ಮಂಡ್ಯ; ಕೊನೆಗೂ ಕೊ.ಲೆ ಹಿಂದಿನ ರಹಸ್ಯ ಬಯಲು, ಆರೋಪಿ ಬಿಚ್ಚಿಟ್ಟ ಸತ್ಯ ಏನು ಗೊ ತ್ತಾ

 | 
Bs

ಕೆಲ ದಿನಗಳ ಹಿಂದಷ್ಟೇ ಶಿಕ್ಷಕಿ ದೀಪಿಕಾ ನಾಪತ್ತೆಯಾಗಿದ್ದರು ಆದರೀಗ ಅವರ ಶವ ದೊರೆತಿರುವುದು ಹಲವು ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಶಿಕ್ಷಕಿ ದೀಪಿಕಾ ಕೊಲೆಯ ಸುಳಿವನ್ನು ಪ್ರವಾಸಿಗರು ಸೆರೆಹಿಡಿದ 13 ಸೆಕೆಂಡ್‌ಗಳ ವೀಡಿಯೋ ನೀಡಿದೆ. ದೀಪಿಕಾಗೆ ಮನಸೋ ಇಚ್ಛೆ ಥಳಿಸುತ್ತಿರುವ ವೀಡಿಯೋ ಆರೋಪಿಯನ್ನು ಗುರುತಿಸಲು ಸಹಾಯ ಮಾಡಿದೆ.

ಹೌದು ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಹತ್ಯೆಯಾದ ಶಿಕ್ಷಕಿ. ಪೊಲೀಸರಿಗೆ ಸಿಕ್ಕಿರುವ ವೀಡಿಯೋದಲ್ಲಿರುವುದು ಅದೇ ಗ್ರಾಮದ ಯುವಕ ನಿತೀಶ್ ಎಂದು ಗುರುತಿಸಲಾಗಿದೆ. ಆತನೇ ದೀಪಿಕಾಳನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋಮವಾರದಂದು ದೀಪಿಕಾ ಶವ ಕುಟುಂಬದವರಿಗೆ ಸಿಕ್ಕಿತು. ಅವರನ್ನು ಕೊಲೆ ಮಾಡಿ ಹೂತುಹಾಕಲಾಗಿತ್ತು. 

ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದ ದೀಪಿಕಾ ಮತ್ತು ಯುವಕನ ನಡುವೆ ವಿರಸ ಉಂಟಾಗಿದ್ದು ಹೊಡೆದಾಟಕ್ಕೆ ಕಾರಣವೇನು, ಕೊಲೆ ಹೇಗೆ ನಡೆಯಿತು ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಕೊಲೆ ಆರೋಪಿ ಎನ್ನಲಾಗುತ್ತಿರುವ ನಿತೀಶ್ ದೀಪಿಕಾ ಗ್ರಾಮದವನೇ ಆಗಿದ್ದ ಎನ್ನಲಾಗಿದೆ. ದೀಪಿಕಾಗೂ ಆತನ ಪರಿಷಯ ಇದ್ದು, ಅಕ್ಕಾ ಎಂದು ಕರೆಯುತ್ತಿದ್ದ ಎಂದು ದೀಪಿಕಾ ಪತಿ ಹೇಳಿದ್ದಾರೆ. 

ದೀಪಿಕಾ ಹತ್ಯೆ ಬಗ್ಗೆ ಅದೇ ಗ್ರಾಮದ 22 ವರ್ಷದ ಯುವಕನ ಮೇಲೆ ದೀಪಿಕಾ ಪತಿ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ದೀಪಿಕಾಗೆ ಆ ಯುವಕನ ಪರಿಚಯವಾಗಿ, ಆತ ಅಕ್ಕಾ ಅಕ್ಕಾ ಅಂತ ಕರೆಯುತ್ತಿದ್ದನಂತೆ. ಆತನೇ ಕೊಲೆ ಮಾಡಿರಬೇಕು ಅಂತ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.ದೀಪಿಕಾ ಶಾಲೆಗೆ ಯಾವಾಗಲೂ ಬಸ್‌ನಲ್ಲೇ ಹೋಗಿ ಬರ್ತಿದ್ರಂತೆ. ಶನಿವಾರ ಬಸ್ ಮಿಸ್ಸಾಗಿದ್ದರಿಂದ ಸ್ಕೂಟರ್‌ನಲ್ಲಿ ತೆರಳಿದ್ರಂತೆ. ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಶಾಲೆ ಮುಗಿಸಿ ಹೊರ ಬಂದಿದ್ದಾಳೆ. 

ಆ ವೇಳೆ ಆಕೆಗೆ ಒಂದು ಫೋನ್ ಕಾಲ್ ಬಂದಿದೆ. ಆಗ ಫೋನ್‌ನಲ್ಲಿ ಮಾತಾಡಿಕೊಂಡು ಹೊರ ಬಂದಿದ್ದಾರೆ. ಆಕೆ ಹೊರ ಬಂದ ಒಂದು ಗಂಟೆ ವೇಳೆಗೆ ನಾನು ಪೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು ಆದರೆ  ಈಗ ಹೆಣವಾಗಿ ಮನೆಗೆ ಬಂದಿದ್ದಾಳೆ ಅಂತ ಲೋಕೇಶ್ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.