ಮಂಗಳೂರಿನ ಬಸ್ಸಿನಲ್ಲಿ ಯುವತಿಗೆ ತೀರಾ ಎದೆನೋವು; ತಕ್ಷಣ ಆಸ್ಪತ್ರೆಗೆ ತಿರುಗಿಸಿ ಜೀವ ಉಳಿಸಿದ ಬಸ್ ಚಾಲಕ
Aug 1, 2024, 11:31 IST
|
ಬಸ್ ಕೂಳೂರು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ. ಇದನ್ನರಿತ ಬಸ್ ಚಾಲಕ, ನಿರ್ವಾಹಕರಾದ ಗಜೇಂದ್ರ ಕುಂದರ್, ಮಹೇಶ್ ಪೂಜಾರಿ ಹಾಗೂ ಸುರೇಶ್ ಅವರು ಬಸ್‌ನ್ನು ನೇರವಾಗಿ ಆಸ್ಪತ್ರೆಗೆ ಕಡೆ ಚಲಾಯಿಸಿದ್ದಾರೆ. ಕಂಕನಾಡಿಯಲ್ಲಿರುವ ಆಸ್ಪತ್ರೆಗೆ ತಲುಪಿದ ಅವರು ವಿದ್ಯಾರ್ಥಿಯನ್ನು ಎತ್ತಿಕೊಂಡು ಹೋಗಿ ದಾಖಲಿಸಿದ್ದಾರೆ.
ಗಜೇಂದ್ರ ಕುಂದರ್ ಆ್ಯಂಬುಲೆನ್ಸ್ ರೀತಿಯಲ್ಲಿ ಸ್ ಅನ್ನು ಎಲ್ಲೂ ಕೂಡ ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾರೆ. ಆಸ್ಪತ್ರೆಯ ಬಳಿ ಬಂದಾಗ ಸೆಕ್ಯುರಿಟಿಯ ಅನುಮತಿಗೆ ಕಾದು ಸಮಯ ವ್ಯರ್ಥ್ಯ ಮಾಡದೇ ನೇರವಾಗಿ ತುರ್ತು ಚಿಕಿತ್ಸೆ ವಿಭಾಗದ ಕಡೆ ಹೊಗಿ ಬಸ್ ನಿಲ್ಲಿಸಿದ್ದಾರೆ. ನಂತರ ವಿಧ್ಯಾರ್ಥಿಯನ್ನು ನೇರವಾಗಿ ತುರ್ತು ಚಿಕಿತ್ಸೆಗೆ ಕೊಂಡೊಯ್ಯುದ್ದರು.
ಕೃಷ್ಣಪ್ರಸಾದ್ ಎಂಬ ಹೆಸರಿನ ಖಾಸಗಿ ಬಸ್ ಮಂಗಳೂರಿನ ಮಂಗಳಾದೇವಿ-ಕುಂಜತ್ತಬೈಲ್ ನಡುವೆ ಸಂಚರಿಸುವ ರೂಟ್ ನಂ.13F ಕೃಷ್ಣಪ್ರಸಾದ್ ಬಸ್ ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳಾದೇವಿ ಕಡೆಗೆ ಸಂಚರ ನಡೆಸುತ್ತಿತ್ತು. ಈ ಮಾರ್ಗದಲ್ಲಿ ಯೆನಪೋಯ ಕಾಲೇಜಿನ 10 ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಬಸ್ ಪ್ರಯಾಣ ಮುಂದೆವರಿಸಿದ ಕೆಲವು ನಿಮಿಷಗಳ ನಂತರ ಏಕಾಏಕಿ ಓರ್ವ ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿಕೊಂಡಿತು.
ವಿದ್ಯಾರ್ಥಿನಿಗೆ ತಕ್ಷಣ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದವರ ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಕಾಳಜಿ ಬಗ್ಗೆ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅಭಿನಂದಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.