ಗೊಂಬೆ ಮನೆಗೆ ಲಕ್ಷ್ಮಿಯ ಆಗಮನ, ಮಗು ಯಾರ ರೀತಿ ಇದೆ ಗೊತ್ತಾ

 | 
Hs
 ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ಮನೆಗೆ ಮುದ್ದಾದ ಗೊಂಬೆಯ ಆಗಮನವಾಗಿದೆ. ಧನತ್ರಯೋಶಿ ದಿನ ನೇಹಾ ಮನೆಗೆ ಲಕ್ಷ್ಮಿ ಬಂದಿದ್ದಾಳೆ. ನಟಿ ನೇಹಾ ರಾಮಕೃಷ್ಣ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ನೇಹಾ ಗೌಡ, ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಅಕ್ಟೋಬರ್ 29ರಂದು ನೇಹಾ ಗೌಡಗೆ ಹೆರಿಗೆಯಾಗಿದೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂಬ ಶೀರ್ಷಿಕೆ ಹಾಕಿ, ಖುಷಿ ಸುದ್ದಿಯನ್ನು ನೇಹಾ ಹಾಗೂ ಚಂದನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
ನೇಹಾ ರಾಮಕೃಷ್ಣನ್ ಗೆ ಹೆಣ್ಣು ಮಗು ಎನ್ನುವ ವಿಷ್ಯ ತಿಳಿಯುತ್ತಿದ್ದಂತೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಶುಭಾಶಯಗಳು ಹರಿದು ಬರ್ತಿವೆ. ಇನ್ಸ್ಟಾ ಖಾತೆಯಲ್ಲಿ ಶ್ವೇತಚಂಗಪ್ಪ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ನೇಹಾ ಗೌಡ ಹಾಗೂ ಚಂದನ್ ಗೆ ಶುಭಕೋರಿದ್ದಾರೆ. 
ನೇಹಾ ಗೌಡ ತಾವು ಗರ್ಭಿಣಿ ಎಂಬ ಖುಷಿ ವಿಷ್ಯವನ್ನು ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು. ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ನೇಹಾ ಗೌಡ, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
 ಅವರ ಶಾಕುಂತಲೆ ಫೋಟೋ ಶೂಟ್ ಹಾಗೂ ಕುದುರೆ ಬಳಿ ನಿಂತ ಡಿಫರೆಂಟ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು. ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ನೇಹಾ ಗೌಡಗೆ ಕಲರ್ಸ್ ಕನ್ನಡ ವೇದಿಕೆ ಮೇಲೆ ಸೀಮಂತ ನಡೆದಿತ್ತು. ಸ್ನೇಹಿತೆ ಅನುಪಮ ಗೌಡ ಮನೆ ಪ್ರವೇಶದಲ್ಲಿ ಮಿಂಚಿದ್ದ ನೇಹಾ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಗರ್ಭಾವಸ್ಥೆಯ ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದೀಗ ಪಾಲಕರಾಗಿ ಬಡ್ತಿ ಪಡೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.