ಲಕ್ಷ್ಮಿನಿವಾಸ ಸೀರಿಯಲ್ ಸಿದ್ದು ಎಡವಟ್ಟು; ನಾಳೆಯ ಸಂಚಿಕೆ ಇವತ್ತೆ ನೋಡಿ

 | 
Uu

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ  ಭಾವನಾ ಹಾಗೂ ಸಿದ್ದೇಗೌಡರ ಜೋಡಿ ಪ್ರಮುಖ ಹೈಲೈಟ್‌. ಸಿದ್ದೇಗೌಡರು ಭಾವನ ಮೇಲಿರುವ ಪ್ರೀತಿಯನ್ನು ಹೇಳಲು ಒದ್ದಾಡುತ್ತಿದ್ದಾರೆ. ಆದರೆ ಭಾವನ ಸಿದ್ದೇಗೌಡರನ್ನ ನೋಡಿ ಎಷ್ಟೇ ಕೋಪಿಸಿಕೊಂಡರು, ಸಿದ್ದೇಗೌಡರ ಫೋನ್‌ ಕಾಲ್‌ ಬಂದರೆ ಸಾಕು ಫುಲ್ ಖುಷಿಯಾಗುತ್ತಾಳೆ. ಇದೀಗ ಈ ಜೋಡಿಯ ಮದುವೆ ರೀಲ್ಸ್‌ ವೈರಲ್‌ ಆಗುತ್ತಿದೆ.

ಸೌಪರ್ಣಿಕಾ ಹಾಗೂ ನೀಲೂ ಡಬ್ಬಲ್ ಗೇಮ್ ಶುರು ಮಾಡಿದ್ದರೂ ಈ ಜೋಡಿ ಮದುವೆ ಆಗೋದು ಗ್ಯಾರಂಟಿ ಎನ್ನತ್ತಿದ್ದಾರೆ ಫ್ಯಾನ್ಸ್‌.ಸಿದ್ದೇಗೌಡರ ಪ್ರೀತಿ ನಿಲೂಗೆ ಮಾತ್ರ ಗೊತ್ತಿದೆ. ಹೀಗಾಗಿ ಸಿದ್ದೇಗೌಡರ ಜತೆ ಪೂರ್ವಿ ಜತೆ ಮದುವೆ ಮಾಡಬೇಕು ಎಂದು ಸೌಪರ್ಣಿಕಾ ಜತೆ ಕೈ ಜೋಡಿಸಿದ್ದಾಳೆ. ಆದರೀಗ ವೈರಲ್‌ ಆಗುತ್ತಿರುವ ವಿಡಿಯೊ ಕಂಡು ಸಿದ್ದೇಗೌಡರು ಭಾವನಾಳನ್ನೇ ಮದುವೆ ಆಗೋದು ಎನ್ನುತ್ತಿದ್ದಾರೆ.

ಊರಹಬ್ಬಕ್ಕೆಂದು ಶ್ರೀನಿವಾಸ್, ಬೈರೇಗೌಡ ಕುಟುಂಬ, ಜಾಹ್ನವಿ-ಜಯಂತ್ ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಸಿದ್ದೇಗೌಡ-ಪೂರ್ವಿ ನಿಶ್ಚಿತಾರ್ಥ ನಡೆದಿದೆ. ಸಿದ್ದು ತುಂಬ ಒಳ್ಳೆಯವನು ಅಂತ ಪೂರ್ವಿಗೆ ಪರೋಕ್ಷವಾಗಿ ನೀಲು ಹೇಳಿ ಅವನ ಮೇಲೆ ಪ್ರೀತಿ ಬರುವ ಹಾಗೆ ಮಾಡುತ್ತಿದ್ದಾಳೆ. ಎಲ್ಲಿ ತನ್ನ ಭಾವನಾಳನ್ನು ಕಳೆದುಕೊಳ್ತೀನಿ ಎನ್ನುವ ಭಯದಲ್ಲಿ ಸಿದ್ದೇಗೌಡ್ರು ಭಾವನಾಗೆ ತಾಳಿ ಕಟ್ಟಿದ್ದಾರೆ.

ಹೌದು, ಊರಹಬ್ಬದಲ್ಲಿ ಎಲ್ಲರೂ ಮಲಗಿರುತ್ತಾರೆ. ಆಗ ಸಿದ್ದೇಗೌಡ್ರು ಭಾವನಾ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಇದೀಗ ಧಾರಾವಾಹಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಭಾವನಾಗೆ ಯಾರು ತಾಳಿ ಕಟ್ಟಿದರು ಅಂತ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಾರೆ. ಇದರಿಂದ ಪೂರ್ವಿ-ಸಿದ್ದೇಗೌಡ್ರ ಮದುವೆ ಹೇಗೆ ಮುರಿಯುತ್ತದೆ ಅಂತ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.