'ಪತ್ನಿಯ ಆಟವನ್ನು ಕ್ಯಾಮರಾದಲ್ಲಿ ಲೈವ್ ವೀಕ್ಷಣೆ ಮಾಡಿದ ಗಂಡ'

 | 
Bjj

ಪತ್ನಿಯ ಕೊಲೆಗೆ ಸಂಚು ರೂಪಿಸಿ ಆತ್ಮಹತ್ಯೆ ಎಂದು ಬಿಂಬಿಸಿದ ವ್ಯಕ್ತಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 5 ರಂದು ಪ್ರೇಮಲತಾ ಅವರು ಶ್ರೀಕಂಠೇಶ್ವರ ನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಇದು ಆತ್ಮಹತ್ಯೆಯಂತೆ ಕಾಣದ ಕಾರಣ ಕೊಲೆ ಪ್ರಕರಣ ದಾಖಲಿಸಲಾಗಿತ್ತು.

ಪ್ರೇಮಲತಾ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂತಿಸಿದ ಪತಿ ಶಿವಶಂಕರ್ ತನ್ನ ಸ್ನೇಹಿತ ವಿನಯ್ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ. ಪ್ರೇಮಲತಾ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿತ್ತು.

ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಶಿವಶಂಕರ್, ಆಕೆಯ ಮೇಲೆ ನಿಗಾ ಇಡಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಿದ್ದ. ನಂತರ ಪ್ರೇಮಲತಾಳನ್ನು ಕೊಲೆ ಮಾಡಲು ತನ್ನ ಸ್ನೇಹಿತ ವಿನಯ್ ಎಂಬಾತನನ್ನು ಸಂಪರ್ಕಿಸಿ ಹಣ ನೀಡಿದ್ದ.  2023ರಲ್ಲಿ ಹುಣಸಮಾರನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿನಯ್ ತನ್ನ ಪತ್ನಿಯನ್ನು ಕೊಲೆ  ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿನಯ್ ಹುಣಸಮಾರನಹಳ್ಳಿ ನಿವಾಸಿ. ಈತ ಐದು ವರ್ಷಗಳ ಹಿಂದೆ ಬ್ಯಾಂಕ್ ಕೆಲಸದ ಸಂದರ್ಭದಲ್ಲಿ ಶಿವಶಂಕರ್‌ಗೆ ಪರಿಚಯಗೊಂಡಿದ್ದ. ವಿನಯ್ ಸಹ ತನ್ನ ಪತ್ನಿಯನ್ನು ಸಾಯಿಸಿದ್ಗು ಹೇಗೆ ಎಂಬುದನ್ನು ಬಿಡಿಸಿ ಹೇಳಿದ್ದ ಎಂದು ಪೊಲೀಸರು ತಿಳಿಸಿದರು. 2023ರಲ್ಲಿ ವಿನಯ್ ತನ್ನ ಪತ್ನಿಯನ್ನುಕೊಲೆ ಮಾಡಿ ನಂತರ ಕೆರೆಗೆ ಎಸೆದು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದ.

ವಿನಯ್ ಪತ್ನಿಯ ಸಾವಿನ ಬಗ್ಗೆ ಪೊಲೀಸರು ಅಸ್ವಾಭಾವಿಕ ಮರಣ ವರದಿ ದಾಖಲಿಸಿದ್ದರು. ಪ್ರೇಮಲತಾ ಹತ್ಯೆ ಪ್ರಕರಣದ ತನಿಖೆಯ ವೇಳೆ ವಿನಯ್, ಪ್ರೇಮಲತಾ ಹತ್ಯೆಗೂ ಮುನ್ನ 2023ರಲ್ಲಿ ಪತ್ನಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಹತ್ಯೆಯ ಹಿಂದಿನ ರೂವಾರಿ ತಿಳಿದುಕೊಳ್ಳಲು ಹೋಗಿ ಎರಡು ಕೊಲೆ ಪ್ರಕರಣ ಭೇದಿಸಿದ್ದಾರೆ.