ಮತ್ತೆ ಹಂಸ ಹಿಂದೆ ಬಿದ್ದ ಲಾಯರ್ ಜಗದೀಶ್, ಹಂ ಸ ಗಂಡ ವಾರ್ನಿಂಗ್
Nov 6, 2024, 16:36 IST
|
ಕಳೆದ ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಮೊದಲ ದಿನದಿಂದಲೇ ಬಿಗ್ಬಾಸ್ ಮನೆ ಸಖತ್ ಫನ್ ಆಗಿಯೇ ಇದೆ. ಬಿಗ್ಬಾಸ್ ಮನೆಯಲ್ಲಿ ಸಖತ್ ಎಂಟರ್ಟೈನ್ಮೆಂಟ್ ಕೂಡಾ ಸಿಗುತ್ತಲೇ ಇದೆ. ಸ್ಪರ್ಧಿಗಳು ಬಹಳಷ್ಟು ಉತ್ಸಾಹದಿಂದ ಆಡುತ್ತಿದ್ದಾರೆ. ಅದರೊಂದಿಗೆ ಬಿಗ್ಬಾಸ್ ಮನೆಯಲ್ಲಿ ಕೆಲ ಲವ್ಸ್ಟೋರಿಯೂ ಶುರುವಾಗಿ ಕೂಡಾ ಮುಗಿದಿದೆ .
ಅದರಲ್ಲೊಂದು ಲಾಯರ್ ಜಗದೀಶ್ ಹಾಗೂ ಹಂಸ ಅವರದು.ಹಂಸ ಅವರನ್ನ “ಹಮ್ಸ್” ಅಂತಲೇ ಜಗದೀಶ್ ಕರೆಯುತ್ತಿದ್ದರು. ಇದರ ಜೊತೆಗೆ ಐ ಲವ್ ಯು ಕ್ಯಾಪ್ಟನ್ ಅಂತಲೇ ಪ್ರಪೋಸ್ ಕೂಡ ಮಾಡಿದ್ದರು. ದೊಡ್ಮನೆಯಲ್ಲಿ ಒಂದು ಹೊಸ ಲವ್ ಸ್ಟೋರಿ ಶುರು ಆದಂತೆ ಇದೆ. ಈ ಲವ್ ಸ್ಟೋರಿ ವಿಭಿನ್ನವಾಗಿಯೇ ಇತ್ತು.
https://www.youtube.com/live/HUR3zCSU_Yc?si=184AaWz-TUMIPAqJ
ಅಷ್ಟಕ್ಕೂ ಲಾಯರ್ ಜಗದೀಶ್ ಈ ಒಂದು ಸ್ಟೋರಿಯಲ್ಲಿ ಹೀರೋ ಆಗಿದ್ದಾರೆ. ಕ್ಯಾಪ್ಟನ್ ಹಂಸ ಈ ಸ್ಟೋರಿಯ ಹೀರೋಯಿನ್ ಆಗಿದ್ದಾರೆ. ಇವರ ಜೋಡಿಯ ಲವ್ ಸ್ಟೋರಿಯಲ್ಲಿ ಮುಂಗಾರು ಮಳೆ ಆ ಸೀನ್ ಕ್ರಿಯೇಟ್ ಆಗಿದೆ ಎಂದೆಲ್ಲ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡಿತ್ತು. ಆದರೆ ಈದೀಗ ಈ ಜೋಡಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದೆ.
ಆಚೆ ಬಂದ ಬೆನ್ನಲ್ಲೇ ಹಲವಾರು ಚಾನಲ್ ಗಳ ಸಂದರ್ಶನದಲ್ಲಿ ಭಾಗಿ ಆಗಿದೆ. ಇನ್ನು ಕ್ಯಾಮರಾ ಮುಂದೆ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದಾರೆ.ಅಂತೂ ಇಂತೂ ಯಂಗ್ ಜೋಡಿಗಿಂತ ಈ ಜೋಡಿಯ ಕೆಮೆಸ್ಟ್ರಿಯೇ ಪ್ರೇಕ್ಷಕರಿಗೆ ಮಸ್ತ್ ಮಜಾ ಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.