ಡಿಕೆಶಿಗೆ ಸಾಮೂಹಿಕ ರಾಜೀನಾಮೆ ಶಾ‌.ಕ್

 | 
ಸ್ರ್

ಕಾಂಗ್ರೆಸ್ ಮುಖಂಡ ರು ಮತ್ತು ಕಾರ್ಯಕರ್ತರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಆಶ್ಚರ್ಯ ವಾದ್ರೂ ಇದು ಸತ್ಯ. ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಬೆಂಬಲಿಗನ ಕಾಟಕಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಮೂಹಿಕ ರಾಜೀನಾಮೆ ನೀಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಕಾರ್ಯಕರ್ತರು ಪತ್ರ ಬರೆದಿದ್ದಾರೆ.

ಜಮಾಲ್ ಖಾನ್ ಎನ್ನುವ ವ್ಯಕ್ತಿ ಸದ್ಯ ಕ್ಷೇತ್ರದ ಕಾಂಗ್ರೆಸ್​ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪ ಮಾಡಲಾಗಿದೆ. ಶಾಸಕ ರಿಜ್ವಾನ್ ಅರ್ಷದ್​ ಅವರ ಸೋದರಿಯ ಮಗ ಎಂದು ಜಮಾಲ್ ಖಾನ್ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾನೆ. ಆರ್​.ಟಿ ನಗರದ ಈ ವ್ಯಕ್ತಿ ನಮ್ಮ ಕ್ಷೇತ್ರದಲ್ಲಿ ಬಂದು ಏಕೆ ಅಧಿಕಾರ ಮಾಡುತ್ತಿದ್ದಾನೆ. ಜಮಾಲ್ ಅಪ್ಪಣೆ ಇಲ್ಲದೇ ಶಿವಾಜಿನಗರದಲ್ಲಿ ಏನೂ ನಡೆಯಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ.

ಜಮಾಲ್ ಖಾನ್ ವಿರುದ್ಧ ಕಿಡಿ ಕಾರಿರುವ ಕಾರ್ಯಕರ್ತರು, ಶಾಸಕ ರಿಜ್ವಾನ್ ಅರ್ಷದ್​ ಸಂಬಂಧಿ ಹೇಳುವ ಈತ ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದಾನೆ. ಎಲ್ಲವನ್ನು ಈತನೇ ನೋಡಿಕೊಳ್ಳುವುದರಿಂದ ಎಂಎಲ್​ಎ ಕಚೇರಿಗೆ ಬರುವುದಕ್ಕೂ ಕಷ್ಟವಾಗುತ್ತಿದೆ. ಈತ ಯಾರೆಂಬುದು ಗೊತ್ತಿಲ್ಲ. ಜಮಾಲ್ ಖಾನ್​ನನ್ನ ಮುಂದಿಟ್ಟುಕೊಂಡು ಶಾಸಕರು ವ್ಯವಹಾರ ಮಾಡುತ್ತಿದ್ದಾರಾ ಎಂದು ಕಾಂಗ್ರೆಸ್​ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆಯುವ ಮೂಲಕ ಸಮೂಹಿಕ ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ.

ಜಮಾಲ್ ಖಾನ್ ಶಿವಾಜಿನಗರ ನಿವಾಸಿ ಅಲ್ಲ, ವೋಟರ್ ಕೂಡ ಅಲ್ಲ. ಆದ್ರೂ ಜಮಾಲ್ ಖಾನ್ ಗಮನಕ್ಕಿಲ್ಲದೆ ಯಾವ ಕೆಲಸವೂ ನಡೆಯಲ್ಲ. ಕ್ಷೇತ್ರದ ಯಾವುದೇ ಇಲಾಖೆಗೆ ಅಧಿಕಾರಿ ಬರಬೇಕಂದ್ರೂ ಈತನದ್ದೇ ನಿರ್ಧಾರ. ಪೊಲೀಸ್, ಬಿಬಿಎಂಪಿ, ಹೆಲ್ತ್ ಡಿಪಾರ್ಟ್​ಮೆಂಟ್​ನಲ್ಲಿ ಈತನದ್ದೇ ಹುಕುಂ.ಬಿಲ್ಡಿಂಗ್ ನಿರ್ಮಾಣ, ಒಎಫ್​ಸಿ ಕೇಬಲ್ ಅಳವಡಿ, ಗಾರ್ಬೇಜ್ ಟೆಂಡರ್. ಪ್ರಾಪರ್ಟಿ ಲಿಟಿಗೇಷನ್ ಸೇರಿ ಎಲ್ಲ ಕೆಲಸಗಳೂ ಜಮಾಲ್ ಗಮನಕ್ಕೆ ತರಬೇಕು.

ಯಾರಾದ್ರೂ ಆಗಲ್ಲ ಅಂತ ಎದುರಾದ್ರೆ ನಾನು ರಿಜ್ವಾನ್ ಅಕ್ಕನ ಮಗನೆಂದು ಬೆದರಿಕೆ ಆರ್​.ಟಿ. ನಗರದ ವ್ಯಕ್ತಿ ಇಲ್ಲಿಗೆ ಬಂದು ಅಧಿಕಾರ ಚಲಾಯಿಸುತ್ತಿರುವ ಆರೋಪ. ಪೋಲಿ ಪಟಾಲಂ ಗ್ಯಾಂಗ್​ನ ಕಟ್ಟಿಕೊಂಡು ಎಲ್ಲರಿಗೂ ಬೆದರಿಕೆ ಹಾಕ್ತಾನೆಂದು ಆರೋಪ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.