ಕಿಚ್ಚನ ಮುಂದೆಯೇ ಹಂಸಾ ಅವರ ಕೈಹಿಡಿದು ಎಳೆದ ಲಾಯರ್ ಜಗದೀಶ್, ನಂತರ ಆಗಿದ್ದೇ ಬೇರೆ
Oct 14, 2024, 08:53 IST
|
ಬಿಗ್ಬಾಸ್ ಕನ್ನಡ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇಂದು ಎರಡನೇ ವಾರದ ಪಂಚಾಯಿತಿಯ ಎರಡನೇ ದಿನ. ಭಾನುವಾರದ ಎಪಿಸೋಡ್ ನಲ್ಲಿ ಸಾಕಷ್ಟು ತಮಾಷೆ, ಕಾಲೆಳೆತ, ಮೋಜು ಮಸ್ತಿಗಳು ಇರುತ್ತವೆ. ಇದರ ಜೊತೆಗೆ ಎಲಿಮಿನೇಷನ್ ಸಹ ಇರುತ್ತದೆ. ಬಿಗ್ಬಾಸ್ ಪ್ರಾರಂಭವಾದಾಗಿನಿಂದಲೂ ಲಾಯರ್ ಜಗದೀಶ್ ಮನೆಯ ಮುಖ್ಯ ಸದಸ್ಯರಾಗಿದ್ದಾರೆ.
ಲಾಯರ್ ಜಗದೀಶ್, ಹಂಸಾ ನಡುವೆ ಭಿನ್ನ ರೀತಿಯ ಗೆಳೆತನ ಇದೆ. ಒಮ್ಮೆ ಬಹಳ ಜಗಳವಾಡುತ್ತಾರೆ ಆ ನಂತರ ಸಂಧಾನ ಮಾಡಿಕೊಳ್ಳುತ್ತಾರೆ. ಭಾನುವಾರದ ಎಪಿಸೋಡ್ನಲ್ಲಿ ಹಂಸಾ ಅವರೇ ಹೇಳಿರುವಂತೆ ‘ಅವರನ್ನು ವಾದದಲ್ಲಿ ಗೆಲ್ಲಲು ಸಾಧ್ಯ ಆಗಲ್ಲ, ಕನಿಷ್ಟ ಮನಸ್ಸಾದರೂ ಗೆದ್ದು ಒಲಿಸಿಕೊಳ್ಳೋಣ’ ಎಂದಿದ್ದಾರೆ. ಇದನ್ನು ಕೇಳಿ ನಕ್ಕಿರುವ ಸುದೀಪ್, ಇಬ್ಬರ ಕೈಯಲ್ಲಿ ಒಂದು ಡ್ಯಾನ್ಸ್ ಸಹ ಮಾಡಿಸಿದ್ದಾರೆ.
ಮೊದಲ ವಾರ ಬಿಗ್ಬಾಸ್ ಬಾಗಿಲು ಒಡೆಯುವುದಾಗಿ, ಬಿಗ್ಬಾಸ್ ಶೋ ನಿಲ್ಲಿಸುವುದಾಗಿ ಧಮ್ಕಿ ಹಾಕಿ ಮನೆಯಲ್ಲಿ ಎಲ್ಲರ ಮೇಲೆ ಅಬ್ಬರಿಸಿದ್ದ ಲಾಯರ್ ಜಗದೀಶ್ ಎರಡನೇ ವಾರಕ್ಕೆ ತುಸು ಮೆತ್ತಗಾಗಿದ್ದಾರೆ. ಸುದೀಪ್ ಜೊತೆಗೆ ಮಾತನಾಡುತ್ತಾ ಒಮ್ಮೆಲೆ ಭಾವುಕರಾಗಿದ್ದಾರೆ ಜಗದೀಶ್ ಅವರು. ಇಲ್ಲಿ ಆಡಬೇಕು ಜನರ ಮನವ ಗೆಲ್ಲಬೇಕು ಅಂದಿದ್ದಾರೆ.
ನಾಮಿನೇಶನ್ ಅಲ್ಲಿ ಹಂಸ ಅವರನ್ನು ಸೇವ್ ಮಾಡಿದ ಅವರು ನಾನು ಹೊರಗೆ ಸದಾ ವಿವಾದ ಅದು ಇದು ಎಂದು ಇದ್ದವನು. ನನ್ನೊಳಗು ಒಬ್ಬ ಮಗು ಇದ್ದಾನೆ ಎಂದು ತೋರಿಸೋಣ ಎಂದೇ ಇಲ್ಲಿಗೆ ಬಂದಿದ್ದೆ’ ಎಂದರು ಜಗದೀಶ್. ‘ಇಲ್ಲಿಗೆ ಬಂದ ಮೇಲೆ ನಾನು ಹೊರಗೆ ಏನೆಲ್ಲ ಮಾಡಬಹುದಿತ್ತು, ಏನೆಲ್ಲ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ.
ಇಲ್ಲಿ ಕೆಲವರಿಗೆ ನೇಲ್ ಪಾಲಿಶ್ ಹಾಕಿದೆ. ಆದರೆ ಎಂದಿಗೂ ನಾನು ನನ್ನ ಪತ್ನಿಗೆ ನೇಲ್ ಪಾಲಿಶ್ ಹಾಕಿಲ್ಲ. ನಾನು ಯಾಕೆ ನನ್ನ ಪತ್ನಿಯೊಂದಿಗೆ ಹೀಗೆ ಇರಲಿಲ್ಲ ಎಂದು ನನಗೆ ಬೇಸರ ಆಯ್ತು. ನಾನು ಆಕೆಗೆ ಮೋಸ ಮಾಡಿದೆನಾ ಎಂದೆಲ್ಲ ಅನ್ನಿಸಲು ಶುರುವಾಯ್ತು ಎಂದು ಉಮ್ಮಳಿಸಿ ಬಂದ ದುಃಖವನ್ನು ತಡೆಹಿಡಿದರು ಜಗದೀಶ್.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.