ್ಯ ಮುಂದುವರೆಯಲ್ಲಿಲ್ಲ. ಹೀಗಾಗಿ ಲಕ್ಷ್ಮಿ ವಿಚ್ಛೇದನಕ್ಕೆ ಮುಂದಾಗಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಮಲಯಾಳಂ ಚಿತ್ರರಂಗದ ನಟ ಕಮ್ ನಿರ್ದೇಶಕ ಮೋಹನ್ ಶರ್ಮಾ ಎಂಬುವವರ ಜೊತೆ ಪ್ರೀತಿ ಹುಟ್ಟಿತ್ತು. ಅವರನ್ನು ಮದುವೆಯಾದರು. ಇದು ಅವರ ಎರಡನೇ ಮದುವೆ ಆಗಿತ್ತು. ಇತ್ತೀಚೆಗೆ ಇದೇ ಮೋಹನ್ ಶರ್ಮಾ ನೀಡಿದ ಸಂದರ್ಶನದಲ್ಲಿ ಹೋಟೆಲ್‌ನಲ್ಲಿಯೇ ಕುಂಕುಮ ಇಟ್ಟು ಮದುವೆ, ಅಲ್ಲೇ ಫಸ್ಟ್ ನೈಟ್ ಆಗಿತ್ತು ಎಂದು ಹೇಳಿಕೆ ಕೊಟ್ಟು ಹಲ್‌ಚಲ್ ಎಬ್ಬಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.