ಮಾವುತ ಎಂದು ಎಂಟ್ರಿ ಕೊಟ್ಟ ಮಂಗಳೂರು ಶೆಟ್ಟಿ ಇವತ್ತು ವಿನಯ್ ಗುಲಾಮ, ಸುನೀಲ್ ಶೆಟ್ಟಿ ಬೆಂಬಲ

 | 
ಕ್

ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಮಂಗಳೂರು ಮೂಲದವರು ಯಾರೂ ಇಲ್ಲವಲ್ಲ ಎಂಬ ಮಾತು ಚರ್ಚೆಗೆ ಬಂದಿತ್ತು. ಅದರಂತೆ, ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಇಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ. ಆ ಪೈಕಿ ಅಸ್ತಿಕ್‌ ಅವಿನಾಶ್‌ ಶೆಟ್ಟಿ ಸಹ ಒಬ್ಬರು.

ಅವಿನಾಶ್ ಶೆಟ್ಟಿ ಅವರು ತುಳು ನಟ, ಮಾಡೆಲ್ ಹಾಗೂ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಸುರತ್ಕಲ್ ಮೂಲದ ಅವಿನಾಶ್ ಅವರು ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ದಂಪತಿಯ ಪುತ್ರ. ಇವರು ಕೋಕ್‌ ಮತ್ತು ಎಂಆರ್‌ಎಫ್‌ ಟಯರ್‌ ಜಾಹೀರಾತಿನ ಮೂಲಕ ಗ್ಲಾಮರ್ ಲೋಕಕ್ಕೆ ಪ್ರವೇಶಿಸಿದರು. 2007ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ಗೆದ್ದ ಇವರು, 2012ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಅದೇ ರೀತಿ ಚೆನ್ನೈನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ಸುದೇಶ್ ಶೆಟ್ಟಿ ನಿರ್ಮಾಣದ, ಸಾಯಿಕೃಷ್ಣ ನಿರ್ದೇಶನದ ಕನ್ನಡ ಚಲನಚಿತ್ರ ಚೆಲ್ಲ ಪಿಲ್ಲಿ ಮತ್ತು ಬದ್ಮಾಶ್ ಚಿತ್ರದಲ್ಲೂ ನಟಿಸಿದ್ದಾರೆ. ಇನ್ನು ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿದ ಅವಿನಾಶ್​ ಶೆಟ್ಟಿ  ಅವರು ಆರಂಭದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದರು. 

ಆನೆ ರೀತಿಯಲ್ಲಿ ವರ್ತಿಸುತ್ತಿರುವ ವಿನಯ್​ ಗೌಡ ಅವರನ್ನು ಅವಿನಾಶ್​ ಪಳಗಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಬಿಗ್​ ಬಾಸ್​  ಆಟದಲ್ಲಿ ಅವಿನಾಶ್​ ಶೆಟ್ಟಿ ವೀಕ್​ ಎನಿಸುತ್ತಿದ್ದಾರೆ. ಹಾಗಾಗಿ ಇದೀಗ ವೋಟ್ ಮಾಡಿ ಗೆಲ್ಲಿಸಿ ಎಂದು ಹಿಂದಿ ನಟ ಸುನಿಲ್ ಶೆಟ್ಟಿ ಅವರು ಕೇಳಿಕೊಂಡಿದ್ದಾರೆ. 

ಅವಿನಾಶ್ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ ಬಹಳ ಆಪ್ತರಾಗಿರುವ ಕಾರಣ ಜನರಲ್ಲಿ  ಅವಿನಾಶ್ ಪಾರವಾಗಿ ವೋಟ್ ಮಾಡಿ ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.