ಮಂಗಳೂರಿನ ರಸ್ತೆ ಗುಂಡಿ ಮುಚ್ಚುತ್ತಿರುವ ಯುವಕ; ಈತನ ಸಾಧನೆಗೆ ಬಾರಿ ಮೆಚ್ಚುಗೆ

 | 
Uu
ಕಂಕನಾಡಿ ಜಂಕ್ಷನ್‌ನಲ್ಲಿ ಸರಿಯಿರುವ ರಸ್ತೆಗಿಂತ ಗುಂಡಿಗಳೇ ಹೆಚ್ಚು ಕಾಣಸಿಗುತ್ತಿದೆ, ಪಂಪ್‌ವೆಲ್‌ ಭಾಗದಿಂದ ಆಗಮಿಸುವ ಹಾಗೂ ತೆರಳುವ ರಸ್ತೆಯಲ್ಲಿ ಕೆಲವು ಕಡೆ ಗುಂಡಿಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಸಿಗ್ನಲ್ ದಾಟಿ ಬೆಂದೂರ್ ಕ್ರಾಸ್‌ನಲ್ಲಿಯೂ ರಸ್ತೆಯ ಎರಡು ಭಾಗದಲ್ಲಿ ಇಡೀ ರಸ್ತೆಯೇ ಗುಂಡಿಮಯವಾಗಿದೆ. ಅದರಲ್ಲೂ ಮಳೆ ಸಂದರ್ಭ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳ ಬಗ್ಗೆ ಗೊತ್ತಿಲ್ಲದೆ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದ ಹಲವು ಕಡೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಅಪಘಾತಕ್ಕೆ ಕಾರಣವಾಗುತ್ತಿದೆ.ಮಳೆ ಬರುವ ಮುಂಚೆ ರಸ್ತೆಗಳ ಪ್ಯಾಚ್‌ ವರ್ಕ್ ಮಾಡದ ಹಿನ್ನೆಲೆಯಲ್ಲಿ ಆಗ ಸಣ್ಣ ಪ್ರಮಾಣದಲ್ಲಿದ್ದ ಗುಂಡಿಗಳು ಮಳೆಯ ಕಾರಣದಿಂದ ಇದೀಗ ಬೃಹತ್‌ ಹೊಂಡಗಳಾಗಿದೆ. 
ಕೆಲವು ಕಡೆ ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ಪಂಪ್‌ವೆಲ್‌ನ ಸರ್ವೀಸ್‌ ರಸ್ತೆ, ಕಂಕನಾಡಿ, ಬಿಕರ್ನಕಟ್ಟೆ, ನಂತೂರು, ಕೂಳೂರು, ಬೆಂದೂರ್‌ವೆಲ್‌, ಕೆಪಿಟಿ, ಕೊಟ್ಟಾರ, ಪಡೀಲ್‌ ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ಬಿದ್ದು ಜನಸಾಮಾನ್ಯರು ಪ್ರತಿದಿನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪಂಪ್‌ವೆಲ್‌ನಿಂದ ತೊಕ್ಕೊಟ್ಟು ತೆರಳುವ ಹಾಗೂ ಆಗಮಿಸುವ ಸರ್ವೀಸ್‌ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರವೇ ಕಷ್ಟಕರವಾಗಿದೆ. ಸರ್ವೀಸ್ ರಸ್ತೆಯ ಉಜ್ಜೋಡಿ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೇಗುಲದ ಸಮೀಪದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಸ್ಪೀಡ್‌ ಇದ್ದರೆ ಇಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. 
ಇತ್ತೀಚಿಗೆ ಇದೇ ಭಾಗದಲ್ಲಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ನೀರಿನಿಂದ ತುಂಬಿದ್ದ ಗುಂಡಿ ಗಮನಿಸದೇ ಬಿದ್ದು ಗಾಯಗೊಂಡಿದ್ದರು. ಇದನ್ನೇಲ್ಲ ಕಂಡ ಯುವಕನೊಬ್ಬ ಹೊಂಡಗಳಿಗೆ ಮಣ್ಣು ತುಂಬಿ ಮುಚ್ಚಿದ್ದು ಎಲ್ಲೆಡೆ ವೈರಲ್ ಆಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.