ನೀರಿನಲ್ಲಿ ಮುಳುಗಿ ಫಿನಾಲೆ ಟಾಸ್ಕ್ ಸೋತ ಮಂಜಣ್ಣ, ಗೌತಮಿಯಿಂದ ಮೋಸದಾಟ
Jan 10, 2025, 16:46 IST
|
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಈ ವಾರದ ಟಾಸ್ಕ್‌ಗಳು ನಡೆದಿವೆ. ಬಿಗ್ ಬಾಸ್ ಕೂಡ ಟಾಸ್ಕ್‌ನಲ್ಲಿ ಜಯ ಗಳಿಸುವ ಸ್ಪರ್ಧಿ ನೇರವಾಗಿ ಫಿನಾಲೆ ಓಟದಲ್ಲಿ ಟಿಕೆಟ್ ಪಡೆಯುತ್ತಾರೆ, ಸೋತವರು ಫಿನಾಲೆ ಟಿಕೆಟ್ ಪಡೆಯಲು ವಿಫಲರಾಗುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಟಾಸ್ಕ್‌ಗಳು ನಡೆದಿದ್ದು ಫಲಿತಾಂಶ ಕೂಡ ಹೊರಬಂದಿದೆ. ಇದರಲ್ಲಿ ಇಬ್ಬರು ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಅವರು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಡೆ ಉಳಿದುಕೊಂಡಿದ್ದಾರೆ. ಇವರು ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಆಗುವುದಿಲ್ಲ. ಎಲಿಮಿನೇಷನ್ ದಾಟಿ ಫಿನಾಲೆಗೆ ಎಂಟ್ರಿ ಕೊಡಬೇಕಾಗುತ್ತದೆ. ಇನ್ನು ತ್ರಿವಿಕ್ರಮ್ ಅವರಿಗೆ ಟಿಕೆಟ್ ಟು ಫಿನಾಲೆ ಓಟದಲ್ಲಿ ಮುಂದುವರೆಯುವ ಅವಕಾಶ ಸಿಕ್ಕಿದೆ. ಹೀಗಾಗಿ ತ್ರಿವಿಕ್ರಮ್ ಟಿಕೆಟ್ ಟು ಫಿನಾಲೆ ಓಟದಲ್ಲಿ ಜಯ ಸಾಧಿಸಿದ್ದರೆ, ಚೈತ್ರಾ ಕುಂದಾಪುರ ಅವರು ಇದರಿಂದ ಹೊರ ಉಳಿದಿದ್ದಾರೆ.
ಹೀಗಾಗಿ ಧನ್‌ರಾಜ್ ತಂಡದಿಂದ ಚೈತ್ರಾ ಆಟದಿಂದ ಹೊರಗಡೆ ಉಳಿದಿರುವುದರಿಂದ ಧನ್‌ರಾಜ್, ಗೌತಮಿ ಹಾಗೂ ಮಂಜು ಅವರು ಮಾತ್ರ ಮುಂದಿನ ಟಾಸ್ಕ್ ಆಡುತ್ತಾರೆ. ಇತ್ತ ತ್ರಿವಿಕ್ರಮ್ ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಓಟದಲ್ಲಿ ಸೆಲೆಕ್ಟ್ ಆಗಿರುವುದರಿಂದ ಇವರ ತಂಡದಲ್ಲಿ ಉಳಿದ ಮೋಕ್ಷಿತಾ, ಹನುಮಂತು ಹಾಗೂ ಭವ್ಯಾ ಅವರು ಮುಂದಿನ ಆಟವನ್ನು ಆಡಿದರು.
ಇನ್ನೂ ರಜತ್ ಈ ವಾರದ ಕ್ಯಾಪ್ಟನ್ ಆಗಿರುವುದರಿಂದ ಉಸ್ತುವಾರಿಯನ್ನೇ ಮಾಡಬೇಕಾಗುತ್ತದೆ. ಯಾವುದೇ ಟಾಸ್ಕ್‌ನಲ್ಲಿ ಭಾಗವಹಿಸಲು ಅವರಿಗೆ ಅವಕಾಶವನ್ನು ಬಿಗ್‌ಭಾಸ್ ನೀಡಿಲ್ಲ. ಹೀಗಾಗಿ ಇವರನ್ನು ನೇರವಾಗಿ ಟಿಕೆಟ್ ಟು ಫಿನಾಲೆಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ.
ಹೀಗೆ ಎಲ್ಲಾ ಟಾಸ್ಕ್ ಮುಗಿದ ಬಳಿಕ ಒಬ್ಬರು ಸೆಲೆಕ್ಟ್ ಆಗುತ್ತಾರೆ ಇನ್ನೊಬ್ಬರು ರಿಜೆಕ್ಟ್ ಆಗುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಕೊರೆಯುವ ಚಳಿಯಲ್ಲೂ ನೀರಿನಲ್ಲಿ ಮುಳುಗಿ ಫೈನಲ್ ಆಟಗಳನ್ನು ಆಡುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.