ಮಾಸ್ಟರ್ ಆನಂದ್ ಕುಟುಂಬಕ್ಕೆ ಬ.ರಸಿಡಿಲು, ಸ್ವಂತ ಮಗನ ಅವಸ್ಥೆ ನೋಡಿ ಮಾಧ್ಯಮದ ಮುಂದೆ ಅಳು

 | 
B

ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್ ಹುಟ್ಟುಹಬ್ಬವನ್ನು ಈ ವರ್ಷ ಜೀ ಕುಟುಂಬ ಹೊಸ ವರ್ಷದ ಸಂಭ್ರಮ ಮಹಾಸಂಗಮದಲ್ಲಿ ಆಚರಿಸಲಾಗಿದೆ. ಇನ್ನಿತ್ತರ ಕಿರುತೆರೆ ಕಲಾವಿದರು ವೇದಿಕೆ ಮೇಲೆ ಆಗಮಿಸಿ ಆನಂದ್ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಆನಂದ್‌ಗೆ ಖುಷಿಯಾಗಬೇಕು ಎಂದು ಅಪ್ಪ ಐ ಲವ್ ಯು ಅನ್ನೋ ಹಾಡಿಗೆ ಪುತ್ರನ ಜೊತೆಗಿರುವ ವಿಡಿಯೋ ಪ್ಲೇ ಮಾಡಿದ್ದಾರೆ. ಇದನ್ನು ನೋಡಿ ಆನಂದ್ ಕಣ್ಣೀರಿಟ್ಟಿದ್ದಾರೆ.

ನನ್ನ ಮಗ ಓದುತ್ತಿರುವುದು ಹಾಸ್ಟಲ್‌ನಲ್ಲಿ ಹೀಗಾಗಿ ಆತನನ್ನು ಭೇಟಿ ಮಾಡಲು ತುಂಬಾ ಕಡಿಮೆ ಸಮಯ ಸಿಗುತ್ತದೆ ಎಂದು ಆನಂದ್ ಮಾತನಾಡುತ್ತಿದ್ದಂತೆ ಪುತ್ರ ಬರೆದ ಪತ್ರವನ್ನು ಕೈಗೆ ನೀಡುತ್ತಾರೆ. ಪತ್ರ ನೋಡುತ್ತಲೇ ಆನಂದ್ ಭಾವುಕರಾಗುತ್ತಾರೆ. ಹೌದು ಮಾಸ್ಟರ್ ಆನಂದ್ ಬಹಳ ಕಷ್ಟಪಟ್ಟು ಇಂದು ಈ ಸ್ಥಾನಕ್ಕೆ ಬಂದವರು ತನ್ನ ಕಷ್ಟ ಮಕ್ಕಳಿಗೆ ಬರಬಾರದು ಎನ್ನುವುದು ಅವರ ಯೋಚನೆ ಹಾಗಾಗಿ ಮಗನನ್ನು ಹಾಸ್ಟೆಲ್ ಒಂದರಲ್ಲಿ ಓದಲು ಇಟ್ಟಿದ್ದಾರೆ.

ಹರಿ ಓಂ ಅಪ್ಪ. ಹುಟ್ಟುಹಬ್ಬದ ಶುಭಾಶಯಗಳು.ನಾನು ನಿಮ್ಮ ಜೊತೆ ಸಮಯ ಕಳೆಯುತ್ತಿದ್ದೆ. ಗುರುಕುಲಕ್ಕೆ ಬಂದ ಕಾರಣದಿಂದ ನಿಮ್ಮ ಜೊತೆ ಸಮಯ ಕಳೆಯಲಾಗಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಇರುತ್ತಿದ್ದೆ. ನನಾಉ ಗುರುಕುಲದ ಅಧ್ಯಾಯನ ಮುಗಿಯುವವರೆಗೂ ನಿಮ್ಮ ಹುಟ್ಟುಹಬ್ಬಕ್ಕೆ ಇರಲಾಗುವುದಿಲ್ಲ. ಹಾಗೆ ನಿಮಗೆ ಹೊಸ ವರ್ಷದ ಶುಭಾಶಯಗಳು. ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಮನೆಯಲ್ಲಿ ನಾನು ನಿಮ್ಮ ಜೊತೆ ವಿಡಿಯೋ ಗೇಮ್ಸ್‌ ಆಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗ ಸಿಗುವಿದಿಲ್ಲ. ಐ ಲವ್ ಯು ಅಪ್ಪ ಎಂದು ಆನಂದ್ ಪುತ್ರ ಪತ್ರ ಬರೆದಿದ್ದಾರೆ.

