ಅಯೋಧ್ಯೆಗೆ ಸಾಕ್ಷಾತ್ ರಾಮ ಸೀತೆ ಲಕ್ಷ್ಮಣ ಭೇಟಿ, ಸೀರಿಯಲ್ ದೇವರನ್ನು ನೋಡಲು ಮೆಚ್ಚಿಕೊಂಡ ಭಕ್ತರು

 | 
H

ಇಗಾಗಲೇ ರಾಮ ಮಂದಿರದಲ್ಲಿ ಧಾರ್ಮಿಕ ವಿಧಿ ಮಿಧಾನಗಳು ಆರಂಭವಾಗಿದ್ದು, ಜನವರಿ 22 ರಂದು ನಡೆಯಲಿರುವ ರಾಮ ಲಾಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ.  ಇದೀಗ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ  ಸಮಾರಂಭಕ್ಕೂ ಮುನ್ನವೇ ರಾಮ, ಲಕ್ಷ್ಮಣ ಮತ್ತು ಸೀತೆ ಅಯೋಧ್ಯೆಗೆ ಆಗಮಿಸಿದ್ದಾರೆ. ಹೌದು ರಮಾನಂದ್ ಸಾಗರ್ ಅವರ  ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್.

ಸೀತೆಯ ಪಾತ್ರವನ್ನು ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಹಾಗೂ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದ ಸುನೀಲ್ ಲಾಹಿರಿ ಈ ಮೂವರು ಜೊತೆಯಾಗಿ  ಆಗಮಿಸಿದ್ದಾರೆ. ಅವರಿಗೂ ಈಗಾಗಲೇ ಆಹ್ವಾನ ದೊರಕಿದ್ದು,   ಇದೀಗ ರಾಮ ಲಾಲ್ಲ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮೊದಲೇ ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಗೆ ಆಗಮಿಸಿದ್ದಾರೆ. ಈ ಮೂವರು ಜೊತೆಯಾಗಿ ಇಂದು ಅಯೋಧ್ಯೆಗೆ ಆಗಮಿಸಿದ್ದು, ಈ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. 1987 ರಿಂದ 1988 ರವೆಗೆ ಸುದೀರ್ಘ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಕೊರೊನಾ ಸಮಯದಲ್ಲಿಯೂ ಪ್ರಸಾರ ಮಾಡಲಾಗಿತ್ತು. ಆಗಲೂ ಈ ಅತ್ಯದ್ಭುತ  ಭರ್ಜರಿ ಪ್ರದರ್ಶನವನ್ನು ಕಂಡಿತ್ತು. 80ರ ದಶಕದಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದ ಹೊತ್ತಿನಲ್ಲಿ ಜನರು ಟಿವಿಗೆ ಪೂಜೆ ಮಾಡಿ ಧಾರಾವಾಹಿ ನೋಡುತ್ತಿದ್ದರು. 

ಇನ್ನೂ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದ ಅರುಣ್ ಗೋವಿಲ್ ಅವರು ಸ್ಕ್ರೀನ್ ಮೇಲೆ ಬಂದರಂತೂ ಜನರು ಕೈ ಮುಗಿದು  ಕೂರುತ್ತಿದ್ದರು. ದೀಪಿಕಾ ಚಿಖ್ಲಿಯಾ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಿ ಹಾಗೂ  ಸುನೀಲ್ ಲಾಹಿರಿ ಅವರು ಲಕ್ಷ್ಮಣನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ  ಎಲ್ಲರ ಮನ ಗೆದ್ದಿದ್ದರು.  ಈ ಮೂವರು ಮಹಾನ್ ಕಲಾವಿದರಿಗೂ ಈಗಾಗಲೇ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು. 

ಇದೀಗ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ  ಸಮಾರಂಭಕ್ಕೂ ಮುನ್ನವೇ ರಾಮ, ಲಕ್ಷ್ಮಣ ಮತ್ತು ಸೀತೆ ಅಯೋಧ್ಯೆಗೆ ಆಗಮಿಸಿದ್ದಾರೆ. ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಈ ಮೂವರಿಗೂ ಭರ್ಜರಿ ಸ್ವಾಗತ ದೊರಕಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.