ತನ್ನ ಹುಡುಗಿ ಮೈಗೆ ಕೈಇಟ್ಟ ಯುವಕನಿಗೆ ಥಳಿಸಿದ ಬಾಯ್ ಫ್ರೆಂಡ್

 | 
ಹರ

ಹೊಸ ವರ್ಷಾಚರಣೆ ಮಾಡಲು ನಗರದ ನಾನಾ ಕಡೆಗಳಿಂದ ಸಾರ್ವಜನಿಕರು ಎಂಜಿ ರೋಡ್ ಕಡೆ ಆಗಮಿಸಿದ್ದರು. ನಗರದ ನಾಲ್ಕು ಭಾಗಗಳಲ್ಲಿ ಕಲ್ಪಿಸಿರುವ ಮೆಟ್ರೋ ರೈಲು ಮುಖಾಂತರ ಸಾವಿರಾರು ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದರು. ಬ್ರಿಗೇಡ್ ರೋಡ್ ಎಂಟ್ರಿಯಾಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಇನ್  ಎಂದು ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು.

ಸ್ನೇಹಿತರ, ಕುಟುಂಬಸ್ಥರ ಜೊತೆಗೆ ಬಂದು ಮೊಬೈಲ್​ನಲ್ಲಿ ಸೆಲ್ಫಿ ಹಿಡಿದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಮೊದಲ ಬಾರಿ ಬಂದವರಿಗೆ ವರ್ಣರಂಜಿತ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದ ಎಂಜಿ ರೋಡ್, ಬ್ರಿಗೇಡ್​ನಲ್ಲಿ ಕಂಡು ಮೂಕವಿಸ್ಮಿತರಾದರು. ಇನ್ನೂ ಕೆಲವರು ಡಿಜೆ ಇದೆಯಾ, ಕಾರ್ಯಕ್ರಮವಿದೆಯಾ ಎಂದು ಕೇಳುತ್ತಿದ್ದರು. ಏನಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ನಿರಾಸೆಯಿಂದ ನಿರ್ಗಮಿಸಿದರು.

ಬೆಂಗಳೂರು ನಗರದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ‌ ಮಾಡಲಾಗಿದೆ. ಉಳಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸರಿಗೆ ಸಾಥ್ ನೀಡದ್ದರು. ಪ್ರಮುಖ ಸ್ಥಳದಲ್ಲಿ ಡ್ರೋಣ್ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿತ್ತು ಮುನ್ನೆಚ್ಚರಿಕಾ ಕ್ರಮವಾಗಿ ಅಪರಾಧ ಹಿನ್ನೆಲೆಯುಳ್ಳವರು, ಮಾದಕ ಸರಬರಾಜುಗಾರರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿತ್ತು.

ಹೊಸ ವರ್ಷದ ಆಚರಣೆಗೆ ಬಂದಿದ್ದ ಜೋಡಿಯ ಜೊತೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದ ಘಟನೆ ನಡೆದಿದೆ. ಗರ್ಲ್ ಫ್ರೆಂಡ್ ಜೊತೆ ಯುವಕನೋರ್ವ ಬ್ರಿಗೇಡ್ ರಸ್ತೆಗೆ ಬಂದಿದ್ದ. ಈ ವೇಳೆ ನೂಕು ನುಗ್ಗಲಿನಲ್ಲಿ ಗರ್ಲ್ ಫ್ರೆಂಡ್ ಮುಟ್ಟಿದ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಬಾಯ್ ಫ್ರೆಂಡ್ ಧರ್ಮದೇಟು ಕೊಟ್ಟಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಹತೋಟಿಗೆ ತಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.