ದ್ವಾರಕಾದಲ್ಲಿ ಶ್ರೀಕೃಷ್ಣನ ಶರೀ ರ ಪತ್ತೆ, ಇದು ನಿಜವೋ ಸುಳ್ಳೋ ಎಂದವರಿಗೆ ಕಾದಿತ್ತು ಶಾ ಕ್
ಕೃಷ್ಣಾವತಾರದ ಕಥೆಗಳಲ್ಲಿ ದ್ವಾರಕ ನಗರದ ಬಗ್ಗೆ ಕೂಡ ವರ್ಣನೆ ಕಂಡುಬರುತ್ತದೆ. ಪುರಾಣಗಳ ಪ್ರಕಾರ ಈ ನಗರವನ್ನು ಸಾಕ್ಷಾತ್ ಶ್ರೀ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಮಹಾಭಾರತಕ್ಕೆ ಸಂಬಂಧಪಟ್ಟ ಈ ನಗರದ ಬಗ್ಗೆ ನಾವು ಬರೀ ಕಲ್ಪನೆ ಮಾಡಿಕೊಳ್ಳಬಹುದು ಅಷ್ಟೇ. ವಾತ್ಸವದಲ್ಲಿ ಇದು ಕಂಡುಬಂದರೆ ಬಹಳ ಥ್ರಿಲ್ಲಿಂಗ್ ಆಗಿ ಇರುತ್ತದೆ. ಹಾಗೂ ಇದು ನಿಜ ಎಂದು ಸಾಬೀತು ಮಾಡಲು ಸಾಕ್ಷಿಯಾಗುತ್ತದೆ. ಚರಿತ್ರೆಕಾರರ ಪ್ರಕಾರ ದ್ವಾರಕಾ ನಗರವು ಸರಿಸುಮಾರು 9,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.
ಪುರಾಣದಲ್ಲಿ ತಿಳಿಸಿದ ಪ್ರಕಾರ ಮಹಾಭಾರತದ ಕುರುಕ್ಷೇತ್ರ ಯುದ್ದ ನಡೆದ ಬಳಿಕ ಮುವತ್ತಾರು ವರ್ಷಗಳ ನಂತರ ಈ ನಗರ ಸಮುದ್ರದಲ್ಲಿ ಮುಳುಗಿ ಹೋಗಿದೆ ಎಂದು ಎಲ್ಲರಿಗೂ ಗೊತ್ತು. ಈ ರೀತಿ ಆಗಲು ಮುಖ್ಯ ಕಾರಣ ಗಾಂಧಾರಿ ಶ್ರೀ ಕೃಷ್ಣನಿಗೆ ಕೊಟ್ಟ ಶಾಪ. ಹಾಗೆಯೇ ಋಷಿಮುನಿ ಒಬ್ಬರು ಶ್ರೀಕೃಷ್ಣನ ಮಗನಾದ ಸಾಂಬಾನಿಗೆ ಕೊಟ್ಟ ಶಾಪ ಎಂದು ಪುರಾಣದಲ್ಲಿ ಹೇಳಲಾಗಿದೆ. ಇಂತಹ ಕಥೆಗಳ ಆಧಾರದ ಮೇಲೆ ಚರಿತ್ರಕಾರರು ಈ ನಗರವು ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವುದನ್ನು ನಂಬಿ ಅದನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ ಇದರ ಅವಶೇಷಗಳು ಗುಜರಾತಿನ ಸಮೀಪದ ಅರೇಬಿಯ ಸಮುದ್ರದಲ್ಲಿ ಸಿಕ್ಕಿವೆ. ದ್ವಾರಕ ನಗರದ ವಿಶೇಷತೆ ಏನೆಂದರೆ ಈ ನಗರಕ್ಕೆ ಅನೇಕ ದ್ವಾರಗಳು ಇವೆ. ಹಾಗು ಚರಿತ್ರೆಕಾರರ ಕೊಟ್ಟಿರುವ ರಿಪೋರ್ಟ್ ಪ್ರಕಾರ ಆ ದ್ವಾರಗಳಿಗೆ ಸಂಬಂಧಪಟ್ಟ ಅವಶೇಷಗಳು ಇನ್ನು ಇದೆ ಎಂದು ಗೊತ್ತಾಗುತ್ತದೆ. ಗುಜರಾತಿಗೆ ಪಶ್ಚಿಮ ಭಾಗದಲ್ಲಿ ಸಮುದ್ರದ ದಡದಲ್ಲಿ ಇಂದಿಗೂ ಧಾರ್ಮಿಕ ಕ್ಷೇತ್ರಗಳು ಬಹಳಷ್ಟಿವೆ.
ದ್ವಾರಕ ಭಾರತ ದೇಶದಲ್ಲಿನ ನಾಲ್ಕು ಧಾಮಗಳಲ್ಲಿ ಒಂದು. ಭಾರತದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಇದು ಕೂಡ ಒಂದು ಎನ್ನುವ ಖ್ಯಾತಿಯನ್ನು ಪಡೆದಿದೆ. ಎರಡು ದ್ವಾರಕ ನಗರಗಳು ಇವೆ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಗೋಮತಿ ನದಿಯ ತಟದ ಮೇಲೆ ಇದೇ, ಇದನ್ನು ಧಾಮ ಎಂದು ಕರೆಯಲಾಗುತ್ತದೆ. ಇನ್ನೊಂದು ಸಮುದ್ರದ ಗರ್ಭದಲ್ಲಿರುವುದೇ ದ್ವಾರಕಾಪುರಿ. ಅಲ್ಲಿ ಶ್ರೀ ಕೃಷ್ಣನ ದೇಹವಿದೆ ಎನ್ನುವ ಪ್ರತೀತಿ ಈಗಲೂ ಇದೆ.ಇಲ್ಲಿಗೆ ಸೇರಬೇಕು ಎಂದರೆ ಸಮುದ್ರ ಮಾರ್ಗದಿಂದ ಮಾತ್ರ ಹೋಗಬೇಕಾಗುತ್ತದೆ. 2005ರಲ್ಲಿ ಭಾರತದ ಆರ್ಕಿಯಾಲಜಿಸ್ಟ್ ಗಳ ಮೂಲಕ ದ್ವಾರಕ ನಗರದ ಇರುವನ್ನು ಕಂಡು ಕೊಳ್ಳಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.