ಡಾಲಿ೯ಂಗ್ ಕೃಷ್ಣ ಮಿಲನಾ ಮನೆಗೆ ಬಂದ ಮಹಾಲಕ್ಷ್ಮಿ, ಮಗು ಮುಖ ನೋಡಿ ಬೆಚ್ಚಿಬಿದ್ದ ಕನ್ನಡಿಗರು

 | 
Jd
 ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಗೆ ಮಗಳು ಜನಿಸಿದ್ದಾಳೆ. ಮಗಳು ಮನೆಗೆ ಬಂದ ಸುಂದರ ವಿಡಿಯೋವನ್ನು ಮಿಲನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್ ಐದರಂದು ‘ಲವ್ ಮಾಕ್ಟೇಲ್’ ಸಿನಿಮಾ ನಟಿ ಮಿಲನಾ ನಾಗರಾಜ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. 
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮಗಳಿಗೆ ಗ್ರ್ಯಾಂಡ್ ಸ್ವಾಗತ ಸಿಕ್ಕಿದೆ. ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಮಗಳನ್ನು ಸ್ವಾಗತಿಸಲಾಗಿದೆ. ಇನ್ನು ಈ ಜೋಡಿ ತಮ್ಮ ಮಗಳನ್ನು ಪರಿ ಎಂದು ಕರೆಯುತ್ತಿದೆ. ಪರಿ ಎಂದು ನಾಮಕರಣ ಮಾಡಿದ್ದಾರೋ ಅಥವಾ ಸದ್ಯಕ್ಕೆ ಈ ಹೆಸರಿನಿಂದ ಕರೆಯುತ್ತಿದ್ದಾರೋ ಎಂದು ತಿಳಿಯದು. ಹಿಂದಿಯಲ್ಲಿ ಪರಿ ಎಂದರೆ ಅಪ್ಸರೆ ಎಂದರ್ಥ.
ಮಗಳ ಜನನದ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಅವರು, ಮಗಳು ಜನಿಸಿದ್ದಾಳೆ. ಮಿಲನಾ ಹಾಗೂ ಮಗು ಆರೋಗ್ಯವಾಗಿದ್ದಾರೆ. ಈ ಜರ್ನಿಯಲ್ಲಿ ಮಿಲನಾ ಅನುಭವಿಸಿದ ನೋವು, ತ್ಯಾಗ, ಧೈರ್ಯಕ್ಕೋಸ್ಕರ ನನಗೆ ಸಿಕ್ಕಾಪಟ್ಟೆ ಹೆಮ್ಮೆ ಇದೆ. ಎಲ್ಲ ತಾಯಂದರಿಗೆ ನನ್ನ ನಮನಗಳು. ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ಜಾಸ್ತಿ ಆಯ್ತು. ಮಗಳು ಇರೋದರಿಂದ ನಾನು ಈಗ ಅದೃಷ್ಟವಂತ ತಂದೆ ಎಂದು ಹೇಳಿದ್ದಾರೆ.
ಇನ್ನು ಈ ಜೋಡಿ ಸೆಪ್ಟೆಂಬರ್‌ 5 ರಂದು ಈ ಜೋಡಿ ತಮಗೆ ಮಗಳು ಜನಿಸಿದ ಸುದ್ದಿಯನ್ನು ಹಂಚಿಕೊಂಡಿದ್ದರು. ಆದಷ್ಟು ಬೇಗ ಮಗಳ ಮುಖ ತೋರಿಸಿ ಎಂದು ಫ್ಯಾನ್ಸ್‌ ಕೂಡಾ ಮನವಿ ಮಾಡಿದ್ದರು. ಇದೀಗ ಡಾರ್ಲಿಂಗ್‌ ಕೃಷ್ಣ ಮಗಳ ಮುಖವನ್ನು ರಿವೀಲ್‌ ಮಾಡಿದ್ದಾರೆ.ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಮಕ್ಕಳ ಫೋಟೋ/ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಮಕ್ಕಳಿಗೆ 2-3 ವರ್ಷವಾದ ನಂತರ ಅಪರೂಪಕ್ಕೆ ಎಂಬಂತೆ ಫೋಟೋ ಹಂಚಿಕೊಳ್ಳುತ್ತಾರೆ.
 ಇಲ್ಲವಾದರೆ ಮಗುವಿನ ಫೋಟೋಗೆ ಏನಾದರೂ ಎಮೋಜಿ ಜೋಡಿಸಿ ಶೇರ್‌ ಮಾಡುತ್ತಾರೆ. ಅದರೆ ಡಾರ್ಲಿಂಗ್‌ ಕೃಷ್ಣ ಜೋಡಿ ಅದ್ಯಾವುದನ್ನೂ ಮಾಡದೆ ನೇರಾ ನೇರ ಮಗುವಿನ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳಿಗೆ ಪರಿ ಎಂದು ಕರೆಯುತ್ತಿದ್ದಾರೆ. ನಮ್ಮ ಹೊಸ ಪ್ರಪಂಚಕ್ಕೆ ಸ್ವಾಗತ ಪರಿ ಎಂದು ಕೃಷ್ಣ, ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ.‌
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.