ಅಪರೂಪಕ್ಕೆ ಬಿಗ್ ಬಾಸ್ ಮನೆಗೆ ಬಂದಿದ್ದ ಗೋಲ್ಡ್ ಸುರೇಶ್ ಜೊತೆ ಮಂಜಣ್ಣ ಜಗಳ

 | 
ರದ೮
ಬಿಗ್‌ಬಾಸ್‌ ಕನ್ನಡ ಸೀಸನ್ 11 ಇನ್ನು ಹತ್ತೇ ಹತ್ತು ದಿನದಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲಿದೆ. ಒಂದೆಡೆ ಗ್ರ್ಯಾಂಡ್‌ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಬಿಗ್‌ಬಾಸ್‌ ಮನೆಗೆ ಹಳೆದ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಬಿಗ್‌ಬಾಸ್‌ ಮನೆ ಕಲರ್‌ಫುಲ್ಲಾಗಿ ಕಾಣಿಸುತ್ತಿದೆ. ಹಾಗಾದರೆ ಬಿಗ್‌ಬಾಸ್‌ ಮನೆಗೆ ಬಂದವರು ಯಾರು? ಯಾರೆಲ್ಲಾ ಏನು ಹೇಳಿದರು? ಇಂದು ಕಲರ್ಸ್‌ ಕನ್ನಡ ಹಂಚಿಕೊಂಡ ವೈರಲ್ ವೀಡಿಯೋದಲ್ಲಿ ಏನಿದೆ ನೋಡೋಣ ಬನ್ನಿ.
ಸ್ನೇಹಿತರೇ..ಬಿಗ್‌ಬಾಸ್‌ ಸೀಸನ್ 11 ಪೂರ್ಣಗೊಳ್ಳಲು ಕೇಲವೇ ದಿನಗಳು ಬಾಕಿ ಇವೆ. ಪ್ರಸ್ತುತ ಬಿಗ್‌ಬಾಸ್‌ ಮನೆಯಲ್ಲಿ 8 ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಇನ್ನೂ ಈ ವಾರಾಂತ್ಯಕ್ಕೆ ಧನ್‌ರಾಜ್, ಮೋಕ್ಷಿತಾ ಹಾಗೂ ಉಗ್ರಂ ಮಂಜು ಈ ಮೂವರಲ್ಲಿ ಇಬ್ಬರು ಮನೆಯಿಂದ ಹೊರ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರು ಹೊರಬರುತ್ತಾರೆ ಅನ್ನೋದು ಪಕ್ಕಾ ಆಗಿಲ್ಲ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಈ ವಾರ ಮೂರು ಜನ ಸ್ಪರ್ಧಿಗಳು ಹೊರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಸೋಮವಾರದಿಂದ ಗ್ರ್ಯಾಂಡ್ ಫಿನಾಲೆ ಟಾಸ್ಕ್‌ಗಳು ಮನೆಯಲ್ಲಿ ಉಳಿದುಕೊಳ್ಳುವ 5 ಜನ ಸ್ಪರ್ಧಿಗಳ ನಡುವೆ ನಡೆಯಲಿವೆ.
ಸ್ನೇಹಿತರೇ... ಇದೀಗ ಕಲರ್ಸ್‌ ಕನ್ನಡ ವಾಹಿನಿ ಬಿಗ್‌ಬಾಸ್‌ ಮನೆಯ ವಿಡಿಯೋ ಕ್ಲಿಪ್‌ವೊಂದನ್ನು ಹಂಚಿಕೊಂಡಿದೆ. ಈ ಕ್ಲಿಪ್‌ನಲ್ಲಿ ಬಿಗ್‌ಬಾಸ್‌ ಸೀಸನ್ 11ರ ಹಳೆಯ ಸ್ಪರ್ಧಿಗಳು ಮನೆಗೆ ಆಗಮಿಸಿದ್ದು ಕಂಡು ಬಂದಿದೆ. ವೈರಲ್ ಆದ ಪ್ರೋಮೋದಲ್ಲಿ ಬೆಳ್ಳಂಬೆಳಗ್ಗೆ ಬಿಗ್‌ಬಾಸ್‌ ಮನೆಗೆ ಹಳೆಯ ಸ್ಪರ್ಧಿಗಳು ಎಂಟ್ರಿಕೊಟ್ಟು ಮನೆಯಲ್ಲಿ ಮಲಗಿರುವ ಸ್ಪರ್ಧಿಗಳನ್ನು ಎಬ್ಬಿಸಿದ್ದಾರೆ. ಗೋಲ್ಡ್ ಸುರೇಶ್, ರಂಜಿತ್, ಹಂಸ, ಯಮುನಾ ಶ್ರೀನಿಧಿ, ಅನುಷಾ ರೈ, ಶಿಶಿರ್, ಮಾನಸ ತುಕಾಲಿ ಎಲ್ಲರೂ ಕೂಡ ಮನೆಗೆ ಆಗಮಿಸಿದ್ದು ಮನೆಯ ಸದಸ್ಯರು ದಿಲ್ ಖುಷ್ ಆಗಿದ್ದಾರೆ.
