ರಾಮ ಮಂದಿರ ನಿರ್ಮಾಣದ ವೇಳೆ ಶ್ರೀರಾಮನ ಪವಾಡ, ಶಾಸ್ತ್ರಜ್ಞರಲ್ಲಿ ಭಯದ ವಾತಾವರಣ
ಅಯೋಧ್ಯೆ ರಾಮ ಮಂದಿರ ಬಗ್ಗೆ ಕೋಟ್ಯಾಂತರ ಹಿಂದೂಗಳು ಬಹುವರ್ಷಗಳಿಂದ ಕಾಣುತ್ತಿರುವ ಕನಸು ನನಸಾಗುವ ಸಮಯ ಬಂದಿದೆ. ಜನವರಿಯಲ್ಲಿ ಶ್ರೀರಾಮ ಮಂದಿರದಲ್ಲಿ ಮರ್ಯಾದ ಪುರುಷೋತ್ತಮನನ್ನು ಕಣ್ತುಂಬಿಕೊಳ್ಳಬಹುದು. ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದೆ.
ಮೊಘಲ್ ಚಕ್ರವರ್ತಿ 1528 ಮತ್ತು 1529 ರ ನಡುವೆ ಬಾಬರಿ ಮಸೀದಿ ನಿರ್ಮಾಣ ಮಾಡಿದನು. ಆದರೆ ಹಿಂದೂಗಳು ಅದು ಶ್ರೀರಾಮನ ಜನ್ಮಸ್ಥಳವಾಗಿದ್ದು ಅದು ಹಿಂದೂಗಳಿಗೆ ಬೇಕೆಂದು ಸುದೀರ್ಘ ಕಾನೂನು ಹೋರಾಟ ಮಾಡಿದ ಬಳಿಕ 2019 ನವೆಂಬರ್ 9ಕ್ಕೆ ಸುಪ್ರೀಂಕೋರ್ಟ್ ವಿವಾದಿತ ಸ್ಥಳ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದ ಬಳಿಕ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಆಗಸ್ಟ್ 5, 2020ರಲ್ಲಿ ಶಂಕುಸ್ಥಾಪನೆ ಮಾಡಿ ದೇವಾಲಯ ನಿರ್ಮಾಣ ಕಾರ್ಯ ಶುರು ಮಾಡಲಾಯ್ತು.
ನಿರ್ಮಾಣ ಮಾಡಬೇಕು ಎಂದು ಸ್ಥಳ ಪರೀಕ್ಷಿಸಿ ಒಪ್ಪಿಗೆ ಸೂಚಿಸುತ್ತಿದ್ದಂತೆ ಸರಯು ನದಿಯ ನೀರು ಅಲ್ಲಿನ ನೆಲವನ್ನು ಆವರಿಸಿ ನೀರಿನ ಪಸೆ ಆರಂಭವಾಯ್ತು ಹೀಗಾದರೆ ಕಟ್ಟಡ ಕಾಮಗಾರಿ ಸಾಧ್ಯವಿಲ್ಲಾ. ಭೂಕಂಪಕ್ಕೂ ಜಗ್ಗದ ದೇವಾಲಯ ನಿರ್ಮಾಣ ಕಾರ್ಯ ಸಾಧ್ಯವಿಲ್ಲ ಎಂದು ಬೇಸರದಿಂದ ಬಿಡಿ ಕೊಂಡಾಗ ತನ್ನಷ್ಟಕ್ಕೆ ತಾನೇ ಸರಯೂ ನದಿ ಹಿಂದೆ ಸರಿದಿತ್ತು. ಆಗ ನೀರಿನ ಪಸೆ ಇನ್ನಿಲ್ಲವಾಯಿತು. ಇದನ್ನು ಕಂಡು ಎಲ್ಲರೂ ಆಶ್ಚರ್ಯ ಪಟ್ಟರು.
ಎಲ್ಲಾ ಶ್ರೀರಾಮ ಭಕ್ತರು ಜನವರಿ 22 ಬೇಗನೆ ಬರಲಿ ಎಂದು ಬಯಸುತ್ತಿದ್ದಾರೆ, ಈ ದಿನದ ಸಂಭ್ರಮ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಬರೋಬ್ಬರಿ 500ಕ್ಕೂ ಹೆಚ್ಚು ವರ್ಷಗಳ ಸಂಘರ್ಷ ಅಂತ್ಯಗೊಂಡು ಇದೀಗ ಆಯೋಧ್ಯೆಯಲ್ಲಿ ಮತ್ತೆ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ರಾಮಮಂದಿರವನ್ನು ವಿಶಿಷ್ಟ ರೀತಿಯ ಕಲ್ಲು ಬಳಸಿ ನಿರ್ಮಿಸಲಾಗಿದೆ. ರಾಮಮಂದಿರದಲ್ಲಿ ಬಳಸಲಾಗುವ ಪ್ರತಿಯೊಂದು ಕಲ್ಲಿನಲ್ಲಿ ನಿರ್ದಿಷ್ಟ ಪ್ರಮಾಣದ ತೂತು ಮಾಡಲಾಗುತ್ತದೆ. ಬಳಿಕ ಮತ್ತೊಂದು ಕಲ್ಲು ಅದಕ್ಕೆ ಸರಿಹೊಂದುವಂತೆ ಅದರ ಒಳಗೆ ಸೇರಿಸಲಾಗುತ್ತದೆ.
ಹೀಗಾಗಿ ನೀವು ಎರಡು ಕಲ್ಲುಗಳ ನಡುವೆ ಯಾವುದೇ ಸಿಮೆಂಟ್ ನೋಡಲು ಸಾಧ್ಯವಿಲ್ಲ. ರಾಮ ಮಂದಿರದ ಪ್ರಾಥಮಿಕ ನಿರ್ಮಾಣದಲ್ಲಿ ಬಳಸಲಾದ ಎಲ್ಲಾ ಗುಲಾಬಿ ಕಲ್ಲು ರಾಜಸ್ಥಾನದ ಭರತ್‌ಪುರದ ಬನ್ಸಿ ಪಹಾರ್‌ಪುರದಿಂದ ಬಂದಿದೆ. ಗುಲಾಬಿ ಕಲ್ಲು ಬಲಿಷ್ಠವಾಗಿರುವುದರ ಜೊತೆಗೆ ದೀರ್ಘಾವಧಿ ಬಾಳಿಕೆ ಬರಲಿವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.