ಆಟೋದಲ್ಲಿ ಪ್ರೇಮಿಗಳ ಸರಸ ವಿರಸ; ಬೆಂಗಳೂರಿನ ಆಟೋ ಮಾಲೀಕನ ದೂ ರು

 | 
Us

ಅರಳಿ ಘಮಘಮಿಸಬೇಕಾದ ಮಕ್ಕಳು ಅಮಾನುಷವಾಗಿ ಸಾಯುವ ದುರಂತ ಒಂದೆಡೆಯಾದರೆ, ಸಾರಿ ಸಾರಿ ಹೇಳಿದರೂ ಸ್ತ್ರೀಬಲಿಯ ಹಿಂದಿನ ಕಾರಣಗಳನ್ನು ಗಂಭೀರವಾಗಿ ಪರಿಗಣಿಸದ ಸಮಾಜ ಇನ್ನೊಂದೆಡೆ. ಒಂದೆಡೆ, ಇಂತಹ ದಾರುಣ ಸಾವುಗಳು ಕರುಳು ಕೊಯ್ಯುತ್ತಿದ್ದರೆ, ಇನ್ನೊಂದೆಡೆ, ಅವನ್ನು ತಮ್ಮ ಲಾಭದ ಭಿತ್ತಿಯಾಗಿಸಿಕೊಳ್ಳಲು ಯಾರ ಕೊರಳನ್ನಾದರೂ ಕೊಯ್ಯುವ ರಣ ಉತ್ಸಾಹದಲ್ಲಿ, ಹೆಣ ಬೀಳುವುದನ್ನೇ ಕಾಯುವವರ ನಿರ್ಲಜ್ಜೆಯ ನಿರಂಕುಶತೆಯ ಅಟ್ಟಹಾಸ ಬೆಚ್ಚಿಬೀಳಿಸುತ್ತದೆ.

ಜನಪ್ರತಿನಿಧಿಗಳ ಅಸೂಕ್ಷ್ಮ ಹೇಳಿಕೆಗಳು, ವರ್ತನೆಗಳು ವಿಷಾದದ ಬೇಗೆಯನ್ನು ಹೆಚ್ಚಿಸುತ್ತವೆ. ಯಾರಿಗೂ ಅರ್ಥವಾಗದಿರುವುದು ಮತ್ತು ಬೇಕಿಲ್ಲದೇ ಇರುವುದು ತನ್ನದಲ್ಲದ ಕಾರಣಕ್ಕೆ ಹೆಣ್ಣೇ ಯಾಕೆ ಹೆಣವಾಗುತ್ತಿದ್ದಾಳೆ ಎಂಬ ಸತ್ಯ ಮಾತ್ರ. ಇತ್ತೀಚಿಗೆ ಆಟೋ ಡ್ರೈವರ್ ಒಬ್ಬರು ಲವ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಲವ್ ಹೆಸರಲ್ಲಿ ಹತ್ಯೆಗಳಾಗುತ್ತಿವೆ. ಆದರೆ ಲವ್ ಎನ್ನುವುದೇ ಇಲ್ಲ. ಎಲ್ಲವೂ ಸುಳ್ಳು. ಅಪ್ಪ ಅಮ್ಮಂದಿರಿಗೆ ಮೋಸ ಮಾಡಿ ಊರೂರು ಅಡ್ಡಾಡುತ್ತಾರೆ. ಹುಡುಗಿಯರೇ ಅದೆಷ್ಟೋ ಸಲ ಮಾದಕ ಬಟ್ಟೆಗಳನ್ನು ಹಾಕಿಕೊಂಡು ಬಂದು ಹುಡುಗರ ಹಾದಿ ತಪ್ಪಿಸುತ್ತಾರೆ. ಅಷ್ಟೇ ಅಲ್ಲ ಆಟೋದಲ್ಲಿ ಇದ್ದೇನೆ ಎಂಬ ಪ್ರಜ್ಞೆಯೇ ಇಲ್ಲದೆ ತಬ್ಬಿ ಮುದ್ದಾಡಿ ಪ್ರೀತಿಯನ್ನು ಹೇಳುತ್ತಾರೆ. ಮಾದಕ ದ್ರವ್ಯ ಸೇವಿಸಿ ಕೂಗಾಡುತ್ತಾರೆ.

ಹೆಣ್ಣು ಮಕ್ಕಳು ಫ್ಯಾಷನ್ ಪದ್ಧತಿಗೆ ಒಳಗಾಗುತ್ತಿದ್ದಾರೆ. ಈ ಆಧುನಿಕತೆ ಇಡೀ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ.ಹೆಣ್ಣು ಮಕ್ಕಳಿಗೆ ಪಾರ್ಲರ್ ವ್ಯಾಮೋಹ ಹೆಚ್ಚಾಗುತ್ತಿದೆ. ಕೇವಲ ಫ್ಯಾಷನ್‌ಗೋಸ್ಕರ, ಯಾರನ್ನೋ ಮೆಚ್ಚಿಸಕೋಸ್ಕರ ತಮ್ಮ ಉಡುಪು, ನಡವಳಿಕೆ ಬದಲು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಈ ಬಗ್ಗೆ ಯುವತಿಯರು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಆಗ  ಮಾತ್ರ ಹತ್ಯೆಗಳು ನಿಲ್ಲುತ್ತವೆ ಎಂದು ಸಲಹೆ ನೀಡಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.