ಮಹೇಶ್ ಶೆಟ್ಟಿ ತಿಮರೋಡಿ ತಂಡವನ್ನು ಶೀಘ್ರವಾಗಿ ಬಂಧಿಸಿ, ಪೊಲೀಸರಿಗೆ ಖಡಕ್ ಆದೇಶ ಕೊಟ್ಟ ಕೋರ್ಟ್
ಸೌಜನ್ಯಾ ಪ್ರಕರಣದ ಮುಂದಾಳು ಮಹೇಶ್ ಶೆಟ್ಟಿ ತಿಮಿರೋಡು ಮತ್ತೊಮ್ಮೆ ಸುದ್ದಿಯಲ್ಲಿದ್ದರೆ. ಹೌದು ಉಜಿರೆ ಗ್ರಾಮದ ಪಣೆಯಾಲು ನಿವಾಸಿ ಭಾಸ್ಕರ್ ನಾಯ್ಕ ಎಂಬವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ, ಸೌಜನ್ಯಾ ಪ್ರಕರಣದ ಹೋರಾಟದ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಜೊತೆಗಾರರ ವಿರುದ್ಧ ಜಾಮೀನು ರಹಿತ ಅಟ್ರಾಸಿಟಿ ಕೇಸು ದಾಖಲಾಗಿದ್ದರೂ ಪೊಲೀಸರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಎಂದು ಭಾಸ್ಕರ ನಾಯ್ಕರವರು ವಕೀಲ ಚಂದ್ರನಾಥ ಆರಿಗ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ವರದಿ ನೀಡುವಂತೆ ತನಿಖಾಧಿಕಾರಿಗೆ ಆದೇಶಿಸಿದೆ ಎನ್ನಲಾಗ್ತಿದೆ. ಈ ವೇಳೆ ಸದ್ಯ ಆರೋಪ ಎದುರಿಸುತ್ತಿರುವ ಪ್ರಜಾಪ್ರಭುತ್ವ ವೇದಿಕೆ ಮುಖ್ಯಸ್ಥರಾದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ.
ಮಹೇಶ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಮಹೇಶ್ ಶೆಟ್ಟಿ ಅಲ್ಲಲ್ಲಿ ಬಹಿರಂಗ ವೇದಿಕೆ ಮೂಲಕ ಭಾಷಣ ಮಾಡುತ್ತಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆ ಮಹೇಶ್ ಶೆಟ್ಟಿ ಜತೆ ಸೇರಿಕೊಂಡಿದೆಯೇ ಎಂದು ತನಿಖಾಧಿಕಾರಿಯವರನ್ನು ಪ್ರಶ್ನೆ ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣದ ಕುರಿತು 15 ದಿನಗಳೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ನೆಡೆದಿದ್ದಾರೂ ಏನಪ್ಪಾ ಅಂದರೆ ಕಳೆದ ಸೆಪ್ಟೆಂಬರ್ 2ರಂದು ಮಂಗಳೂರಿನಲ್ಲಿ ಹಿರಿಯ ಕ್ರೈಂ ಪತ್ರಕರ್ತ ಮೋಹನ್ ಬೋಳಂಗಡಿಯವರ ಯೂಟ್ಯೂಬ್ ಚಾನೆಲ್‌ನ ನೇರಮಾತು ಕಾರ್ಯಕ್ರಮದಲ್ಲಿ ಭಾಸ್ಕರ ನಾಯ್ಕರವರು ಸಂದರ್ಶನ ನೀಡಿದ್ದರು. ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯರವರಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಈ ಸಂದರ್ಶನ ನಡೆಸಲಾಗಿತ್ತು.
ಸಂದರ್ಶನ ಮುಗಿಸಿ ಭಾಸ್ಕರ ನಾಯ್ಕರವರು ವಾಪಸು ತನ್ನ ಮನೆಗೆ ಬರುತ್ತಿರುವಾಗ ಸಂಜೆ 5 ಗಂಟೆ ಸುಮಾರಿಗೆ ಉಜಿರೆ ಗ್ರಾಮದ ಪಾಣೆಯಾಲು ಎಂಬಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿ ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ದೇಹದ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಭಾಸ್ಕರ ನಾಯ್ಕ್ ಜೋರಾಗಿ ಬೊಬ್ಬೆ ಹೊಡೆದಾಗ ಹತ್ತಿರದ ಮನೆಯಲ್ಲಿದ್ದ ಅವರ ಪತ್ನಿ ಮಮತಾ ಬಿಡಿಸಲು ಪ್ರಯತ್ನಿಸಿದಾಗ ಪ್ರಮೋದ್ ಶೆಟ್ಟಿ ಎಂಬಾತ ಪತ್ನಿಗೂ ಕಲ್ಲಿನಿಂದ ಹೊಡೆದಿದ್ದಾರೆ. ಇಬ್ಬರ ಬೊಬ್ಬೆ ಕೇಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಪರಿಚಯದವರಾದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ ತಿಮರೋಡಿ, ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ ಕಲ್ಲನ್ನು ಸ್ಥಳದಲ್ಲಿ ಬಿಸಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.