ಲೋಕಸಭಾ ಚುನಾವಣೆ ಫೈನಲ್ ಸವೆ೯, ಕನಾ೯ಟಕ ದಲ್ಲಿ ಶಾಕಿಂಗ್ ರಿಸಲ್ಟ್

 | 
ಹಹ

ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹೇಳಿಕೆಯನ್ನು ಒಪ್ಪಿಕೊಂಡ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಸರಿ ಪಕ್ಷವು ಕರ್ನಾಟಕ ಹೊರತುಪಡಿಸಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ದುರ್ಬಲವಾಗಿರುವ ರಾಜ್ಯಗಳಲ್ಲಿ ಮತ್ತು ಅಸ್ತಿತ್ವವೇ ಇಲ್ಲದ ಎರಡು ಕಡೆ ತನ್ನ ಸ್ಥಾನಗಳನ್ನು ಮತ್ತು ಮತಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಮಾತನಾಡಿದ ಕಿಶೋರ್, ಬಿಜೆಪಿ ಪ್ರಬಲವಾಗಿರುವ ಕಡೆ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಪಕ್ಷವಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಗಾಗಲಿ ಗೆಲುವು ಸುಲಭವಾಗಿರಲಿಲ್ಲ. ಆದರೆ ಪ್ರತಿಪಕ್ಷಗಳು ಬಿಜೆಪಿಯನ್ನು ಕಟ್ಟಿಹಾಕುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೂರು ವಿಭಿನ್ನ ಮತ್ತು ವಾಸ್ತವಿಕ ಅವಕಾಶಗಳನ್ನು ಪ್ರತಿಪಕ್ಷಗಳು ಹೊಂದಿದ್ದವು. ಆದರೆ ಸೋಮಾರಿತನ ಮತ್ತು ತಪ್ಪಾದ ತಂತ್ರಗಳಿಂದ ಆ ಅವಕಾಶ ಕಳೆದುಕೊಂಡವು ಎಂದಿದ್ದಾರೆ.

ಬಿಜೆಪಿ ತೆಲಂಗಾಣದಲ್ಲಿ ಮೊದಲ ಅಥವಾ ಎರಡನೆಯ ಪಕ್ಷವಾಗುತ್ತಾರೆ. ಅವರಿಗೆ ಅದು ದೊಡ್ಡ ವಿಷಯವಾಗಲಿದೆ. ಒಡಿಶಾದಲ್ಲಿ ಅವರು ಖಂಡಿತವಾಗಿಯೂ ನಂಬರ್ ಒನ್ ಆಗುತ್ತಾರೆ. ನೀವು ಆಶ್ಚರ್ಯಪಡುತ್ತೀರಿ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಂಬರ್ ಒನ್ ಪಕ್ಷವಾಗಲಿದೆ ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

ಆದರೆ ಸಿಎಎ ವಿಚಾರದಲ್ಲಿ ಮುಸ್ಲಿಮರು ಬಿಜೆಪಿಯ ವಿರುದ್ದ ಇದ್ದಾರೆ, ಅವರ ವೋಟ್ ಟಿಎಂಸಿಗೆ ಬಂದರೆ ಮಾತ್ರ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಹಾಗಾದರೆ ಮಾತ್ರ ಕಳೆದ ಬಾರಿಯಷ್ಟು ಸೀಟ್ ಬಿಜೆಪಿಗೆ ಸಿಗುವ ಸಾಧ್ಯತೆ ಕಮ್ಮಿ. ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಕಳೆದ ಬಾರಿಯಷ್ಟು  ಸ್ಥಾನ ಸಿಗುವುದು ಕಷ್ಟ. ಆದರೆ, ಮೋದಿಯವರ ಪ್ರಚಾರದ ನಂತರ ಚಿತ್ರಣ ಬದಲಾಗಬಹುದು ಎಂದು ಹೇಳಲಾಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.