ತಮಿಳು ಹುಡುಗನ ಜೊತೆ‌ ಸಿಹಿಸುದ್ದಿ ಕೊಟ್ಟ ಮೇಘಾ‌‌ ಶೆಟ್ಟಿ, ಕನ್ನಡಿಗರಿಗೆ ‌ಬಾಡೂಟ

 | 
Nx
ಇನ್ನೇನು ಮೇಘಾ ಶೆಟ್ಟಿ ನಿರ್ಮಾಪಕಿ ಆದ್ರು ಇನ್ಮೇಲೆ ನಟಿಸಲ್ಲ ಅಂದು ಕೊಂಡವರಿಗೆ ಶಾಕ್ ನೀಡಿದ್ದಾರೆ. ಹೌದು ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಕನ್ನಡದಲ್ಲೇ ಹಲವು ಅವಕಾಶಗಳು ಇರುವಾಗಲೇ ತಮಿಳಿನಲ್ಲಿ ಬಿಗ್ ಆಫರ್‌ವೊಂದು ಸಿಕ್ಕಿದೆ. 
ತಮ್ಮ ಅದ್ಭುತ ನಟನೆ ಮೂಲಕ ನಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಇನ್ಸ್ಟಾಗ್ರಾಮ್​ ನಲ್ಲಿ ಮೇಘಾ ಶೆಟ್ಟಿ 1.2 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ತಮ್ಮ ಫ್ಯಾನ್ಸ್​ ಜೊತೆ ಟಚ್​​ನಲ್ಲಿರುವ ಮೇಘಾ, ಆಗಾಗ ಫೋಟೋ ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ
ತಮಿಳಿನ ನಟ ಕಮ್ ನಿರ್ದೇಶಕ ಶಶಿಕುಮಾರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಮೇಘಾ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಾಲಿವುಡ್‌ಗೆ ಮತ್ತೋರ್ವ ಕನ್ನಡತಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ಜರುಗಿದೆ. ಈ ಪ್ರಾಜೆಕ್ಟ್ ಕುರಿತು ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಸದ್ಯ ಹೊಸ ಬಗೆಯ ಪಾತ್ರ ಹಾಗೂ ಕಥೆಗೆ ಮೇಘಾ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕನ್ನಡದ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ. ಅಂದಹಾಗೆ, ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ಅನಿರುದ್ಧಗೆ ನಾಯಕಿಯಾಗಿ ಕಿರುತೆರೆ ಪ್ರವೇಶಿಸಿದರು. ಆ ನಂತರ `ತ್ರಿಬಲ್ ರೈಡಿಂಗ್’, ದಿಲ್ ಪಸಂದ್, ಕೈವ ಸಿನಿಮಾಗಳಲ್ಲಿ ಮೇಘಾ ನಟಿಸಿದ್ದಾರೆ.
ಮೇಘಾ ಶೆಟ್ಟಿ ಇನ್ನೂ ಎರಡು ಚಿತ್ರ ಒಪ್ಪಿಕೊಂಡಿದ್ದಾರೆ. ಗ್ರಾಮಾಯಣ ಹಾಗೂ ಚೀತಾ ಚಿತ್ರದಲ್ಲೂ ಮೇಘಾ ಇದ್ದಾರೆ. ಇಷ್ಟೆಲ್ಲ ಸಿನಿಮಾಗಳು ಇದ್ದರೂ ಹೆಚ್ಚಿನ ಸಮಯವನ್ನ ಇದೀಗ ಜಿಮ್ ಅಲ್ಲಿಯೇ ಕಳೆಯುತ್ತಿದ್ದಾರೆ. ಇತ್ತೀಚಿಗೆ ನಟಿ  ವರ್ಕ್‌ಟ್ ವಿಡಿಯೋವನ್ನು ಶೇರ್ ಮಾಡಿದ್ರು.ಕನ್ನಡ ಕಿರುತೆರೆ ಮೂಲಕ ಬೆಳ್ಳಿತೆರೆಗೆ ಬಂದ ಅಪ್ಪಟ ಕನ್ನಡದ ಹುಡುಗಿ ಮೇಘಾ ಶೆಟ್ಟಿ  ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.