ತಂಗಿ ಮಧು ಗೌಡಗೆ ಬಹುಬೆಲೆಯ ಗಿಫ್ಟ್ ಕೊಟ್ಟ ಅಣ್ಣ ಮಧನ್ ಗೌಡ, ಫಿದಾ ಆದ ಭಾವ
Mar 26, 2025, 20:17 IST
|

ಈಗೇನಿದ್ರು ಬ್ಲಾಗ್, ವ್ಲಾಗ್ ಮಾಡೋದೇ ಫ್ಯಾಷನ್. ಅದರದಿಂದ ಫೇಮಸ್ ಆಗಿರೋರು ಹಲವಾರು ಜನ. ಅದರಲ್ಲೂ ಮಧು ಗೌಡ ಎನ್ನುವವರು ಯುಟ್ಯೂಬ್‌ನಲ್ಲಿ ಸುಮ್ಮನೆ ಒಂದು ವ್ಲಾಗ್ ವಿಡಿಯೋ ಅಪ್‌ಲೋಡ್ ಮಾಡಿದರೆ ಸಾಕು, ಒಂದು ಗಂಟೆಯೊಳಗಡೆ ಮಿನಿಮಮ್ 50000 ವೀಕ್ಷಣೆ ಆಗಿರುತ್ತದೆ. ಈಗ ಇವರಿಗೆ ಅಣ್ಣನಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಕರ್ನಾಟಕದಲ್ಲಿ ಅನಂತ್ ಅಂಬಾನಿ ರೀತಿ ಮಧು ಗೌಡ-ನಿಖಿಲ್ ಅವರು ಒಂದು ವಾರಗಳ ಕಾಲ ಮದುವೆ ಆಗಿದ್ದರು.
ಮದುವೆಯಾದ ಬಳಿಕ ಮಧುಗೆ ಅಣ್ಣ ಮದನ್ ಗೌಡ ಅವರು ಉಡುಗೊರೆ ನೀಡಿದ್ದಾರೆ. ಮನೆಯಲ್ಲಿ ಹುಟ್ಟಿದ ಹೆಣ್ಣು ಮದುವೆಯಾದರೆ ಸಾಕು ಎಂದು ಆಲೋಚಿಸುವವರಿದ್ದಾರೆ. ತಂಗಿ ಮದುವೆಯನ್ನು ಗ್ರ್ಯಾಂಡ್ ಆಗಿ ಮಾಡಿದ ಬಳಿಕ ಮನೆಯನ್ನು ಉಡುಗೊರೆಯಾಗಿ ನೀಡಿರೋದು ಅಪರೂಪ ಎನ್ನಬಹುದು. ಚೆನ್ನಪಟ್ಟಣದಲ್ಲಿರುವ ಮನೆಯನ್ನು ತಂಗಿಗೆ ಮಧುಗೆ ಬರೆದುಕೊಟ್ಟಿದ್ದಾರೆ. ಮದನ್ ಗೌಡ ಅವರು ಚೆನ್ನಪಟ್ಟಣದಲ್ಲಿರುವ ಮನೆಗೆ ಒಂದಷ್ಟು ರಿಪೇರಿ ಮಾಡಿಸಿ, ಬಣ್ಣ ಬಳಿಸಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಈ ಮನೆಗೆ ಪೇಂಟ್ ಮಾಡಿಸಿದ್ದರು. ಮದನ್ ತಂದೆ ಕಟ್ಟಿಸಿದ ಮನೆಯಂತೆ. ಮಧು ಹುಟ್ಟಿದಾಗ ಕಟ್ಟಿದ ಮನೆ ಇದಾಗಿದೆಯಂತೆ. 2000ರಲ್ಲಿ ಕಟ್ಟಿಸಿದ ಮನೆ ಇದು. ತಂದೆಯವರೇ ಮಗಳಿಗೆ ಉಡುಗೊರೆ ಕೊಡಿ ಅಂತ ಹೇಳಿದ್ದರಂತೆ. ಮದನ್ ತಂದೆ ಈಗ ಇಲ್ಲ. ಈಗ ತಂದೆಯ ಆಸೆಯಂತೆ ಮಧು ಗೌಡಗೆ ಮನೆಯನ್ನು ತವರು ಮನೆ ಉಡುಗೊರೆಯಾಗಿ ನೀಡಿದ್ದಾರೆ.
ನನಗೆ ಮನೆ ಬೇಡ, ನೀವು ಚೆನ್ನಾಗಿರಿ ಎಂದು ಮಧು ಈ ಮನೆಯನ್ನು ತಿರಸ್ಕಾರ ಮಾಡಿದ್ದಾರೆ. ಆದರೂ ಕೂಡ ಮದನ್ ಅವರು ಮಧುಗೆ ಒತ್ತಾಯ ಮಾಡಿ, ತಂದೆ ಕಟ್ಟಿದ ಮನೆ ಅದು. ನಿನಗೆ ನೆನಪಾಗಿ ಇರಲಿ ಎಂದು ಹೇಳಿದ್ದಾರಂತೆ. ಇನ್ನು ಮಧು ಗೌಡಗೆ ಈಗ ಇಪ್ಪತ್ನಾಲ್ಕು ವರ್ಷ. ಮಧು ಗೌಡ ಹಾಗೂ ನಿಶಾ ರವೀಂದ್ರ ಎನ್ನುವವರು ಸ್ನೇಹಿತರಾಗಿದ್ದರು. ನಿಶಾ ರವೀಂದ್ರ ಅಣ್ಣ ನಿಖಿಲ್, ಮಧು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಮಧು ಗೌಡ ಅವರು ಬಹಳ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು. ಮಧು ಗೌಡ ಮದುವೆಯಲ್ಲಿ ಪೂರ್ತಿ ಬಂಗಾರದ ಆಭರಣಗಳನ್ನೇ ಧರಿಸಿ ಸೌಂಡ್ ಮಾಡಿದ್ದರು. ಮಧು ಗೌಡ ಅವರ ತವರು ಮನೆಯಲ್ಲಿ ಹದಿನಾಲ್ಕು ಮನೆಗಳನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ನೀಡಲಾಗಿದೆಯಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.