ಡಿವೋರ್ಸ್ ಬಗ್ಗೆ ಸ್ಪಷ್ಟತೆ ಕೊಟ್ಟ ಮಾಸ್ಟರ್ ಆನಂದ್ ಪತ್ನಿ, ಇದೆಲ್ಲಾ ಸಹಜ ಬಿಡಿ

 | 
Nf
ಕನ್ನಡ ಚಿತ್ರರಂಗದಲ್ಲಿ ಗ್ಯಾಸಿಪ್ ಗೆ ಕಡಿಮೆಯಿಲ್ಲ.ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಇತ್ತೀಚಿಗೆ ಒಂದು ಪ್ರೋಮೋ ವಿಡಿಯೋ ಅಪ್ಲೋಡ್‌ ಮಾಡಲಾಗಿತ್ತು. ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್‌ ಹೊಂದಿದ್ದ ಈ ಪ್ರೋಮೋ ಸಖತ್‌ ವೈರಲ್‌ ಆಗಿತ್ತು. ಇದೀಗ ನಯನ - ಯಶಸ್ವಿನಿ ಮಾತುಕಥೆಯ ಮತ್ತೊಂದು ಪ್ರೋಮೋ ಬಿಡುಗಡೆಯಾಗಿದೆ.
ಯಶಸ್ವಿನಿ ಮಾಸ್ಟರ್‌ ಆನಂದ್ ತಮ್ಮದೇ ಆದ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಕಿರುತೆರೆ ಕಲಾವಿದರು, ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳು ಸೇರಿದಂತೆ ವಿಶೇಷ ಅತಿಥಿಗಳನ್ನೇ ಕರೆದು ಸಂದರ್ಶನ ನಡೆಸುತ್ತಿದ್ದಾರೆ. ಸದ್ಯ ಯಶಸ್ವಿನಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಇತ್ತೀಚಿಗೆ ಕಾಮಿಡಿ ಕಿಲಾಡಿಗಳು ನಯನ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು.
ಈ ಸಂದರ್ಶನದ ವಿಡಿಯೋಗೆ ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್‌ ನೀಡಲಾಗಿತ್ತು. ಟೈಟಲ್‌ನಲ್ಲೇ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದ್ದ ನಯನ ಸಂದರ್ಶನದ ವಿಡಿಯೋದಲ್ಲಿ ಯಶಸ್ವಿನಿ ಮಾಸ್ಟರ್ ಆನಂದ್ ಹಾಗೂ ಕಾಮಿಡಿ ಕಿಲಾಡಿಗಳು ನಯನ ನಗುವಿನ ಹೊಳೆಯನ್ನೇ ಹರಿಸಿದ್ದಾರೆ. ಅಲ್ಲದೇ ಕನ್ನಡಿಗರ ಮೆಚ್ಚಿನ ನಟ,ನಿರೂಪಕ ಮಾಸ್ಟರ್‌ ಆನಂದ್ ಅವರ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.
ಇದೀಗ ನಯನ ಸಂದರ್ಶನದ ಮತ್ತೊಂದು ಪ್ರೋಮೋ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ನಯನ, 'ನಿಜ ಹೇಳಲಾ ಈ ಆನಂದ್‌ ಸರ್‌ ದೇವರಿಗೂ ಬೇಜಾರು ಆಗುವಷ್ಟು ದೇವರ ತಲೆ ತಿನ್ನುತ್ತಾರೆ. ಅವರು ನನ್ನನ್ನೇ ಬದಲಾಯಿಸಲು ಬರುತ್ತಾರೆ ಅದಕ್ಕೆ ನಾನು ದೇವರು ನೀವು ದೂರದಲ್ಲೇ ಇರು ಅಂತಾ ಇದ್ದೀನಿ ಎಂದು ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.