ನಾವು ಗಟ್ಟಿಯಾಗಿರಬೇಕು. ಏನಂದ್ರೆ ಇದೆಲ್ಲಾ ವಯೋಧರ್ಮದ ಆಸೆಗಳು ಅಂತ ಹೇಳುತ್ತೀವಿ. ಅ ವಯಸ್ಸಿನಲ್ಲಿ ಅವನಿಗೆ ಈ ರೀತಿ ಆಸೆಗಳು ಇರುತ್ತದೆ..ಅವನ ಜೊತೆ ವಿಡಿಯೋ ಆಡುತ್ತ ಸಮಯ ಕೊಡಬಹುದು ಇಲ್ಲ ಅಂತಿಲ್ಲ ಆದರೆ ಅವನ ಒಳ್ಳೆಯ ಭವಿಷ್ಯಕ್ಕೆ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅವನು ಚೆನ್ನಾಗಿ ಓದಬೇಕು. ಖುಷಿ ಏನಂದರೆ ಅತನ ಬರೆವಣಿಗೆ ಇಷ್ಟೊಂದು ಚೆನ್ನಾಗಿ ಆಗಿದೆ. ಹ್ಯಾಂಡ್ ರೈಟಿಂಗ್ ಸುಧಾರಿಸಿದೆ ಅದು ಖುಷಿ ಆಯ್ತು ನನಗೆ.

ಮಿಸ್ಸಿಂಗ್ ಏನು ಇಲ್ಲ. ನಾವು ಯಾವಾಗ ಸಮಯ ಮಾಡಿಕೊಳ್ಳುತ್ತೀವಿ ಅವಾಗ ಬರ್ತಡೇ ಯಾವಾಗ ಸಿಗುತ್ತೀವಿ ಅದೇ ಹೊಸ ವರ್ಷ ಕಳೆಯಲು ಸಮಯ ಸಿಕ್ಕರೆ ಅದೇ ವಿಡಿಯೋ ಗೇಮ್, ಅಲ್ಲಿ ತಿನ್ನೋ ಬನ್‌ನ ಬರ್ಗರ್ ಅಂದುಕೊಂಡರೆ ಜೀವನ ಚೆನ್ನಾಗಿರುತ್ತದೆ ಎಂದು ಆನಂದ್ ಮಾತನಾಡಿದ್ದಾರೆ. ಮನೆಯಲ್ಲಿ ಎರಡು ಮಕ್ಕಳಿದ್ದಾಗ ನಾರ್ಮಲ್ ಆಗಿ ಹೊಲಿಸುತ್ತಾರೆ. ಅದರಲ್ಲೂ ಮಗಳು ಸ್ವಲ್ಪ ಹೆಸರು ಮಾಡಿದ್ದಾರೆ. 

ಈ ಹೊಲಿಕೆ ಒಂದು ಕರೆ ಆದ್ರೆ ಕೆಲವರು ನನಗೆ ಹೇಳುತ್ತಾರೆ ಆಕೆ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಆಕ್ಟಿಂಗ್‌ಗೆ ಕಳುಹಿಸುತ್ತೀನಿ ಅದು ಇದು ಅನ್ನೋ ತರ ಮಾತನಾಡುತ್ತಾರೆ. ಹೀಗೆ ಮಾತನಾಡುವವರು ನನ್ನ ಮಗನನ್ನು ನೋಡಿ ತಿಳಿದುಕೊಳ್ಳಬೇಕು ನನ್ನೊಳಗೆ ಒಬ್ಬ ಜವಾಬ್ದಾರಿ ಇರುವ ತಂದೆ ಇದ್ದಾನೆ ಎಂದು. ಎಲ್ಲಾದಕ್ಕಿಂತ ಮುಖ್ಯವಾಗಿ ನನ್ನ ಮಗಳು ಬಾಲನಟಿ ಆಗುವ ಮುಂಚೆ ನಾನು ಒಬ್ಬ ಬಾಲ ಕಲಾವಿದ ಆಗಿದ್ದೆ ಅನ್ನೋದು ಮರೆತು ಸಲಹೆ ಕೊಡುತ್ತಾರೆ. 

ಅದು ಬಹಳ ನೋವು ಕೊಡುತ್ತದೆ. ವಿದ್ಯಾಭ್ಯಾಸಕ್ಕೆ ಮೊದಲಿಂದಲ್ಲೂ ನಾನು ಆಧ್ಯತೆ ಕೊಟ್ಟಿರುವೆ...ಹಾಗೆ ನನ್ನ ಮಗಳಿಗೂ ಸಹ ನಾನು ಕೊಡುವೆ. ನನ್ನ ಮಗನಿಗೆ ಈಗ ಕೊಡುತ್ತಿರುವೆ. ಎಲ್ಲವೂ ಭಗವಂತನ ಇಚ್ಛೆ ಎಂದ ಅನಂದ್ ಬೇಸರದಿಂದ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.