ಲಾಯರ್ ಜಗದೀಶ್ ಕಾ ಚಾ ಕಾಮಿಡಿ, ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್

 | 
Bu
 ಬಿಗ್‌ ಬಾಸ್‌ ಸೀಸನ್‌ 11 ಏಳನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳು ತಾವು ಗೆಲ್ಲಬೇಕೆಂದ ಹಟದಿಂದ ಎಲ್ಲಾ ಟಾಸ್ಕ್‌ಗಳಲ್ಲೂ ಹುಮ್ಮಸ್ಸಿನಿಂದ ಆಟವಾಡುತ್ತಿದ್ದಾರೆ. ಇದರ ಜೊತೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಕೂಡಾ ಆರಂಭವಾಗಿ. ಕೆಲವರ ಜಗಳವಂತೂ ತಾರಕಕ್ಕೆ ಏರಿದೆ ನಾಮಿನೇಷನ್‌ನಿಂದ ಪಾರಾಗುವ ಟಾಸ್ಕ್‌ನಲ್ಲಿ ರೆಫ್ರಿ ಜಗದೀಶ್‌, ಲಾಯರ್‌ ಜಗದೀಶ್‌ ಇಬ್ಬರಿಗೂ ಮಾತಿನ ಚಕಮಕಿ ನಡೆದಿತ್ತು. ಹೀಗೆ ವಾರ ಕಳೆದು ವಾರದ ಕಥೆ ಕಿಚ್ಚನ ಜೊತೆ ಬಂದಿದೆ.
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ನಡೆಯುತ್ತಿರುವುದೇ ಸ್ವರ್ಗ, ನರಕದ ಕಾನ್ಸೆಪ್ಟ್ ಮೇಲೆ. ಸ್ವರ್ಗನಿವಾಸಿಗಳಿಗೆ, ನರಕವಾಸಿಗಳಿಗೆ ಪ್ರತ್ಯೇಕ ನಿಯಮಗಳಿವೆ. ಆದರೆ, ಮೊದಲ ದಿನವೇ ನಿಯಮಗಳನ್ನ ಗಾಳಿಗೆ ತೂರಿದವರು ಜಗದೀಶ್. ಮಾನವೀಯತೆ ಎಂದು ಹೇಳಿಕೊಂಡು ನಿಯಮಗಳ ಮುರಿದ ಜಗದೀಶ್‌ಗೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ತಮ್ಮದೇ ಶೈಲಿಯಲ್ಲಿ ಕಿಚ್ಚ ಸುದೀಪ್‌ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ.
ಮಾತ್ತೆತ್ತಿದರೆ ಸಾಕು, ‘’ನಾನು ಮುಂದಿನ ಸಿಎಂ ಕ್ಯಾಂಡಿಡೇಟ್. ನಾನು ನಾಳೆ ಸಿಎಂ ಆಗ್ತೀನಿ’’ ಎನ್ನುವ ಜಗದೀಶ್‌ಗೆ ‘’ನಿಯಮ ಪಾಲಿಸದ ನೀವು ಸಿಎಂ ಆಗೋಕೆ ಹೇಗೆ ಸಾಧ್ಯ?’’ ಅಂತ ಪ್ರಶ್ನಿಸುವ ಮೂಲಕ ಛೂಬಾಣ ಬಿಟ್ಟಿದ್ದಾರೆ ಕಿಚ್ಚ ಸುದೀಪ್‌. ಇನ್ನು ಧನರಾಜ್ ಆಚಾರ್ ಬಳಿ ಯಾವ ಸದಸ್ಯರು ಯಾರಂತೆ ಎಂದು ಕೇಳಿದರೆ. ಭವ್ಯಾ ಗೌಡ ಜಿಂಕೆಯಂತೆ.ಐಶ್ವರ್ಯ ಆನೆಯಂತೆ. ಲಾಯರ್ ಜಗದೀಶ್ ಉಸರವಳ್ಳಿಯಂತೆ ಏಕೆಂದ್ರೆ ಅವರು ವರ್ಡ್ ಅನ್ನೇ ಪರ್ಚೆಸ್ ಮಾಡ್ತೇನೆ ಅಂತ ಅದೆಂತಾ ಅಂಗಡಿಯಲ್ಲಿ ಸಿಗೋ ಕಾಚವ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಜಗದೀಶ್ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡ ಸುದೀಪ್ ರೂಲ್ಸ್‌ನ ಚಾಲೆಂಜ್‌ ಮಾಡುತ್ತಿದ್ದ ನೀವು ಅಲ್ಲಿಂದ ಹೇಳಿ.. ನಾವು ಹೇಗೆ ಶೋನ ನಡೆಸಿಕೊಡೋಣ? ನೀವು ಹೇಳಿದ್ಮೇಲೆ ಇವತ್ತಿಂದ ನಾವು ಡಿಸೈಡ್ ಮಾಡ್ತೀವಿ ಹೌ ಟು ರನ್‌ ದಿ ಶೋ.. ಯಾಕಂದ್ರೆ ಇದು ಬಿಗ್ ಬಾಸ್ ಮನೆ. ಪರಪ್ಪನ ಅಗ್ರಹಾರ ಜೈಲಲ್ಲ. ನಿಯಮಗಳನ್ನ ಪಾಲಿಸಿ ಅಂತ ಮನವಿ ಇರುತ್ತೆ. ಕೆಲವು ತೀರ್ಮಾನಗಳನ್ನ ಬಿಗ್ ಬಾಸ್ ತೆಗೆದುಕೊಳ್ಳಬಹುದು. ರೂಲ್ಸ್ ಫಾಲೋ ಮಾಡ್ತಿಲ್ಲ ಅಂತ ಹೊರಗೆ ಹಾಕೋದು ಸುಲಭ. ಆದರೆ, ನಿಮ್ಮ ವ್ಯಕ್ತಿತ್ವವನ್ನ ಕಾಪಾಡುವುದು ನಮ್ಮ ಕರ್ತವ್ಯ. ಆ ಪ್ರಯತ್ನವನ್ನ ನಾವು ಮಾಡ್ತಿದ್ದೇವೆ. ನಿಯಮಗಳನ್ನ ಈಸಿಯಾಗಿ ಮುರಿಯುವುದಾದರೆ, ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಅಂತ ಎಂದು ಖಾರವಾಗಿಯೇ ಸುದೀಪ್ ಕೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.