ಪಬ್ಲಿಕ್ ಟಿವಿ ರಂಗಣ್ಣನಿಗೆ ಓಪನ್ ಚಾಲೆಂಜ್ ಹಾಕಿದ ಲಾಯರ್ ಜಗದೀಶ್, ರಂಗಣ್ಣ ಮೌನ
Sep 20, 2024, 08:04 IST
|
ವಾದಗಳಿಗಿಂತ ವಿವಾದಗಳಿಂದಲೇ ಫೇಮಸ್ ಆಗಿರುವ ಲಾಯರ್ ಜಗದೀಶ್ ಇದೀಗ ಮತ್ತೊಂದು ಹೊಸ ಶಾಕ್ ನೀಡಿದ್ದಾರೆ. ಹೌದು ಜಗದೀಶ್ ವಿರುದ್ಧ 2022ರಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಆದರೆ ಅವರು ಕೋರ್ಟ್ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.
ತದನಂತರದಲ್ಲಿ ಅನೇಕ ವಿವಾದಗಳ ಸುಳಿಯಲ್ಲಿ ಸಿಲುಕಿದ್ದರು. ಈ ಮೊದಲು ರವಿ ಚೆನ್ನಣ್ಣನವರ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ಹಲವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೊದ ಮೊದಲು ಇವರ ಮಾತುಗಳ ನಂಬದ ಜನ ಇದೀಗ ಪರಾಮರ್ಶಿಸಿ ನಂಬುತ್ತಿದ್ದಾರೆ.
ವಕೀಲ್ ಸಾಬ್ ಎಂದೇ ಲಾಯರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ವೈರಲ್ ಆಗುತ್ತಿದ್ದು, ಸಾವಿರಾರು ಜನ ಇವರನ್ನು ಫಾಲೋ ಸಹ ಮಾಡುತ್ತಿದ್ದಾರೆ. ಇದೀಗ ಪಬ್ಲಿಕ್ ಟಿವಿ ರಂಗಣ್ಣನ ಆಸ್ತಿ ವಿಚಾರವಾಗಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.
ಇನ್ನು ಡಿಫರ್ಮರ್ಶನ್ ಕೇಸ್ ಹಾಕ್ತೀನಿ ಅಂತ ಅಂದಿರುವ ಪಬ್ಲಿಕ್ ಟಿವಿಯ ಹೆಡ್ ರಂಗಣ್ಣ ಅವರಿಗೆ ಕೇಸ್ ದಾಖಲಿಸಿ ಕೋರ್ಟ್ ಅಲ್ಲೇ ಇತ್ಯರ್ಥವಾಗಲಿ ಎಂದು ತಿಳಿಸಿದ್ದಾರೆ.ಕೆಲವೊಮ್ಮೆ ಮಾಧ್ಯಮಗಳಿಗೂ ಇವರು ಗಂಭೀರವಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಉದಾಹರಣೆಗಳು ಇವೆ. ಕೆಲವೊಮ್ಮೆ ಇವರ ಮಾತುಗಳನ್ನು ಟ್ರೋಲ್ ಪೇಜ್ಗಳು ಟ್ರೋಮ್ ಮಾಡಿದ್ದೂ ಇದೆ. ಟ್ರೋಲ್, ಮೀಮ್ಸ್ಗಳ ಮೂಲಕವೂ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿರುವ ಕಾರಣ ಜನ ನಂಬಲು ತಯಾರಿಲ್ಲ
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.