ಮಂಗಳೂರು ಸುಂದರಿ ಭಾಗ್ಯಲಕ್ಷ್ಮಿ ಕೀರ್ತಿ ಧಾರಾವಾಹಿಗೆ ಬರುವ ಮುನ್ನ ಎಲ್ಲಿದ್ರು ಗೊ ತ್ತಾ

 | 
Gh

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷ್ಮೀ ಬಾರಮ್ಮ. ಈ ಧಾರಾವಾಹಿಯ ಒಂದು ಪ್ರಮುಖ ಪಾತ್ರ ಕೀರ್ತಿಯದ್ದು. ವೈಷ್ಣವ್ ನನ್ನು ಹುಚ್ಚರಂತೆ ಪ್ರೀತಿಸುವ ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ತನ್ವಿ ರಾವ್.ಲಕ್ಷ್ಮೀ ಬಾರಮ್ಮ ಸೀರಿಯಲ್ ನ ನಾಯಕ -ನಾಯಕಿ ಪಾತ್ರಕ್ಕಿಂತ ಹೆಚ್ಚಾಗಿ ಜನರು ಇಷ್ಟಪಟ್ಟಿರೋ ಪಾತ್ರ ಕೀರ್ತಿಯದ್ದು. 

ಕಾರಣ ತನ್ವಿ ರಾವ್ ಅವರ ನಟನೆ. ಕಣ್ಣಲ್ಲೇ ಮಾತನಾಡೋ ಅಭಿನಯ ನಿಜಕ್ಕೂ ಅದ್ಭುತ. ವಿಲನ್ ಪಾತ್ರ ಜನರಿಗೆ ಅಷ್ಟೊಂದು ಇಷ್ಟವಾಗೋದಕ್ಕೆ ಕಾರಣವೇ ತನ್ವಿ ರಾವ್ ನಟನೆ. ಇನ್ನು ಕರಿಯರ್ ಬಗ್ಗೆ ಹೇಳೋದಾದರೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು ತನ್ವಿ  'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು. ‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಈ ಸೀರಿಯಲ್ ನಲ್ಲಿ ಸಂಗೀತಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

https://youtube.com/shorts/3fz4bXP4lFo?si=vekkJcj0x7QdbNsL

ಅಷ್ಟೇ ಅಲ್ಲ ಅದ್ಭುತ ನೃತ್ಯಗಾರ್ತಿಯಾಗಿರುವ ತನ್ವಿ, ಬಾಲ್ಯದಿಂದಲೇ ಭರತನಾಟ್ಯ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ, ಜೊತೆಗೆ ಇವರು ಥಿಯೇಟರ್ ಆರ್ಟಿಸ್ಟ್ ಕೂಡ ಹೌದು.  ಕನ್ನಡದಲ್ಲಿ ಇವರು 'ರಂಗ್‌ ಬಿ ರಂಗ್‌ ಎನ್ನುವ ಸಿನಿಮಾ ಮಾಡಿದ್ದಾರೆ, ಹಿಂದಿಯಲ್ಲಿ ಗುಲಾಬ್ ಗ್ಯಾಂಗ್, ಗುಲ್ಮೊಹರ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಈಕೆ ಸಕಲಕಲಾ ವಲ್ಲಭೆ. ಒಬ್ಬ ಪರ್ಫಾಮಿಂಗ್ ಆರ್ಟಿಸ್ಟ್ . ಇವರು ತಮ್ಮ 4ನೇ ವಯಸ್ಸಿನಲ್ಲಿಯೇ ಮಂಗಳೂರಿನ ಗುರು ಶ್ರೀಮತಿ ಗೀತಾ ಸರಳಾಯ ಮತ್ತು ಶ್ರೀಮತಿ ರಶ್ಮಿ ಚಿದಾನಂದ್ ಅವರ ಬಳಿ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಕೇವಲ 6ನೇ ವಯಸ್ಸಿನಲ್ಲಿ ಟಧಿನಕ್ ಧಿನ್ ಧಾಟ ಅದು ದೆಹಲಿ ದೂರದರ್ಶನ ಆಯೋಜಿಸಿದ, ಪ್ರಸಿದ್ಧ ಪಂಡಿತ್ ಜೈ ಕಿಶನ್ ಮಹಾರಾಜ್ ತೀರ್ಪುಗಾರರಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

8ನೇ ವಯಸ್ಸಿನಲ್ಲಿ ಪಾರ್ಲೆ ಜಿ 'ದಮ್ ದಮ್ ದಮ್' ಮುಂಬೈ ದೂರದರ್ಶನ ನಂತಹ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಈ ನಟಿ ಒಳ್ಳೆಯ ನಿರೂಪಕಿ ಕೂಡಾ ಹೌದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.