ಮಗಳ‌ ಜೊತೆ ಅತ್ತೆನೂ ಮಂಚ ಹತ್ತಬೇಕು ಎಂದ ಅಳಿಯ, ಲೋಕನಾಥ್ ಸಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್

 | 
Nd
ಶ್ರೀಮಂತ ಉದ್ಯಮಿಯ ಕೊಲೆ ಅಂದ್ರೆ ತಲೆ ಕೆಡೋದು ಗ್ಯಾರಂಟಿ ಹೌದು ಕಳೆದ ಮಾರ್ಚ್ 22 ರಂದು ಬೆಂಗಳೂರಿನ ಹೆಸರುಘಟ್ಟ ಬಳಿಯ ಬಿಜಿಎಸ್ ಲೇಔಟ್ ಬಳಿ ಮಾಗಡಿ ಶಾಸಕ ಎಚ್ .ಸಿ.ಬಾಲಕೃಷ್ಣ ಆಪ್ತ ಉದ್ಯಮಿ ಲೋಕನಾಥ್ ಸಿಂಗ್ ನ ಕೊಲೆಯಾಗಿತ್ತು. ಇದೀಗ ಕೊಲೆ ಮಾಡಿದ್ದು ಹಳೇ ದುಷ್ಮನ್​ಗಳು, ಯಾವುದೇ ರೌಡಿಶೀಟರ್ ಗಳಲ್ಲ. ಲೋಕಸನಾಥ್ ಸಿಂಗ್ ನನ್ನು ಅತ್ತೆಯೇ ಕೊಲೆ ಮಾಡಿದ್ದಾಳೆ. ಇನ್ನು ಅಚ್ಚರಿ ಅಂದ್ರೆ, ತನ್ನ ಗಂಡನ ಕೊಲೆಗೆ ಹೆಂಡ್ತಿಯೇ ಅಮ್ಮನ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದೆ.
ಸದ್ಯ ಸೋಲದೇವನಹಳ್ಳಿ ಪೊಲೀಸರು ಅಮ್ಮ ಮಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಕಳೆದ ಡಿಸೆಂಬರ್ ನಲ್ಲಿ ರಿಯಲ್ ‌ಎಸ್ಟೆಟ್ ಉದ್ಯಮಿ ಕೃಷ್ಣ ಸಿಂಗ್ ಹಾಗೂ ಹೇಮ ದಂಪತಿಯ ಮಗಳು ಎಂಬಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯಶಸ್ವಿನಿಯನ್ನ 37 ವರ್ಷದ ಲೋಕನಾಥ್ ಸಿಂಗ್ ಕುಣಿಗಲ್ ಗೆ ಕರೆದೊಯ್ದು ರಿಜಿಸ್ಟರ್ ಮದುವೆಯಾಗಿದ್ದ. ಆದರೆ ಮದುವೆ ವಿಚಾರ ಹುಡುಗಿ ಕುಟುಂಬಕ್ಕೆ ಪೋಷಕರಿಗೆ ಇಷ್ಟ ಇಲ್ಲದ ಕಾರಣ, ಕುಣಿಗಲ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿ, ಪತ್ನಿಯನ್ನ ಅವರ ಪೋಷಕರ ಜೊತೆಯೇ ಬಿಟ್ಟಿದ್ದ. 
ಕೆಲ ದಿನಗಳ ಬಳಿಕ ಲೋಕನಾಥ್ ಸಿಂಗ್​ನ ವ್ಯವಹಾರ, ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಯಶಸ್ವಿನಿಗೆ ತಿಳಿದಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಪತ್ನಿ ಜೊತೆ ಜಗಳ ಕೂಡ ಆಗಿದೆ. ಎರಡು ವಾರದ ಹಿಂದೆ ಪತ್ನಿಯ ಕುಟುಂಬಕ್ಕೆ ಮದುವೆಯಾಗಿರೋ ವಿಚಾರ ಗೊತ್ತಾಗಿದೆ. ಈ ವೇಳೆ ಪತ್ನಿ ಕುಟುಂಬಸ್ಥರು ಜೊತೆ ಲೋಕನಾಥ್ ಸಿಂಗ್ ಗೆ ಗಲಾಟೆಯಾಗಿದೆ.ಬಳಿಕ ಲೋಕನಾಥ್ ಪತ್ನಿ ಯಶಸ್ವಿನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಮಗಳ‌ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ನೊಂದ ಯಶಸ್ವಿ ತಾಯಿ ಹೇಮ, ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಮೂಹರ್ತ ಫಿಕ್ಸ್ ಮಾಡಿದ್ದರು.
ಹೇಮ ಹಾಗೂ ಮಗಳು ಯಶಸ್ವಿನಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಯಶ್ವಿನಿ ನಿನ್ನ ಜೊತೆ ಮಾತನಾಡಬೇಕೆಂದು ಲೋಕನಾಥನನ್ನು​​ ಚಿಕ್ಕಬಾಣವರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಇವರ ಹಿಂದೆಯೇ ಯಶಸ್ವಿ ತಾಯಿ ಹೇಮ ಸಹ ಆಟೋದಲ್ಲಿ ಕಾರನ್ನು ಫಾಲೋ ಮಾಡಿಕೊಂಡು ಹೋಗಿದ್ದಳು. ಬಳಿಕ ನಿರ್ಜನ ಪ್ರದೇಶದಲ್ಲಿ ನಿದ್ದೆ ಮಾತ್ರೆ ಬೆರಸಿದ್ದ ಊಟವನ್ನು ತಿನ್ನಿಸಿದ್ದಾಳೆ. ಹಾಗೇ ಪತಿಗೆ ಮದ್ಯ ಕುಡಿಸಿದ್ದಾಳೆ. ನಂತರ ಲೋಕನಾಥ್​ ಮತ್ತಿನಲ್ಲಿ ತೇಲಾಡಿದ್ದಾನೆ. ಆಗ ಹೇಮ ಲೋಕನಾಥನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.