ಲಕ್ಷ್ಮೀನಿವಾಸ ಜಯಂತ್ ಮುಖ ನೋಡಿ ಎದ್ದು ಬಿದ್ದು ಬೈದ ಅಜ್ಜಿ; ಸೀರಿಯಲ್ ಲೋಕ ಶಾ ಕ್

 | 
Uuu

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಸೈಕೋ ಪಾತ್ರದಲ್ಲಿ ನಟಿಸುತ್ತಿರುವ ಜಯಂತ್ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಈ ಸೀರಿಯಲ್ ನಿಲ್ಸಿಬಿಡಿ, ನೋಡಕ್ಕೆ ಆಗ್ತಿಲ್ಲಾ ಅಂತಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ  ಸೀರಿಯಲ್ ನಲ್ಲಿ ಜಯಂತ್ ಕ್ಯಾರೆಕ್ಟರ್ ಬಗ್ಗೆ ವೀಕ್ಷಕರೆಲ್ಲರೂ ಗರಂ ಆಗಿದ್ದಾರೆ. ತನ್ನ ಸೈಕೋ ಕ್ಯಾರೆಕ್ಟರ್ ಮೂಲಕ ತೆರೆ ಮೇಲೆ ಸದಾ ವಿಚಿತ್ರವಾಗಿ ವರ್ತಿಸುತ್ತಿರುವ ಜಯಂತ್ ಮೇಲೆ ಯಾಕೆ ಇಷ್ಟೊಂದು ಗರಂ ಆಗಿದ್ದಾರೆ.

ಜಾಹ್ನವಿ ತುಂಬಾ ಹೊತ್ತು ಫೋನ್ ನಲ್ಲಿ ಮಾತನಾಡೋದನ್ನು ಸಹಿಸದ ಜಯಂತ್ ಆಕೆಯ ಫೋನ್ ನೆಟ್ ವರ್ಕ್ ಕನೆಕ್ಟ್ ಆಗದೇ ಇರೋತರ ಮಾಡಿ, ಮನೆಯ ಲ್ಯಾಂಡ್ ಲೈನ್ ಕನೆಕ್ಷನ್ ಕೂಡ ತೆಗೆದು ಹಾಕಿದ್ದಾನೆ. ಜಾಹ್ನವಿಯ ಎಲ್ಲಾ ಪ್ರೀತಿ ತನ್ನೊಬ್ಬನಿಗೆ ಸಿಗಬೇಕೆಂದು ಇಡೀ ದಿನ ಆಕೆ ಏನ್ ಮಾಡ್ತಾಳೆ ಅನ್ನೋದನ್ನು ಆಫೀಸ್ ನಲ್ಲಿ ಕುಳಿತು ನೋಡ್ತಿರ್ತಾನೆ ಜಯಂತ್. 

ಎರಡು ದಿನದಿಂದ ಮಗಳ ಫೋನ್ ಕನೆಕ್ಟ್ ಆಗದೇ, ಮುದ್ದು ಮಗಳ ಜೊತೆ ಮಾತನಾಡದೆ ಇರಲಾರದೇ ಲಕ್ಷ್ಮೀ ಮತ್ತು ಶ್ರೀನಿವಾಸ್ ತಮ್ಮ ಕುಟುಂಬದ ಜೊತೆ ಮಗಳೀಗೆ ತೊಂದರೆಯಾಗಿದೆ ಎಂದು ಅಂದುಕೊಂಡು ಜಯಂತ್ ಮನೆ ಮುಂದೆ ಬಂದೆ ಬಿಡುತ್ತಾರೆ. ಇದನ್ನು ನಿರೀಕ್ಷಿಸಿಯೇ ಇರದ ಜಯಂತ್ ಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ, ಅದನ್ನು ತೋರಿಸದೇ ಎಲ್ಲರೆದುರು ಚೆನ್ನಾಗಿರುತ್ತಾನೆ ಜಯಂತ್.

ತಂದೆ ತಾಯಿಗೆ ಮಗಳು ಪ್ರೀತಿ ಕೊಡೋದನ್ನು ಸಹಿಸದ ಜಯಂತ್ ಮೇಲೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ, ಜಯಂತ ಎಲ್ಲಿರ್ತಿಯ ಹೇಳಪ್ಪ ಅಲ್ಲಿಗೆ ಕಾರಲ್ಲಿ ಬಂದು ಗುದ್ದಿಸಿ ಸಾಯಿಸ್ತೀನಿ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಇಂತಹ ಅಳಿಯ ಸಿಕ್ರೆ ಯಾರು ಬದುಕ್ತಾರೆ ಎಂದು ಕೇಳಿದ್ದಾರೆ. ಇದು ಅತಿ ಆಯ್ತು ಜಯಂತ್, ಇನ್ನು ಇರ್ಲಿ ಬಿಡು, ಉರ್ಕೊಂಡು ಏನೂ ಮಾಡೋಕ್ ಆಗ್ದೇ ವಿಲ ವಿಲ ಒದ್ದಾಡು ಎಂದು ಸಹ ಹೇಳಿದ್ದಾರೆ ಜನ. ದಾರಿಯಲ್ಲಿ ಸಿಕ್ಕಿದ ಅಜ್ಜಿಯೊಬ್ಬರು ಹಿಡಿ ಶಾಪ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.