ಸ್ನೇಹಿತರೇ... ಇನ್ನೂ ಮಾನಸ ತುಕಾಲಿ ಅವರು ಬಿಗ್‌ಬಾಸ್‌ ಮನೆಗೆ ಬಂದ ಖುಷಿಯಾಲ್ಲಿ ತ್ರಿವಿಕ್ರಮ್ ಅವರನ್ನು ಎತ್ತಿಕೊಂಡಿದ್ದು ಕಂಡು ಬಂದಿದೆ. ಪರಸ್ಪರ ಸಂಕ್ರಾಂತಿ ಶುಭ ಕೋರುವ ಮೂಲಕ ಎಲ್ಲರಿಗೂ ಗೆಲ್ಲಲು ಶುಭ ಹಾರೈಸಿದ್ದಾರೆ.ಈ ವೇಳೆ ಬಿಗ್‌ಬಾಸ್‌ ಹಳೆಯ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಲಾಗುತ್ತದೆ. ಈ ಮನೆಯಲ್ಲಿ ಸಿಹಿಕಹಿ ನೆನಪುಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಷ್ಟು ಇವೆ. ಈ ಕೆಟ್ಟ ನೆನಪುಗಳನ್ನು ನೆನಪಿಸಿಕೊಂಡು ಹಳೆಯ ಸ್ಪರ್ಧಿಗಳು ಮನೆಯಲ್ಲಿ ಇರುವ ಏಳು ಜನ ಸ್ಪರ್ಧಿಗಳಿಗೆ ಹೃದಯ ಸಿಂಬಲ್ ಇರುವ ಮುಳ್ಳು ಇರುವ ಬೋರ್ಡ್ ನೀಡಬೇಕು. 
ಹೌದು ಸ್ನೇಹಿತರೇ..ಗೋಲ್ಡ್‌ ಸುರೇಶ್-ಗೌತಮಿಗೆ, ಹಂಸ- 'ಮಂಜು ಅವರು ನನಗೆ ಸಿಕ್ಕಾಪಟ್ಟೆ ಹರ್ಟ್ ಮಾಡಿದ್ದಾರೆ' ಎಂದು ಕಾರಣ ನೀಡುತ್ತಾರೆ, ಮಾನಸ ತುಕಾಲಿ- 'ಮಂಜು ಅವರೊಂದಿಗೆ ಯಾಕೆ ನನಗೆ ಜಗಳ ಆಗಿತ್ತೋ ಗೊತ್ತಿಲ್ಲ' ಎಂದು ಕಾರಣ ಕೊಡುತ್ತಾರೆ ಹಾಗೂ ಶಿಶಿರ್ ಕೂಡ ಮಂಜು ಅವರಿಗೆ 'ಮಹಾರಾಜಾ ಟಾಸ್ಕ್‌ನಲ್ಲಿ ನೀವು ಎಳೆದು ಬೀಸಾಕಿದ್ದಕ್ಕೆ ಇವತ್ತಿಗೂ ಕೂಡ ನೋವಿದೆ' ಎಂದು ಕಾರಣ ಕೊಡುತ್ತಾರೆ, ಯಮುನಾ ಕೂಡ ಮಂಜು ಅವರಿಗೇ ಈ ಬೋರ್ಡ್‌ ಅನ್ನು ನೀಡುತ್ತಾರೆ. 
ಒಟ್ಟಿನಲ್ಲಿ ಮನೆಗೆ ಆಗಮಿಸಿದ ಹಳೆಯ ಸ್ಪರ್ಧಿಗಳು ಮಂಜು ಅವರಿಗೇ ಟಾರ್ಗೇಟ್ ಮಾಡಿದಂತೆ ಇತ್ತು.ಇನ್ನೂ ಸಿಹಿ ಘಟನೆಗಳನ್ನು ನೆನಪಿಸಿಕೊಂಡು ಅನುಷಾ ರೈ- ಗೌತಮಿಗೆ, ರಂಜಿತ್- ತ್ರಿವಿಕ್ರಮ್‌ಗೆ, ಹಂಸ-ಧನ್‌ರಾಜ್‌ಗೆ, ಶಿಶಿರ್-ಮೋಕ್ಷಿತಾಗೆ, ಗೋಲ್ಡ್‌ ಸುರೇಶ್-ಹನುಮಂತುಗೆ, ಯಮುನಾ-ಭವ್ಯಾಗೆ ಮುಳ್ಳು ಇರದ ಹಾರ್ಟ್‌ ಸಿಂಬಲ್‌ ಅನ್ನು ನೀಡಿದ್ದನ್ನು ನಾವ್ ನೋಡ್ಬಹುದಾಗಿದೆ.ಒಟ್ಟಿನಲ್ಲಿ ಮನೆಯಲ್ಲಿ ಅಸಲಿ ಆಟ ಇನ್ನು ಮುಂದೆ ಶುರುವಾಗಲಿದೆ. ಉಳಿಯುವ ಐದು ಜನ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ? ಅಸಲಿ ಯಾವುದು? ನಕಲಿ ಯಾವುದು? ಯಾರು ಗುಂಪುಗಾರಿಕೆ ಮೂಲಕ ಆಟ ಆಡುತ್ತಿದ್ದಾರೆ? ಎಲ್ಲದಕ್ಕೂ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.