ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ; ಮಾಧ್ಯಮದ ಮುಂದೆ ಸ್ಪಷ್ಟತೆ ಕೊಟ್ಟು ಕಣ್ಣೀ ರು
ಮತ್ತೆ ಕಿರುತೆರೆಗೆ ಬರುತ್ತಿರುವ ಕೃಷ್ಣ ಲೀಲಾದ ಸುಂದರಿ. ನಟಿ ಮಯೂರಿ ಅವರು ನನ್ನ ದೇವ್ರು ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ಕನ್ನಡ ಕಿರುತೆರೆಗೆ 14 ವರ್ಷಗಳ ನಂತರದಲ್ಲಿ ನಟಿಯಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಿಂದ ಸಿನಿಮಾ, ತಾಯ್ತನ ಎಂದು ಬ್ಯುಸಿಯಿದ್ದ ಅವರೀಗ ಮತ್ತೆ ಕಿರುತೆರೆ ನಟಿಯಾಗಿ ಮಿಂಚಲು ರೆಡಿಯಾಗಿದ್ದಾರೆ.
ಹೀಗಿರುವಾಗ ಬೇರೆಯವರ ಜೀವನದಲ್ಲಿ ಏನಾಗುತ್ತದೆ ಎಂದು ಇಣುಕಿ ನೋಡುವ ಜನರಿಗೆ, ಕಾಮೆಂಟ್ ಮಾಡುವವರ ಬಗ್ಗೆ ಮಯೂರಿ ಅವರು ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿ ನಡೆದುಕೊಳ್ಳುವ ರೀತಿ ನೋಡಿ ಅವರ ವೈಯಕ್ತಿಕ ಲೈಫ್ ಹೇಗಿದೆ ಅಂತ ನಿರ್ಣಯಿಸಲಾಗುತ್ತದೆ. ಈ ಬಗ್ಗೆ ಮಾತನಾಡುವ ಮಯೂರಿ ಅವರು ನಾನು ಬೇರೆಯವರ ವಿಚಾರವನ್ನು ಕೇಳೋದಿಲ್ಲ, ಅದು ನನಗೆ ಬೇಕಾಗಿಲ್ಲ.
ಸೆಲೆಬ್ರಿಟಿಯಾಗಿದ್ದಕ್ಕೆ ಅವರ ಲೈಫ್ ಏನಾಗಿರಬಹುದು ಅಂತ ಎಂಬ ಕುತೂಹಲ ಇರುತ್ತದೆ. ಇವತ್ತು ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತದೆ. ಇದರ ಮಧ್ಯೆ ನಾವು ಯಾಕೆ ಬೇರೆಯವರ ಸಂಸಾರದ ಬಗ್ಗೆ ಯೋಚಿಸಬೇಕು? ನಾವು ನಮ್ಮ ಜೀವನದ ಬಗ್ಗೆ ಯೋಚಿಸಿದರೆ ಚೆನ್ನಾಗಿರುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ.
ಎಲ್ಲವೂ ಚೆನ್ನಾಗಿದೆ. ನಾನು ಆರಾಮಾಗಿದ್ದೇನೆ, ನನ್ನ ಡೆವಲೆಪ್‌ಮೆಂಟ್ ಹೇಗಿದೆ ಅಂತ ನೀವೆಲ್ಲರೂ ನೋಡುತ್ತಿದ್ದೀರಿ. ಮೆದುಳು, ಮನಸ್ಸು, ದೇಹ ಎಲ್ಲವೂ ಚೆನ್ನಾಗಿದೆ. ನಾನು ತುಂಬ ಖುಷಿಯಾಗಿದ್ದೇನೆ. ನನ್ನ ದಾಂಪತ್ಯ ಚೆನ್ನಾಗಿಲ್ಲ ಅಂತ ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಮಯೂರಿ ಅವರು ಹೇಳಿದ್ದಾರೆ. ಹುಬ್ಬಳ್ಳಿ ಮೂಲದ ನಟಿ ಮಯೂರಿ ಅವರು ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದರು.
ಜಯರಾಮ್ ಕಾರ್ತಿಕ್ ಅವರು ಈ ಧಾರಾವಾಹಿಯ ಹೀರೋ. ಇದು ಸೂಪರ್ ಹಿಟ್ ಧಾರಾವಾಹಿ. ಇಂದಿಗೂ ಜನರು ಈ ಸೀರಿಯಲ್ ಬಗ್ಗೆ ಮಾತನಾಡುತ್ತಾರೆ. ಈ ಧಾರಾವಾಹಿ ನಂತರದಲ್ಲಿ ಮಯೂರಿ ಅವರು ಸಿನಿಮಾದತ್ತ ಪ್ರಯಾಣ ಮಾಡಿ, ಒಂದಷ್ಟು ಚಿತ್ರಗಳಲ್ಲಿ ನಟಿಸಿದರು. ಆ ನಂತರ ಅವರು ಕೊರೊನಾ ಸೋಂಕು ಬಂದು ಲಾಕ್‌ಡೌನ್ ಆದ ಸಮಯದಲ್ಲಿ ಮದುವೆಯಾದರು, ಆಮೇಲೆ ಆರವ್ ಎಂಬ ಮಗ ಕೂಡ ಜನಿಸಿದ್ದಾನೆ. ಮದುವೆ, ಮಗ ಎಂದು ಬ್ಯುಸಿಯಿದ್ದ ಮಯೂರಿ ಈಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.