ಕೊನೆಗೂ ಕೋಟಿ ಒಡೆಯನ ಕೈ ಹಿಡಿದ ಮಾನ್ವಿತಾ ಕಾಮತ್; ಮೊದಲ ರಾತ್ರಿ ಯಾವ ದೇಶದಲ್ಲಿ ಗೊ‌ ತ್ತಾ

 | 
Uu

ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ ತಯಾರಿ ಹಲವು ದಿನಗಳಿಂದ ನಡೆಯುತ್ತಿತ್ತು. ಕಳೆದೊಂದು ತಿಂಗಳಿನಿಂದ ಕನ್ನಡ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದರು. ನಿನ್ನೆ ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಕಾಮತ್ ಹಸೆಮಣೆ ಏರಿದ್ದಾರೆ.

ಅಂದ್ಹಾಗೆ, ಮಾನ್ವಿತಾ ಕಾಮತ್ ಸಪ್ತಪದಿ ತುಳಿದಿರುವ ಹುಡುಗನ ಹೆಸರು ಅರುಣ್ ಕುಮಾರ್. ಐಟಿ ಪ್ರೊಫೆಶನಲ್ ಕಮ್ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ಅರುಣ್ ಜೊತೆ ಇತ್ತೀಚೆಗೆ ಮಾನ್ವಿತಾ ಕಾಮತ್ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಈಗ ತನ್ನ ಬೆಳೆದ ಊರು ಕಳಸದಲ್ಲಿ ಮದುವೆ ಆಗಬೇಕು ಎಂದು ಇಷ್ಟ ಪಟ್ಟಿದ್ದರು. ಅದರಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಈ ಸೆಲೆಬ್ರೆಟಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮದುವೆ ಮಾನ್ವಿತಾ ಕಾಮತ್ ಮದುವೆ ನಡೆದಿರೋದು ವಿಶೇಷ.

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಮದುವೆ ನೋಡಬೇಕು ಅನ್ನೋದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಿಲಿಲ್ಲ. ಹೀಗಾಗಿ ಅಮ್ಮನ ಆಸೆಯಂತೆಯೇ ಮಾನ್ವಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತಿ ಅರುಣ್ ಕುಮಾರ್ ತಮ್ಮ ಬಾಳಲ್ಲಿ ಬಂದಿದ್ದು ಹೇಗೆ? ಅನ್ನೋದನ್ನು ಮಾನ್ವಿತಾ ಮದುವೆ ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.