ಮಂಜು ಮೋಕ್ಷಿತಾ ಗೌತಮಿ ಬಿಗ್ಬ್ಬಾಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ, ಕಿಚ್ಚನ ಕಿವಿ ಮಾತಿನಿಂದ ಎದೆಯಲ್ಲಿ ಡವಡವ
Jan 17, 2025, 16:31 IST
|

ಈಗಾಗಲೇ ಸಾಕಷ್ಟು ಟ್ವಿಸ್ಟ್ಗಳನ್ನು ಕಂಡ ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಆರಂಭದಿಂದಲೂ ಗೌತಮಿ ಜಾದವ್, ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಅವರು ಆಪ್ತವಾಗಿದ್ದರು. ಆದರೆ ಒಂದಷ್ಟು ದಿನಗಳು ಕಳೆದ ಬಳಿಕ ಮೋಕ್ಷಿತಾ ಅವರು ರೆಬೆಲ್ ಆದರು. ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಜೊತೆ ಮನಸ್ತಾಪ ಮಾಡಿಕೊಂಡು ಆ ಗುಂಪಿನಿಂದ ಹೊರಗೆ ಬಂದಿದ್ದರು.
ಎಷ್ಟೋ ಸಂದರ್ಭಗಳಲ್ಲಿ ಮೋಕ್ಷಿತಾ ಅವರು ಗೌತಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಗೇಮ್ ಬದಲಾಗಿದೆ.ಮೋಕ್ಷಿತಾ ಪೈ ಅವರು ನಿಧಾನಕ್ಕೆ ಬದಲಾಗಿದ್ದಾರೆ. ಸ್ವಾಭಿಮಾನದ ಕಾರಣದಿಂದ ಗೌತಮಿ ಜೊತೆ ಕೈ ಜೋಡಿಸುವುದೇ ಇಲ್ಲ ಎಂದು ಹಠ ಮಾಡುತ್ತಿದ್ದ ಅವರು ಈಗ ಗೌತಮಿ ಜೊತೆ ಮತ್ತೆ ಆಪ್ತವಾಗಿದ್ದಾರೆ. ಉಗ್ರಂ ಮಂಜು ಕಂಡರೆ ಉರಿದುಬೀಳುತ್ತಿದ್ದ ಅವರು ಈಗ ಮಂಜು ಜೊತೆಗೆ ಎಮೋಷನಲ್ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಮೊದಲಿನ ದಿನಗಳು ಮರುಕಳಿಸಿವೆ.
ಕೊನೇ ಹಂತದಲ್ಲಿ ಒಂದಾಗಿಯೇ ಆಡೋಣ ಎಂದು ಉಗ್ರಂ ಮಂಜು ಅವರು ಗೌತಮಿ ಮತ್ತು ಮೋಕ್ಷಿತಾಗೆ ಹೇಳಿದ್ದಾರೆ. ಮಿಡ್ ಮೀಕ್ ಎಲಿಮಿನೇಷನ್ ಇರುವುದರಿಂದ ಒಬ್ಬರು ಹೊರಗೆ ಹೋಗುವುದು ಖಚಿತ. ಅದನ್ನು ನೆನಪಿಸಿಕೊಂಡು ಮೋಕ್ಷಿತಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗೌತಮಿ ಮತ್ತು ಉಗ್ರಂ ಮಂಜು ಎದುರು ಮೋಕ್ಷಿತಾ ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಇದೇನಿದು ಹೊಸ ಡ್ರಾಮಾ ಎಂಬ ಅನುಮಾನ ಕೆಲವರಿಗೆ ಮೂಡಿದರೂ ಅಚ್ಚರಿ ಏನಿಲ್ಲ.
ಬಿಗ್‌ಬಾಸ್ ಸೀಸನ್ 11 ಪೂರ್ಣಗೊಳ್ಳಲು ಕೇಲವೇ ದಿನಗಳು ಬಾಕಿ ಇವೆ. ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ 8 ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಕಳೆದ ದಿನ ಎಪಿಸೋಡ್‌ನಲ್ಲಿ ಗೌತಮಿ ಜಾದವ್ ಮಿಡ್ ವೀಕ್ ಎಲಿಮಿನೇಷನ್ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಅದಾಗಿಲ್ಲ. ಇನ್ನೂ ಈ ವಾರಾಂತ್ಯಕ್ಕೆ ಧನ್‌ರಾಜ್, ಮೋಕ್ಷಿತಾ ಹಾಗೂ ಉಗ್ರಂ ಮಂಜು ಈ ಮೂವರಲ್ಲಿ ಇಬ್ಬರು ಮನೆಯಿಂದ ಹೊರ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರು ಹೊರಬರುತ್ತಾರೆ ಅನ್ನೋದು ಪಕ್ಕಾ ಆಗಿಲ್ಲ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಿಂದ ಈ ವಾರ ಮೂರು ಜನ ಸ್ಪರ್ಧಿಗಳು ಹೊರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಸೋಮವಾರದಿಂದ ಗ್ರ್ಯಾಂಡ್ ಫಿನಾಲೆ ಟಾಸ್ಕ್‌ಗಳು ಮನೆಯಲ್ಲಿ ಉಳಿದುಕೊಳ್ಳುವ 5 ಜನ ಸ್ಪರ್ಧಿಗಳ ನಡುವೆ ನಡೆಯಲಿವೆ. ಇನ್ನು ಕಿಚ್ಚ ಸುದೀಪ್ ಕೊಟ್ಟಿರುವ ಹಿಂಟ್ ಪ್ರಕಾರ ಮೋಕ್ಷಿತಾ, ಗೌತಮಿ, ಮಂಜು ಅವರು ಗೆಲ್ಲೋದು ಅನುಮಾನವಾಗಿದೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.