ಸೌಜನ್ಯ ಕೊ.ಲೆ ಕೇಸ್ ನಲ್ಲಿ ಮತ್ತೊಂದು ಸತ್ಯ ಹೊರಹಾಕಿದ ಮಟ್ಟಣ್ಣವರ್

 | 
Jd

ದಿನಗಳು ಕಳೆದಂತೆಲ್ಲ ಸೌಜನ್ಯಾ ಕೇಸ್ ಹಲವು ಆಯಾಮಗಳನ್ನು ಹೊಂದುತ್ತಿದೆ. ಹೌದು ಈ ಹಿಂದೆ ಸೌಜನ್ಯಾ ಕೊಲೆ ಪ್ರಕರಣ ಸಂಬಂಧ ಹೆಚ್ಚುವರಿ ತನಿಖೆ ಪೂರ್ಣಗೊಳಿಸಿ ಸಿಐಡಿ ಪೊಲೀಸರು, ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬ ವರ್ಗದವರ ಮೇಲಿದ್ದ ಆರೋಪಕ್ಕೆ ಕ್ಲೀನ್‌ಚಿಟ್ ನೀಡಿದ್ದರು. 

ಈ ಹಿಂದೆ ನಡೆದ ಸಿಐಡಿ ತನಿಖೆ ಸಂದರ್ಭದಲ್ಲಿ ಲಭ್ಯವಾದ ಮಾಹಿತಿಗಳನ್ನೇ ಮತ್ತೊಮ್ಮೆ ಪ್ರಸ್ತಾಪಿಸಲಾಗಿದ್ದು, ಸೌಜನ್ಯಾ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಸಂತೋಷ್ ಕುಮಾರ್ ಕೊಲೆ ಮಾಡಿದ್ದಾನೆ ಎಂದು ಸಿಐಡಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದರು. ಪ್ರಗತಿಪರ ಸಂಘಟನೆಗಳು ಹಾಗೂ ಸೌಜನ್ಯಾ ಅವರ ಬಂಧುಗಳು ಆರೋಪಿಸಿದ ಪ್ರಕಾರ, ಈ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರಾದ ನಿಶ್ಚಲ್ ಜೈನ್ ಹಾಗೂ ಆತನ ಸ್ನೇಹಿತರ ಕೈವಾಡ ಇಲ್ಲ ಎಂದು ಸಿಐಡಿ ಅಭಿಪ್ರಾಯಪಟ್ಟಿತ್ತು.

ಏಕೆಂದರೆ ಘಟನೆ ನಡೆದ ಸಂದರ್ಭದಲ್ಲಿ ನಿಶ್ಚಲ್ ವಿದೇಶದಲ್ಲಿದ್ದರು. ಅವರು ವಿದೇಶಕ್ಕೆ ತೆರಳಿದ್ದಕ್ಕೆ ವೀಸಾ ದಾಖಲೆ, ವಿಮಾನ ಪ್ರಯಾಣದ ಟಿಕೆಟ್ ವಿವರ ಇತ್ಯಾದಿಗಳ ಜತೆಗೆ ಘಟನೆ ನಡೆದ ದಿನ ಅವರು ವಿದೇಶದಲ್ಲಿ ಬಳಕೆ ಮಾಡಿದ ಕ್ರೆಡಿಟ್ ಕಾರ್ಡ್ ವಿವರವನ್ನು ಸಿಐಡಿ ಸಂಗ್ರಹಿಸಿದ್ದರು. ಹೀಗಾಗಿ ಘಟನಾ ಸ್ಥಳದಲ್ಲಿ ಇಲ್ಲದ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿತ್ತು.

ಇದರ ಜತೆಗೆ ಪ್ರಗತಿಪರ ಸಂಘಟನೆಗಳು ಆರೋಪಿಗಳು ಎಂದು ಹೇಳಿದ್ದ ಮೂವರು ಯುವಕರನ್ನು ಸಿಐಡಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸಿ ಅವರಿಂದ ದಾಖಲೆ ಪಡೆದಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಕುಟುಂಬ ವರ್ಗದವರ ಪಾತ್ರವಿದೆ ಎಂಬ ಶಂಕೆ ವ್ಯಕ್ತವಾಗುವುದಕ್ಕೆ ಕಾರಣರಾದ ಶಾಲಾ ಶಿಕ್ಷಕಿಯೊಬ್ಬರು ವಿಚಾರಣೆ ಸಂದರ್ಭದಲ್ಲಿ ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿದ್ದರು.

ಘಟನೆಯನ್ನು ನಾನು ನೋಡಿಲ್ಲ. ಯಾರೋ ಹೇಳಿದ್ದನ್ನು ಕೇಳಿ ಈ ಮಾತನ್ನು ಆಡಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ. ವಿಚಿತ್ರವೆಂದರೆ ಮೊದಲು ನಡೆದ ಸಿಐಡಿ ತನಿಖೆ ಸಂದರ್ಭದಲ್ಲೂ ಇವರು ಪ್ರತಿಕೂಲ ಸಾಕ್ಷಿಯಾಗಿದ್ದರು. ಸ್ಥಳೀಯ ಪೊಲೀಸರ ಬಳಿ ಒಂದು ರೀತಿ ಹಾಗೂ ಸಿಐಡಿ ಅಧಿಕಾರಿಗಳ ಬಳಿ ಇನ್ನೊಂದು ರೀತಿ ಹೇಳಿಕೆ ನೀಡಿದ್ದರು. 

ಇದೀಗ ಈ ವಿಷಯ ಮುನ್ನೆಲೆಗೆ ಬಂದಿದ್ದು ಗಿರೀಶ್ ಮಟ್ಟಣ್ಣನವರ್ ಈ ಕುರಿತು ಮಾತನಾಡಿ ಹಾಗಿದ್ದರೆ ನಿಶ್ಚಲ್ ಜೈನ್ ಟಿಕೆಟ್ ನಂಬರ್ ಹಾಗೂ ಅವರು ಹೋಗಿರುವ ಜಾಗದ ಕುರಿತು ಮಾಹಿತಿ ನೀಡಿ ಅದನ್ನು ಬಿಟ್ಟು ಬ್ಲರ್ ಮಾಡಿ ತೋರಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ನಿಶ್ಚಲ್ ಜೈನ್ ಅಥವಾ ನಿಶ್ಚಲ್ ಹೆಗ್ಗಡೆ ಅವನ ಹೆಸರು ಏನಿದೆ ಎಂಬುದನ್ನು ಸಾಬೀತು ಪಡಿಸುವ ಹೊಣೆ ದೊಡ್ಡವರದು ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.